ಬುಧವಾರ, ಜನವರಿ 29, 2020
26 °C

ಕನ್ನಡದ ಹೆಸರಿಗೆ ಬರವೇ?

ಬೊ. ನಾ. ಕೃಷ್ಣಮೂರ್ತಿ, ಸಾಗರ Updated:

ಅಕ್ಷರ ಗಾತ್ರ : | |

`ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು~ ಎಂದು ಹೇಳಿದ ಕವಿ ಯಾರು ಎಂಬುದು  ಬಹುಶಃ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಗಳಿಗೆ ಮರೆತು ಹೋಗಿದೆಯೇ?ಈ ಸಂದೇಹಕ್ಕೆ ಕಾರಣ, ಏನೆಂದರೆ ವಿಶ್ವವಿದ್ಯಾಲಯ ಮತ್ತು ಪ್ರತಿಷ್ಠಾನಗಳ ಸಂಯುಕ್ತ ಪ್ರಯತ್ನದ ಫಲವಾಗಿ ಕುಪ್ಪಳಿಯ ಕುವೆಂಪು ಸಹ್ಯಾದ್ರಿ ದೇಸಿ ವಸ್ತು ಸಂಗ್ರಹಾಲಯದ ಆವರಣದಲ್ಲಿ `ಹೆರಿಟೇಜ್ ವಿಲೇಜ್~ ಎಂಬ `ಇಂಗ್ಲಿಷ್ ಹಳ್ಳಿ~ಯ ನಿರ್ಮಾಣ ಆಗಲಿದೆ ಎಂಬುದು ಮತ್ತು ಅದಕ್ಕೆ ರಾಜ್ಯ ಸರ್ಕಾರ ಐದು ಕೋಟಿ ರೂ ದೇಣಿಗೆಯನ್ನೂ ನೀಡಲು ಸಿದ್ಧವಿದೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.`ಹೆರಿಟೇಜ್ ವಿಲೇಜ್~ ಎಂದರೆ ಇಂಗ್ಲಿಷ್ ಹಳ್ಳಿಯೇ? ಅದು ಅಪ್ಪಟ ಚೆಲುವ ಕನ್ನಡ ತಾಣವಾಗಬೇಕಲ್ಲವೇ? ಹೌದೆಂದರೆ ಅದಕ್ಕೊಂದು ಕನ್ನಡದ ಹೆಸರನ್ನು ಇಡಲಾಗದೆ ಇಂಗ್ಲಿಷ್ ಹೆಸರಿಗೆ ಜೋತು ಬೀಳುವ ದುಃಸ್ಥಿತಿ ಸಂಬಂಧಪಟ್ಟವರಿಗೆ ಏಕೆ ಬಂತು?`ಕನ್ನಡಕ್ಕಾಗಿ ಹಾಗೆ ಮಾಡಬೇಕು..ಹೀಗೆ ಮಾಡಬೇಕು; ಅಷ್ಟು ಕಡಿಯಬೇಕು, ಇಷ್ಟು ಕೊಚ್ಚಬೇಕು~ ಎಂದೆಲ್ಲ ಭಾಷಣವನ್ನು ಮಾಡುವವರು ಕುಪ್ಪಳಿ ಪರಿಸರದಲ್ಲಿ ಒಡಮೂಡುವ ದೇಸಿ ಸಂಸ್ಕೃತಿಯ ತಾಣದ ಹೆಸರು ಕನ್ನಡದ್ದೇ ಆಗಿರಬೇಕು ಎಂದು ಯಾಕೆ ಯೋಚಿಸುವುದಿಲ್ಲ?

 

ಪ್ರತಿಕ್ರಿಯಿಸಿ (+)