ಸೋಮವಾರ, ಮೇ 16, 2022
27 °C
ಇಟಗಾ: ರೈತರಿಂದ ಓರಿಯಂಟ್ ಸಿಮೆಂಟ್ ಕಂಪೆನಿಗೆ ಮುತ್ತಿಗೆ

ಕಟ್ಟಡ ನಿರ್ಮಾಣ ಕಾಮಗಾರಿ ಬಂದ್: ಉದ್ರಿಕ್ತ ಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ರೈತರ ಭೂಮಿಗೆ ನ್ಯಾಯಯುತ ಬೆಲೆ ಕೊಡಬೇಕು,ರೈತರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರೂ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿ ಬಂದ್ ಮಾಡುವಂತೆ ತಹಶೀಲ್ದಾರ್ ಆದೇಶ ಹೊರಡಿಸಿದ್ದರೂ ಕಂಪೆನಿ ಆಡಳಿತ ಕಾಮಗಾರಿ ಮುಂದುವರೆಸಿದೆ ಎಂದು ಆರೋಪಿಸಿ ಗುರುವಾರ ತಾಲ್ಲೂಕಿನ ಇಟಗಾ ಗ್ರಾಮದ ರೈತರು ಓರಿಯಂಟ್ ಸಿಮೆಂಟ್ ಕಂಪೆನಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಕ್ಕೆ ದಿಢೀರ್ ಮುತ್ತಿಗೆ ಹಾಕಿ ಕಾಮಗಾರಿ ಬಂದ್ ಮಾಡಿಸಿದ್ದಾರೆ.ರೈತ ಮುಖಂಡ ಮೈನೋದ್ದಿನ್ ಮುನ್ಸಬ್‌ದಾರ್ ನೇತೃತ್ವದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ದಿಢಿ ೀರ್ ಮುತ್ತಿಗೆ ಹಾಕಿದ ರೈತರು, ಕಂಪೆನಿ ಆಡಳಿತ  ಅಧಿಕಾರಿಗಳನ್ನು ಕಚೇರಿಯಿಂದ ಹೊರಕ್ಕೆ ಕಳುಹಿಸಿದ್ದಾರೆ. ಅ್ಲಲದೆ ಕೆಲಸ ಮಾಡಿಸದಂತೆ ಎಚ್ಚರಿಕೆ ನೀಡಿದ್ದಾರೆ.ಕಟ್ಟಡ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ಕೂಲಿಕಾರ್ಮಿಕರನ್ನು ಕೆಲಸದಿಂದ ಬಿಡಿಸಿ ಕಂಪೆನಿ ಆವರಣದಿಂದ ಹೊರ ಕಳುಹಿಸಲಾಗಿದೆ. ಇದರಿಂದ ಕೆಲ ಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ರೈತರ ಆಕ್ರೋಶ ಕಂಡ ಕಂಪೆನಿ ಅಧಿಕಾರಿ, ಗುತ್ತಿಗೆದಾರರು, ಕಾರ್ಮಿಕರು ಸ್ಥಳದಿಂದ ತೆರಳಿದ್ದಾರೆ.ರೈತರ ಬೇಡಿಕೆಯಂತೆ ತಹಶೀಲ್ದಾರರು ಕಂಪೆನಿ ಕಟ್ಟಡ ನಿರ್ಮಾಣ ಮಾಡದಂತೆ ಪತ್ರ ಬರೆದಿದ್ದಾರೆ. ಕಾಮಗಾರಿ ತಡೆಯುವಂತೆ ಪೊಲೀಸರಿಗೆ ಪತ್ರ ಬರೆದು ಸೂಚಿಸಿದ್ದಾರೆ. ಅದನ್ನು ಪರಿಗಣಿಸದೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ ಕೆಲಸ ಶುರುವಾಗಿದ್ದರೂ ಅದನ್ನು ತಾಲ್ಲೂಕು ಆಡಳಿತ ಸಂಪೂಣ ನಿರ್ಲಕ್ಷಿಸಿದೆ. ಹೀಗಾಗಿ ರೈತರು ಅನಿವಾರ್ಯವಾಗಿ ಕಂಪೆನಿ ಕಟ್ಟಡ ನಿರ್ಮಾಣ ಕಾಮಗಾರಿ ಬಂದ್ ಮಾಡಿಸುವ ಸ್ಥಿತಿ ಬಂದಿದೆ ಎಂದು ಮೈನೋದ್ದಿನ್ ಆರೋಪಿಸಿದ್ದಾರೆ.ರೈತರ ಭೂಮಿಗೆ ರೈತರ ಬೇಡಿಕೆಯಂತೆ ಬೆಲೆ ಕೊಡುತ್ತಿಲ್ಲ. ರೈತರ ಮನವಿಗಳಿಗೆ ಸ್ಪಂದನೆ ಮಾಡುತ್ತಿಲ್ಲ. ರೈತರಿಂದ ಪಡೆದ ಭೂಮಿಯನ್ನು ಸರ್ಕಾರದ ನಿಯಮಗಳ ಪ್ರಕಾರ ಎನ್.ಎ. ಮಾಡಿಸದೆ, ಕಟ್ಟಡ ಪರವಾನಗಿ ಪಡೆಯದೆ ಅಕ್ರಮವಾಗಿ ಕಂಪೆನಿ ಕಟ್ಟಡ ಕಟ್ಟಲಾಗುತ್ತಿದೆ. ರೈತರ ಭೂಮಿಗೆ ಸೂಕ್ತ ಮತ್ತು ನ್ಯಾಯಸಮ್ಮತ ಬೆಲೆ ನಿಗದಿ ಮಾಡುವವರೆಗೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಮೈನೋದ್ದಿನ್ ಎಚ್ಚರಿಸಿದ್ದಾರೆ.ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚಿತ್ತಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಚಂದ್ರಕಾಂತ ಪೂಜಾರಿ ಅವರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.ಇಟಗಾ ಗ್ರಾಮದ ಸಿದ್ಧಣ್ಣಗೌಡ ಮಾಲೀಪಾಟೀಲ್, ತಮ್ಮಣ್ಣ ಡಿಗ್ಗಿ, ಪ್ರಭು ವಾಲೀಕಾರ್, ತಿಪ್ಪಣ್ಣ ದಳಪತಿ, ವೆಂಕಪ್ಪ ಡಿಗ್ಗಿ, ನಾಗೇಂದ್ರ ಡಿಗ್ಗಿ, ಮಲ್ಲಪ್ಪ ತೊನಸನಳ್ಳಿ, ಶೇಕಪ್ಪ ಡಿಗ್ಗಿ, ಮಲ್ಲಿಕಾರ್ಜುನ ಯಾಧವ್, ಸಾಬಣ್ಣ ಕುಂಬಾರ, ಮಲ್ಲಿಕಾರ್ಜುನ ಮುಡಬೂಳ ಮುಂತಾದ ರೈತರು ಮುತ್ತಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.