ಸೋಮವಾರ, ಮೇ 16, 2022
30 °C

ಕನಿಮೋಳಿ ಜಾಮೀನು ಅರ್ಜಿ: ವಿರೋಧಿಸದ ಸಿಬಿಐ, ನವೆಂಬರ್ 3ಕ್ಕೆ ತೀರ್ಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಿಮೋಳಿ ಜಾಮೀನು ಅರ್ಜಿ: ವಿರೋಧಿಸದ ಸಿಬಿಐ, ನವೆಂಬರ್ 3ಕ್ಕೆ ತೀರ್ಪು

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯವು ಕನಿಮೋಳಿ ಮತ್ತು ಇತರ ನಾಲ್ವರ ಜಾಮೀನು ಅರ್ಜಿ ಕುರಿತ ತನ್ನ ಆದೇಶವನ್ನು ಸೋಮವಾರ ಕಾಯ್ದಿರಿಸಿತು.ಕನಿಮೋಳಿ, ಶರದ್ ಕುಮಾರ್, ಅಸಿಫ್ ಬಲ್ವಾ, ರಾಜೀವ್ ಅಗರ್ ವಾಲ್ ಮತ್ತು ಕರೀಂ ಮೊರಾನಿ ಅವರ ಜಾಮೀನು ಅರ್ಜಿ ಕುರಿತ ಆದೇಶವನ್ನು ನವೆಂಬರ್  3ರಂದು ಪಕ್ರಟಿಸುವುದಾಗಿ ವಿಶೇಷ ನ್ಯಾಯಾಧೀಶರು ಪ್ರಕಟಿಸಿದರು.ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕನಿಮೋಳಿ ಮತ್ತಿತರರು ಬೆಳಿಗ್ಗೆ ಜಾಮೀನು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.

 

ದೋಷಾರೋಪ ಹೊರಿಸಿದ ಎರಡು ದಿನಗಳ ಬಳಿಕ ಸಲ್ಲಿಸಲಾದ ಕನಿಮೋಳಿ ಮತ್ತು ಕೆಟಿವಿ ಆಡಳಿತ ನಿರ್ದೇಶಕ ಶರದ್ ಕುಮಾರ್, ಅಸಿಫ್ ಬಲ್ವಾ, ರಾಜೀವ ಅಗರ್ ವಾಲ್ ಮತ್ತು ಕರೀಂ ಮೊರಾನಿ ಅವರ ಜಾಮೀನು ಅರ್ಜಿಗಳನ್ನು ಸಿಬಿಐ ವಿರೋಧಿಸಲಿಲ್ಲ.ಆದರೆ ಸ್ವಾನ್ ಟೆಲಿಕಾಂ ಪ್ರವರ್ತಕ ಶಾಹಿದ್ ಬಲ್ವಾ ಮತ್ತು ಎ. ರಾಜಾ ಅವರ ಮಾಜಿ ಖಾಸಗಿ ಕಾರ್ಯದರ್ಶಿ ಆರ್. ಕೆ. ಚಂಡೋಲಿಯ ಅವರ ಜಾಮೀನು ಅರ್ಜಿಗಳನ್ನು ಸಿಬಿಐ ವಿರೋಧಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.