ಮಂಗಳವಾರ, ಏಪ್ರಿಲ್ 13, 2021
28 °C

ಕಡಲ ಕುದುರೆ ಸಂತತಿಗೆ ಕುತ್ತು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಕಡಲ ಕುದುರೆಗಳ ಅಕ್ರಮ ಬೇಟೆ ಇದೇ ರೀತಿ ಮುಂದುವರಿದರೆ ಮುಂದಿನ ಹತ್ತು ವರ್ಷಗಳಲ್ಲಿ ಅವುಗಳ ಸಂತತಿ ಸಂಪೂರ್ಣವಾಗಿ ನಶಿಸುವ ಆತಂಕ ಎದುರಾಗಿದೆ.ಪ್ರತಿ ವರ್ಷ ಚೀನಾದಲ್ಲಿ ಸುಮಾರು 150 ದಶಲಕ್ಷ ಕಡಲ ಕುದುರೆಗಳನ್ನು ಕೊಲ್ಲಲಾಗುತ್ತಿದೆ ಎಂದು ಕಡಲ ಜೀವಶಾಸ್ತ್ರಜ್ಞರು ನಡೆಸಿರುವ ಸಂಶೋಧನೆಯನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.ಸಾವಿರಾರು ವರ್ಷಗಳಿಂದ ವೈದ್ಯಕೀಯ ಚಿಕಿತ್ಸೆಗಾಗಿ ಕಡಲ ಕುದುರೆಗಳನ್ನು ಬಳಸಲಾಗುತ್ತಿದೆ. ಕುರುಡುತನದ ಸಮಸ್ಯೆಗಳು, ಮೂತ್ರಪಿಂಡದ ಸೋಂಕು ಸೇರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ಅದು ಬಳಕೆಯಾಗುತ್ತಿದೆ. ಚೀನಾದ ವೈದ್ಯಕೀಯ ಮಾರುಕಟ್ಟೆಗೆ 70 ದೇಶಗಳು ಕಡಲ ಕುದುರೆಗಳನ್ನು ಪೂರೈಸುತ್ತಿವೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.