ಬುಧವಾರ, ಮಾರ್ಚ್ 3, 2021
19 °C
ಹೂದಾನಿ

ಕಣಿವೆ ಕುಮುದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಣಿವೆ ಕುಮುದ

ಈಡನ್‌ನಿಂದ ದೇವರು ಈವ್‌ಳನ್ನು ದೂರ ಮಾಡಿದ. ಆಗ ಅವಳ ಕಣ್ಣಿಂದ ಉದುರಿದ ಹನಿಗಳೆಲ್ಲಾ ಹೂಗಳಾದವು. ಆ ಹೂಗಳೇ ‘ಲಿಲಿ ಆಫ್‌ ವಿ ವ್ಯಾಲಿ’ ಅಥವಾ ಕಣಿವೆ ಕುಮುದ. ಈ ಕಥೆಯನ್ನು ಅನೇಕ ದೇಶಗಳ ಜನ ಹೇಳುತ್ತಾರೆ. ಶುದ್ಧತೆ ಹಾಗೂ ಪ್ರೀತಿಯ ಸಂಕೇತವಾದ ಈ ಹೂವನ್ನು ವಧುವಿನ ಅಲಂಕಾರಕ್ಕೆ ಬಳಸುವುದು ರೂಢಿ.ಏಷ್ಯಾ ಹಾಗೂ ಯುರೋಪ್‌ ಈ ಹೂಗಳಿಗೆ ತವರು. ಅತಿ ಹೆಚ್ಚು ತಂಪಾದ ಪ್ರದೇಶಗಳಲ್ಲಿ ಬೆಳೆಯುವ ಪುಷ್ಪವಿದು. 15–30 ಸೆಂ.ಮೀ. ಉದ್ದದ ಬಳ್ಳಿಯಂಥ ಗಿಡದಲ್ಲಿ ಇವು ಬಿಡುತ್ತವೆ. ಈ ಹೂಗಿಡಗಳು ಬಹು ಬೇಗ ಭೂಭಾಗದಲ್ಲಿ ಹಬ್ಬಿಕೊಳ್ಳುತ್ತವೆ. ಪ್ರತಿ ಗಿಡದ ಎರಡು ಎಲೆಗಳು ಮಾತ್ರ 10–25 ಸೆಂ.ಮೀ. ಉದ್ದ ಬೆಳೆಯುತ್ತವೆ.ಮೇ ತಿಂಗಳಲ್ಲಿ ಈ ಹೂಗಳು ಹೆಚ್ಚಾಗಿ ಬಿಡುತ್ತವೆ. ಹೂಗಳು ಚಿಕ್ಕವಾದರೂ ಅವು ಸೂಸುವ ಪರಿಮಳ ದೊಡ್ಡ ಹೂಗಳಿಗಿಂತ ಮಿಗಿಲು. ಸೆಪ್ಟೆಂಬರ್‌ ಹೊತ್ತಿಗೆ ಈ ಹೂಗಳು ಕೆಂಪು ಹಣ್ಣುಗಳಾಗಿ ಬದಲಾಗುತ್ತವೆ. ಈ ಹಣ್ಣುಗಳು ವಿಷಕಾರಿ. ಕೆಲವು ನಾಟಿವೈದ್ಯರು ನಿರ್ದಿಷ್ಟ ಪ್ರಮಾಣದಲ್ಲಿ ಹೂಗಳ ಭಾಗಗಳನ್ನು ಔಷಧದ ರೂಪದಲ್ಲಿ ಬಳಸುತ್ತಾರೆ. ಹೂವಿನ ಪರಿಮಳವನ್ನು ಸುಗಂಧದ್ರವ್ಯದ ತಯಾರಿಕೆಗೆ ಉಪಯೋಗಿಸಿದರೆ, ಎಲೆಗಳಿಂದ ಹಸಿರು ‘ಡೈ’ ತಯಾರಿಸುತ್ತಾರೆ.‘ಅವರ್‌ ಲೇಡೀಸ್‌ ಟಿಯರ್ಸ್‌’ ಎಂದೂ ಈ ಹೂಗಳನ್ನು ಕರೆಯುತ್ತಾರೆ. ನಸುಗೆಂಪು ಬಣ್ಣದ ಕಣಿವೆ ಕುಮುದದ ಹೂವಿಗೆ ‘ರೋಸಿಯಾ’ ಎನ್ನುವ ಹೆಸರಿದೆ. ಫ್ರಾನ್ಸ್‌ನಲ್ಲಿ ‘ಮೇ ದಿನಾಚರಣೆ’ಯಂದು ಕಣಿವೆ ಕುಮುದವನ್ನು ಮಾರುವ ಸಂಪ್ರದಾಯವಿದೆ. ಇಂಗ್ಲೆಂಡ್‌ನ ಕಾಡುಗಳಲ್ಲಿ ಈ ಹೂಗಿಡಗಳು ದಟ್ಟವಾಗಿ ಬೆಳೆಯುತ್ತವೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.