ಬೆಂಗಳೂರು: ಇಂದಿರಾನಗರ ಸಿಎಂಎಚ್ ರಸ್ತೆಯಲ್ಲಿನ ವಾಣಿಜ್ಯ ಸಮುಚ್ಚಯವೊಂದರಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡು ಕಟ್ಟಡದಲ್ಲಿ ಸಿಲುಕಿದ್ದ ಒಂದೇ ಕುಟುಂಬದ ಐವರನ್ನು ಪೊಲೀಸರು ಸ್ಥಳೀಯರ ನೆರವಿನಿಂದ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ್ದಾರೆ.

ಸಿಎಂಎಚ್ ರಸ್ತೆಯ 13ನೇ ಅಡ್ಡರಸ್ತೆಯಲ್ಲಿ ಮಹಾವೀರ್ ಚಂದ್ ಎಂಬುವರಿಗೆ ಸೇರಿದ ಎರಡು ಅಂತಸ್ತಿನ ವಾಣಿಜ್ಯ ಸಮುಚ್ಚಯವಿದೆ. ಆ ಕಟ್ಟಡದ ನೆಲ ಅಂತಸ್ತಿನಲ್ಲಿ ರಿಲಯನ್ಸ್ ಫ್ರೆಶ್ ಮಳಿಗೆ ಇದೆ. ಒಂದನೇ ಅಂತಸ್ತಿನಲ್ಲಿ ಪೀಠೋಪಕರಣಗಳ ಮಳಿಗೆ ಆರಂಭಿಸುವ ಪ್ರಯತ್ನ ನಡೆದಿತ್ತು. ಎರಡನೇ ಅಂತಸ್ತಿನಲ್ಲಿ ಮಹಾವೀರ್ ಅವರ ಮನೆ ಇದೆ.

ಮಹಾವೀರ್ ಮತ್ತು ಕುಟುಂಬ ಸದಸ್ಯರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ಕಟ್ಟಡದ ಒಂದನೇ ಅಂತಸ್ತಿನಲ್ಲಿ ಪೀಠೋಪಕರಣಗಳಿಗೆ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು. ಸ್ವಲ್ಪ ಸಮಯದಲ್ಲೇ ಬೆಂಕಿಯ ಪ್ರಮಾಣ ಹೆಚ್ಚಾಗಿ ದಟ್ಟ ಹೊಗೆ ಆವರಿಸಿತು.

ಇದನ್ನು ಗಮನಿಸಿದ ಮಹಾವೀರ್, ಅವರ ಪತ್ನಿ ಜಮುನಾ, ಪುತ್ರರಾದ ಕಿರಣ್ ಮತ್ತು ಪ್ರದೀಪ್ ಅವರು ಮೆಟ್ಟಿಲುಗಳ ಮೂಲಕ ಕಟ್ಟಡದಿಂದ ಕೆಳಗಿಳಿದು ಬಂದರು. ಮಹಾವೀರ್ ಅವರ ಸೊಸೆಯಂದಿರಾದ ಕೇಸರ್, ಕುಸುಮ್, ಮೊಮ್ಮಕ್ಕಳಾದ ಮೂರೂವರೆ ವರ್ಷದ ಧವನ್, ಎರಡೂವರೆ ವರ್ಷದ ದಿಶನ್ ಮತ್ತು ಎಂಟು ತಿಂಗಳ ಮಗು ಪಲಕ್ ಕಟ್ಟಡದಲ್ಲಿ ಸಿಲುಕಿಕೊಂಡರು.

ಕೇಸರ್ ಹಾಗೂ ಕುಸುಮ್ ಅವರು ಮಕ್ಕಳನ್ನು ಎತ್ತಿಕೊಂಡು ಮೆಟ್ಟಿಲುಗಳ ಮೂಲಕ ಕೆಳಗಿಳಿಯಲು ಪ್ರಯತ್ನಿಸಿದರೂ ಬೆಂಕಿಯ ಪ್ರಮಾಣ ಹೆಚ್ಚಾಗಿದ್ದರಿಂದ ಸಾಧ್ಯವಾಗಲಿಲ್ಲ. ನಂತರ ಅವರು ಮಕ್ಕಳೊಂದಿಗೆ ಕಟ್ಟಡದ ಮಹಡಿಗೆ (ಟೆರೆಸ್) ಹೋಗಿ ನಿಂತರು.

ಸ್ಥಳೀಯರು ಈ ಬಗ್ಗೆ ಪೊಲೀಸ್ ಠಾಣೆಗೆ ಹಾಗೂ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಬಂದ ಇಂದಿರಾನಗರ ಪೊಲೀಸರು ಹಾಗೂ ಸ್ಥಳೀಯರು, ಮಹಾವೀರ್ ಅವರ ಕಟ್ಟಡದ ಪಕ್ಕದಲ್ಲೇ ಇರುವ ಮತ್ತೊಂದು ವಾಣಿಜ್ಯ ಕಟ್ಟಡದ ಮಹಡಿಗೆ ತೆರಳಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಪೊಲೀಸರು ಮತ್ತು ಸ್ಥಳೀಯರು ಏಣಿ ಮೂಲಕ ಮಹಾವೀರ್ರವರ ಕಟ್ಟಡದ ಮಹಡಿಗೆ ಹೋಗಿ ಕೇಸರ್, ಕುಸುಮ್ ಹಾಗೂ ಮಕ್ಕಳನ್ನು ಒಬ್ಬೊಬ್ಬರನ್ನಾಗಿ ಪಕ್ಕದ ಕಟ್ಟಡದ ಮಹಡಿಗೆ ಕರೆತಂದು ಪ್ರಾಣಾಪಾಯದಿಂದ ಪಾರು ಮಾಡಿದರು.

`ಮಕ್ಕಳೊಂದಿಗೆ ಕೆಳಗಿಳಿದು ಬರಲು ಪ್ರಯತ್ನಿಸಿದರೂ ಬೆಂಕಿಯ ಜ್ವಾಲೆ ಹೆಚ್ಚಾಗಿದ್ದರಿಂದ ಸಾಧ್ಯವಾಗಲಿಲ್ಲ. ಏನು ಮಾಡಬೇಕೆಂದು ತಿಳಿಯದೆ ಮಕ್ಕಳೊಂದಿಗೆ ಮಹಡಿಗೆ ಹೋಗಿ ನಿಂತೆವು. ಸಕಾಲಕ್ಕೆ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ನೆರವಿನಿಂದ ನಮ್ಮನ್ನು ಪ್ರಾಣಾಪಾಯದಿಂದ ಪಾರು ಮಾಡಿದರು~ ಎಂದು ಕುಸುಮ್ `ಪ್ರಜಾವಾಣಿ~ಗೆ ತಿಳಿಸಿದರು.

`ಘಟನೆ ಸಂಬಂಧ ಮಧ್ಯಾಹ್ನ 3.14ಕ್ಕೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಬಂತು. 16 ವಾಹನಗಳಲ್ಲಿ ಸ್ಥಳಕ್ಕೆ ತೆರಳಿ ಅರ್ಧ ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು. ಕಟ್ಟಡದಲ್ಲಿ ಅಗ್ನಿನಂದಕ ಸಲಕರಣೆಗಳು ಇರಲಿಲ್ಲ. ಅಲ್ಲದೇ, ಅಗ್ನಿ ಅನಾಹುತ ತಡೆಗೆ ಸೂಕ್ತ ಕ್ರಮಗಳನ್ನು ಸಹ ಕೈಗೊಂಡಿಲ್ಲ~ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ತಾಂತ್ರಿಕ ನಿರ್ದೇಶಕ ಹಂಪಗೋಳ್ ಹೇಳಿದರು.

ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಈ ಅವಘಡ ಸಂಭವಿಸಿರಬಹುದು. ಘಟನೆಯಲ್ಲಿ ಪೀಠೋಪಕರಣ ಭಸ್ಮವಾಗಿವೆ ಹಾಗೂ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.