ಶುಕ್ರವಾರ, ಏಪ್ರಿಲ್ 16, 2021
31 °C

ಕಡ್ಡಿಪುಡಿಯೊಂದಿಗೆ ಸೂರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಅಣ್ಣಾ ಬಾಂಡ್~ ನಂತರ ಏಕಾಂತಕ್ಕೆ ಸರಿದಿದ್ದ ನಿರ್ದೇಶಕ ಸೂರಿ ಮತ್ತೆ ಬಯಲಿಗೆ ಬರಲು ಸಿದ್ಧತೆ ನಡೆಸಿದ್ದಾರೆ. ಕಡ್ಡಿಪುಡಿ ಜಗಿಯಲು ಶುರು ಮಾಡಿದ ಮೇಲೆ ಕೋಣೆಯೊಳಗೇ ಉಳಿಯಲಾದೀತೆ?ಏನಿದು, ಸೂರಿ ಅವರ ಹೊಸ ವ್ಯಸನ ಎಂದುಕೊಳ್ಳಬೇಡಿ. `ಕಡ್ಡಿಪುಡಿ~ ಚಿತ್ರದ ಹೆಸರು. `ಸ್ವಯಂವರ ಚಂದ್ರು~ ಎಂದೇ ಪರಿಚಿತರ ನಡುವೆ ಪ್ರಸಿದ್ಧರಾದ ಎಂ. ಚಂದ್ರು ಈ ಚಿತ್ರದ ನಿರ್ಮಾಪಕರು. ಜುಲೈ 26ರಂದು ಚಿತ್ರ ಸೆಟ್ಟೇರಲಿದೆ.ಅಂದಹಾಗೆ, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಚಿತ್ರದ ನಾಯಕ. `ಶಿವ~ ಚಿತ್ರದಲ್ಲಿ ಜಾಕಿ, `ಲಕ್ಷ್ಮಿ~ ಚಿತ್ರದಲ್ಲಿ ಉಗ್ರರಿಗೆ ಸಿಂಹಸ್ವಪ್ನನಾದ ಕಮಾಂಡರ್- ಹೀಗೆ, ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರಿಗೆ ಈಗ ಸೂರಿ ಕಟ್ಟಿ ಕೊಡಲಿರುವ `ಕಡ್ಡಿಪುಡಿ~ ಪಾತ್ರದ ಬಗ್ಗೆಯೂ ಅಪಾರ ನಿರೀಕ್ಷೆಗಳಿವೆ.ಶಿವರಾಜ್‌ಗೆ ನಾಯಕಿಯಾಗಿ ರಾಧಿಕಾ ಪಂಡಿತ್ `ಕಡ್ಡಿಪುಡಿ~ಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಚೆಗೆ, `ಅಂಬಿ ಸಂಭ್ರಮ~ದಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಿದ್ದ ರಾಧಿಕಾ, ಈಗ ಚಿತ್ರದಲ್ಲೂ ಡುಯಟ್ ಹಾಡಲಿರುವುದು ವಿಶೇಷ. ಉಳಿದಂತೆ ರಂಗಾಯಣ ರಘು, ಶರತ್ ಲೋಹಿತಾಶ್ವ, ರೇಣುಕಾಪ್ರಸಾದ್ ಭೂಮಿಕೆಯಲ್ಲಿರುವ ಪ್ರಮುಖ ಕಲಾವಿದರು.ನಿರ್ಮಾಪಕ ಚಂದ್ರು ಕೂಡ ಒಂದು ಪಾತ್ರಕ್ಕಾಗಿ ಬಣ್ಣ ಹಚ್ಚಿಕೊಳ್ಳಲಿದ್ದಾರೆ.

ಎಂದಿನಂತೆ ನಿರ್ದೇಶನದೊಂದಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯೂ ಸೂರಿ ಅವರದ್ದೇ. ಚಿತ್ರದ ಸಂಗೀತ ಹರಿಕೃಷ್ಣರದ್ದು. ರವಿವರ್ಮ ಸಾಹಸ ನಿರ್ದೇಶನ, ಮದನ್ ಹರಿಣಿ ನ್ಯತ್ಯ ನಿರ್ದೇಶನ ಹಾಗೂ ಶಶಿಧರ ಅಡಪರ ಕಲಾ ನಿರ್ದೇಶನ `ಕಡ್ಡಿಪುಡಿ~ಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.