ಮೈಸೂರು: ‘ಆರೋಗ್ಯ ವಿಮಾ ಯೋಜನೆ ವ್ಯಾಪ್ತಿಗೆ ಕಟ್ಟಡ ಕಾರ್ಮಿಕರು ಬರಲಿದ್ದಾರೆ. ಕಾರ್ಮಿಕರಿಗೆ ಉಚಿತ ಆರೋಗ್ಯ ವಿಮಾ ಕಾರ್ಡ್ಗಳನ್ನು ಜೂ.1ರಿಂದ ವಿತರಿಸಲಾಗುವುದು’ ಎಂದು ವೈದ್ಯಕೀಯ ಸಚಿವ ಎಸ್. ಎ.ರಾಮದಾಸ್ ಇಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಆರ್.ಎಸ್. ನಾಯ್ಡು ನಗರದ ಕೆ.ಎಂ. ವೃತ್ತದಲ್ಲಿ ಭಾನುವಾರ ಏರ್ಪಡಿಸಿದ್ದ ‘ಕಾರ್ಮಿಕರ ದಿನಾಚರಣೆ ಮತ್ತು ನುರಿತ ಕಾರ್ಮಿಕರಿಗೆ ಸನ್ಮಾನ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಟ್ಟಡ ಕಾರ್ಮಿಕರನ್ನು ಸಹ ಸರ್ಕಾರ ಆರೋಗ್ಯ ವಿಮಾ ವ್ಯಾಪ್ತಿಗೆ ಸೇರಿಸುತ್ತಿದೆ. ಆದರೆ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿಸುವ ವಾಗ್ದಾನ ಮಾಡಬೇಕು. ಬಹುತೇಕ ಕಾರ್ಮಿಕರ ಮಕ್ಕಳು ವಿದ್ಯಾವಂತರಲ್ಲ. ವಿದ್ಯಾವಂತರಾದರೆ ಸಮಾಜದಲ್ಲಿ ಯಾವುದಾದರೊಂದು ಉದ್ಯೋಗ ಗಿಟ್ಟಿಸಿ ಗೌರವಯುತ ಜೀವನ ನಡೆಸಬಹುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.