ಶನಿವಾರ, ಮೇ 15, 2021
22 °C

ಕನಿಷ್ಠ 12 ಮಾಹಿತಿ ಹಕ್ಕು ಕಾರ್ಯಕರ್ತರ ಹತ್ಯೆ: ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಭೋಪಾಲ್‌ನ ಶೆಹ್ಲಾ ಮಸೂದ್ ಸೇರಿದಂತೆ ಕನಿಷ್ಠ 12 ಮಾಹಿತಿ ಹಕ್ಕು ಕಾರ್ಯಕರ್ತರು ಕಳೆದ ವರ್ಷದಿಂದೀಚೆಗೆ ಸಾವನ್ನಪ್ಪ್ದ್ದಿದಾರೆ ಎಂದು ವರದಿಯೊಂದು ತಿಳಿಸಿದೆ.ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸಲು ಮತ್ತು ಬದ್ಧತೆ ಕಾಪಾಡುವಲ್ಲಿ ಶ್ರಮಿಸುತ್ತಿದ್ದ ಕನಿಷ್ಠ 12 ಕಾರ್ಯಕರ್ತರು 2010ರ ಜನವರಿಯಿಂದ 2011ರ ಆಗಸ್ಟ್ ತಿಂಗಳ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳಿಗಾಗಿನ ಏಷ್ಯಾ ಕೇಂದ್ರದ (ಎಸಿಎಚ್‌ಆರ್) `ಆರ್‌ಟಿಐ ಆ್ಯಕ್ಟಿವಿಸ್ಟ್: ಸಿಟ್ಟಿಂಗ್ ಡಕ್ಸ್ ಆಫ್ ಇಂಡಿಯಾ~ ವರದಿ ತಿಳಿಸಿದೆ.ಇವರಲ್ಲಿ ಶೆಹ್ಲಾ ಮಸೂದ್ ಕಟ್ಟಕಡೆಯವರಾಗಿದ್ದು, ಆಗಸ್ಟ್ 16ರಂದು ಅವರ ಮನೆಯ ಹೊರಭಾಗದಲ್ಲಿ ಕಾರನ್ನು ಹತ್ತುವ ವೇಳೆ ಅವರ ಕತ್ತಿಗೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಮಸೂದ್ ಅವರ ಹತ್ಯೆ ಮಧ್ಯಪ್ರದೇಶದ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಬೆಚ್ಚಿ ಬೀಳಿಸಿತ್ತು.ಪೊಲೀಸ್ ಸಿಬ್ಬಂದಿಯೂ ಇದರಿಂದ ಹೊರತಾಗಿಲ್ಲ ಎಂದಿರುವ ವರದಿ, ಉತ್ತರ ಪ್ರದೇಶದ ಕಟ್ಗಾರ್ ಹಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರದ ಅನುದಾನದ ಮೊತ್ತದ ವಿನಿಯೋಗ ಕುರಿತು ಮಾಹಿತಿ ಕೇಳಿದ ಗೃಹರಕ್ಷಕ ದಳದ ಸಿಬ್ಬಂದಿ ಬಾಬು ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ಹೇಳಿದೆ.

ಶೆಹ್ಲಾ ಹತ್ಯೆ: ಸಿಬಿಐ ತನಿಖೆಗೆ ಅನುಮತಿ

ನವದೆಹಲಿ, (ಪಿಟಿಐ):  ಭೋಪಾಲ್‌ನ ಮಾಹಿತಿ ಹಕ್ಕು ಕಾರ್ಯಕರ್ತೆ ಶೆಹ್ಲಾ ಮಸೂದ್ ಅವರ ಹತ್ಯೆ ಕುರಿತು ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.