ಶನಿವಾರ, ಏಪ್ರಿಲ್ 17, 2021
32 °C

ಕನ್ನಡ ಚಿತ್ರರಂಗಕ್ಕೆ ಉ.ಕ. ದಿಕ್ಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಮಕನಮರಡಿ: `ಕನ್ನಡ ಸಿನಿಮಾ ರಂಗಕ್ಕೆ ಉತ್ತರ ಕರ್ನಾಟಕವೇ ದಿಕ್ಸೂಚಿ~ ಎಂದು ಚಿತ್ರನಟಿ  ವಿನಯಾಪ್ರಸಾದ ಹೇಳಿದರು.ಯಮಕನಮರಡಿಯಲ್ಲಿ ಶನಿವಾರ ನಡೆದ ಸತೀಶ ಶುಗರ್ಸ್‌ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ನಡೆದ 2ನೇ ಸತೀಶ ಪ್ರತಿಭಾ ಪುರಸ್ಕಾರ 2012ರ ಹುಕ್ಕೇರಿ ತಾಲ್ಲೂಕು ಮಟ್ಟದ ಅಂತಿಮ ಸಮರದ ಸಾಂಸ್ಕೃತಿಕ ಸ್ಪರ್ಧೆಗಳ ಪ್ರಾಥಮಿಕ ಶಾಲಾ ವಿಭಾಗ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.`ಸಾಂಸ್ಕೃತಿಕ ಕಾರ್ಯಕ್ರಮಗಳ ಗೋಪುರದಂತಿದ್ದ ಈ ವೇದಿಕೆ ದೇವಾಲಯದ ಸಮಾನ ಎಂದರು.

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,  `ರಾಜಧಾನಿ ಮಟ್ಟದಲ್ಲಿ ನಡೆಯುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟದ ಮಕ್ಕಳಿಗೆ ಪರಿಚಯಿಸಿ ಪ್ರತಿಭೆಗಳನ್ನು ಗುರುತಿಸುವ ಸತೀಶ ಶುಗರ್ಸ್‌ನ ಕಾರ್ಯ ಶ್ಲಾಘನೀಯ. ಈ ಸ್ಪರ್ಧೆ ಗ್ರಾಮೀಣ ವಿದ್ಯಾರ್ಥಿಗಳಿಗೆ ದಿಕ್ಸೂಚಿಯಾಗಿದೆ. ಉತ್ತರ ಕರ್ನಾಟಕದಲ್ಲಿನ ಕಲೆ, ಜಾನಪದ ನೃತ್ಯ, ಗಾಯನ ಸ್ಪರ್ಧೆ ಹೀಗೆ ಅನೇಕ ಸ್ಪರ್ಧೆಗಳಿಗೆ ಸ್ಪೂರ್ತಿಯಾಗಿದೆ. ಕ್ಷೇತ್ರದ ಜನರ ಆರೋಗ್ಯ, ಶುದ್ಧ ಕುಡಿಯುವ ನೀರು ಸೇರಿದಂತೆ ಸಾಮಾಜಿಕ ಕಾರ್ಯಗಳಿಗೆ ಅಣಿಯಾಗಿರುವ ಅಪರೂಪದ ರಾಜಕಾರಣಿ ಸತೀಶ ಜಾರಕಿಹೊಳಿ~ ಎಂದು ಬಣ್ಣಿಸಿದರು.ಸಾನ್ನಿದ್ಯ ವಹಿಸಿದ್ದ ಹತ್ತರಗಿ ಸುಕ್ಷೇತ್ರದ ಕಾರಿಮಠದ ಗುರುಸಿದ್ದ ಸ್ವಾಮೀಜಿ ಮಾತನಾಡಿ,  ಗ್ರಾಮೀಣ ಜನರ ಮನದಲ್ಲಿ ಹಾಸು ಹೊಕ್ಕಾಗಿರುವ ಜಾನಪದ ಗೀತೆ ಸೋಬಾನ ಪದಗಳು ಮರೆಯಾಗುತ್ತಿರುವ ದಿನಗಳಲ್ಲಿ ಇಂದು ನಮ್ಮ ಉತ್ತರ ಕರ್ನಾಟಕದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬರವಿಲ್ಲ, ಎಂಬ ಸತ್ಯವನ್ನು ಈ ವೇದಿಕೆ ಜೀವಂತವಾಗಿಸಿದೆ ಎಂದರು.ಶಾಸಕ ಸತೀಶ ಜಾರಕಿಹೊಳಿ ಮತ್ತು ಯಮಕನಮರಡಿ ಸಿಂಡಿಕೇಟ್‌ನ ಪ್ರಬಂಧಕ ವೈ.ಡಿ. ಗಡಿನಾಯಕ ಸನ್ಮಾನಿಸಿದರು.ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಜಾನನ ಮನ್ನಿಕೇರಿ, ಹುಕ್ಕೇರಿ ತಾಲ್ಲೂಕು ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ರಾಜೇಂದ್ರ  ತುಬಚಿ, ಸದಾನಂದ ತುಬಚಿ, ಈರಣ್ಣ ದುಗಾಣಿ, ರಾಹುಲ ಜಾರಕಿಹೊಳಿ, ಬಿ.ಬಿ. ಹಂಜಿ, ಹತ್ತರಗಿ ತಾ.ಪಂ ಸದಸ್ಯೆ ರೇಣುಕಾ ಕಡಗಾಂವಿ, ಯಮಕನಮರಡಿ ಗ್ರಾ.ಪಂ ಅಧ್ಯಕ್ಷೆ ಗೀತಾಜಂಲಿ ರಜಪೂತ, ಹೆಬ್ಬಾಳ ತಾ.ಪಂ ಸದಸ್ಯೆ ಶಹನಾಜ ಗಡೆಕಾಯಿ, ಕಿರಣ ರಜಪೂತ, ಅಸ್ಲ್‌ಂ ಪಕ್ಕಾಲಿ, ಸಿದ್ದಲಿಂಗ ದಳವಾಯಿ, ರವಿ ಜಿಂಡ್ರಾಳಿ, ನವೀಕ ಕಡೇಲಿ, ಶಶಿಕಾಂತ ಹಟ್ಟಿ, ಎಸ್.ಎ. ರಾಮಗಾನಹಟ್ಟಿ ಹಾಜರಿದ್ದರು. ರಾಜು ಬಾದಾಮಿ,  ಶೈಲಜಾ, ಮಹಾನಂದಾ ಗೋಸಾವಿ ಸಂಗೀತ  ಕಾರ್ಯಕ್ರಮ ನಡೆಸಿಕೂಟ್ಟರು. ಎ.ಜಿ.ಕೋಳಿ ವಂದಿಸಿದರು.`ಸೂಕ್ಷ್ಮತೆ ಇರಲಿ~

ಮುನವಳ್ಳಿ: `ಮಕ್ಕಳೊಂದಿಗೆ ಮಕ್ಕಳಾಗಿ ಪಾಲ್ಗೊಂಡಾಗ ಮಾತ್ರ ಮಕ್ಕಳ ಮನಸ್ಸಿನ ಅರಿವಾಗುತ್ತದೆ. ಮಕ್ಕಳ ವಿಚಾರದಲ್ಲಿ ಸೂಕ್ಷ್ಮತೆಯಿಂದ ಇದ್ದಾಗ ಮಾತ್ರ ಹೊಸ ವಿಷಯ ತಿಳಿಸಬಹುದು. ಪಂಡಿತ ಜವಾಹರಲಾಲ್ ನೆಹರೂ ಅವರ ಜೀವನ ದೇಶದ ಪ್ರತಿಯೊಬ್ಬ ಪ್ರಜೆಗೂ ಮಾದರಿಯಾದದ್ದು, ಮಕ್ಕಳೆಂದರೆ ನೆಹರೂ ಅವರಿಗೆ ಪ್ರಾಣ ಹಾಗೆಯೇ ನೆಹರು ಎಂದರೆ ಮಕ್ಕಳಿಗೆ ಪ್ರಾಣ. ನೆಹರೂ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜೈಂಟ್ಸ್ ಇಂಟರ್‌ನ್ಯಾಶನಲ್ ಫೆಡರೇಶನ್ ಉಪಾಧ್ಯಕ್ಷ ದಿಲೀಪ್ ಜಂಬಗಿ ಹೇಳಿದರು.ಸ್ಥಳೀಯ ಹವ್ಯಾಸಿ ಕಲಾ ಬಳಗವು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ಪ್ರತಿ ಮಕ್ಕಳಲ್ಲಿ ಕಲೆ ಹುದುಗಿರುತ್ತದೆ ಅದನ್ನು ಬೆಳಕಿಗೆ ತರುವ ಕೆಲಸವನ್ನು ವ್ಯಕ್ತಿಗಳು ಹಾಗೂ ಸಂಘಟನೆಗಳು ಮಾಡಬೇಕು~ ಎಂದರು. ಬಸನಗೌಡ ಹುಲಿಗೊಪ್ಪ, ಬಿ.ಎಚ್.ಖೊಂದು ನಾಯ್ಕ, ಗುರುನಾಥ ಪತ್ತಾರ, ಸೋಮನಗೌಡ ಹಿರಲಿಂಗಣ್ಣವರ ಮಾತನಾಡಿದರು. ಸಂಗಯ್ಯ ಹೊಳಿಮಠ, ಫಕ್ಕೀರಪ್ಪ ಮುಶೆನ್ನವರ, ವಿದ್ಯಾಧರ ಉಜ್ಜಿನ ಕೊಪ್ಪ ಪ್ರವೀಣ ಅಣ್ಣಿಗೇರಿ, ಶಿವು ಬೆಳವಲಗಿಡದ, ಪುಲಕೇಶಿ ಗರಗ, ಇದ್ದರು. ಚಂದ್ರಶೇಖರ ತುಳಜಣ್ಣವರ ಸ್ವಾಗತಿಸಿದರು. ಬಾಳು ಹೊಸಮನಿ ನಿರೂಪಿಸಿದರು. ಶಿವಕುಮಾರ ಕಾಟೆ ವಂದಿಸಿದರು. ತಾಲ್ಲೂಕು ಮಟ್ಟದ ಸ್ಪರ್ಧೆಯ ಫಲಿತಾಂಶ

ಗಾಯನ ವಿಭಾಗ:  ಉಳ್ಳಾಗಡ್ಡಿ ಖಾನಾಪುರದ ವಿದ್ಯಾರ್ಥಿನಿ ಶಿಲ್ಪಾ ಕಡಲಗಿ (ಪ್ರ), ಹುಕ್ಕೇರಿ ಗಾಂಧಿನಗರದ ಶ್ರದ್ಧಾ ಹಿರೇಮಠ (ದ್ವಿ), ಹುಕೇರಿ ಬಸವೇಶ್ವರ ಕಾನ್ವೆಂಟ್ ಶಾಲೆಯ ಮಹೇಶ ಅಮ್ಮಿಭಾವಿ (ತೃ)ಸ್ಥಾನ ಪಡೆದು ಕೊಂಡಿದ್ದಾರೆ. ಜಾನಪದ ಗಾಯನ ವಿಭಾಗ: ಉಳ್ಳಾಗಡ್ಡಿ ಖಾನಾಪುರದ ವಿದ್ಯಾರ್ಥಿನಿ ಮಂಜುಳಾ ಮನವಳ್ಳಿ (ಪ್ರ), ಗುಡಹನಹಟ್ಟಿ ಆರ್.ಸಿ.ಕ.ಗಂ ಶಾಲೆ ಐಶ್ವರ್ಯ ಪಾಟೀಲ (ದ್ವಿ), ಹುಲ್ಲೋಳ್ಳಿಯ ಅರಿಹಂತ ಕಾನ್ವೆಂಟ್‌ದ ಅಕ್ಷತಾ ಪಾಟೀಲ (ತೃ) ಸ್ಥಾನ ಪಡೆದು ಕೊಂಡಿದ್ದಾರೆ.  ಭಾಷಣ ವಿಭಾಗ: ನಿಡಸೋಸಿಯ ಎಸ್.ಜೆ.ಡಿ. ಶಾಲೆ  ಶ್ವೇತಾ ಇನಾಮದಾರ (ಪ್ರ), ಯಮಕನಮರಡಿ ಸರ್ಕಾರಿ ಉರ್ದು ಶಾಲೆಯ ಮುಬಶಿರೀನ್ ಹಂಚಿನಮನಿ(ದ್ವಿ), ಹುಕ್ಕೇರಿ ಗಾಂಧಿನಗರದ ಕ.ಗಂ.ಶಾಲೆಯ ಭಾಗ್ಯಲಕ್ಷ್ಮಿ ಶೆಟ್ಟಿ(ತೃ) ಸ್ಥಾನ ಪಡೆದುಕೊಂಡಿದ್ದಾಳೆ. ಜಾನಪದ ನೃತ್ಯ ವಿಭಾಗ:  ಆನಂದಪುರದ ಎಸ್.ಎಸ್. ಮಲಕಾರ ಶಾಲೆಯ ಕಾವ್ಯ ಬಡಕುಂದ್ರಿ ಹಾಗೂ ಸಂಗಡಿಗರು (ಪ್ರ), ನಿಡಸೋಸಿಯ ಸೌಜನ್ಯಾ ಪಾಟೀಲ ಹಾಗೂ ಸಂಗಡಿಗರು, (ದ್ವಿ), ಬೆಳವಿ ಕ.ಗಂ.ಶಾಲೆಯ ಅಮೃತಾ ಕಾಂಬಳೆ ಹಾಗೂ ಸಂಗಡಿಗರು (ತೃ) ಸ್ಥಾನ ಪಡೆದುಕೊಂಡಿದ್ದಾರೆ.ಸಾಮೂಹಿಕ ನೃತ್ಯ ವಿಭಾಗ: ಆನಂದಪುರ-ಹತ್ತರಗಿ ಎನ್. ಎಸ್.ಎಫ್. ಶಾಲೆಯ ಮೇಘಾ ಸಾಲಿಮನಿ ಹಾಗೂ ಸಂಗಡಿಗರು (ಪ್ರ). ಉಳ್ಳಾಗಡ್ಡಿ-ಖಾನಾಪುರ ಶಾಲೆಯ  ಶಿಲ್ಪಾ ಹಾಗೂ ಸಂಗಡಿಗರು(ದ್ವಿ), ಘೋಡಗೇರಿ ಕೆ.ಬಿ.ಎಸ್ ಶಾಲೆಯ ಸದಾಶಿವ ನಾಯಿಕ ಹಾಗೂ ಸಂಗಡಿದರು ತೃತೀಯ ಸ್ಥಾನ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.