ಮಂಗಳವಾರ, ಏಪ್ರಿಲ್ 20, 2021
32 °C

ಕನ್ನಡ ಭಾಷೆ, ಸಂಸ್ಕೃತಿ ರಕ್ಷಣೆಗೆ ಕಾರಜೋಳ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕನ್ನಡ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ನಗರದ ಬಸವೇಶ್ವರ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ 57ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಣ ನೆರವೇರಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯವನ್ನು ಅನ್ಯ ಭಾಷಾ ಸಾಹಿತ್ಯಗಳ ಜೊತೆ ಹೋಲಿಸಿ ನೋಡಿದಾಗ ಇದು ತನ್ನದೆ ಆದ ವಿಶ್ವಮಟ್ಟದ ಅಪ್ರತಿಮ ಪ್ರಭಾವವನ್ನು ಬೀರಿದೆ ಹಾಗೂ ಬೀರುತ್ತಲಿದೆ. ಈ ಮಾತಿಗೆ ನಿದರ್ಶನವಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕನ್ನಡ ಸಾಹಿತ್ಯಕ್ಕೆ ಎಂಟನೇಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿರುವುದನ್ನು ನೆನೆಯಲೇಬೇಕಾಗಿದೆ ಎಂದರು.  `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು~ ಎಂದು ಹಾಡಿದ ಹುಯಿಲಗೋಳ ನಾರಾಯಣರಾಯರ ಆಶಯದಂತೆ ಏಕೀಕರಣಗೊಂಡ ಕರ್ನಾಟಕ ಒಂದುಗೂಡಲು ಹೋರಾಡಿದ ಆಲೂರು ವೆಂಕಟರಾಯ, ಕೆಂಗಲ್ ಹನಮಂತಯ್ಯ, ನಿಜಲಿಂಗಪ್ಪ, ಕೃಷ್ಣರಾಯರು,  ಬಿ.ಎಂ.ಶ್ರಿಕಂಠಯ್ಯ, ಗೋವಿಂದ ಪೈ, ಆರ್.ಆರ್.ದಿವಾಕರ, ಅಂದಾನಪ್ಪ ದೊಡ್ಡಮೇಟಿ, ಗುದ್ಲೆಪ್ಪ ಹಳ್ಳಕೇರಿ ಸೇರಿದಮತೆ ಬಾಗಲಕೋಟೆ ಜಿಲ್ಲೆಯವರಾದ ಚಿಕ್ಕೋಡಿ ತಮ್ಮಣ್ಣಪ್ಪ, ಶ್ರಿನಿವಾಸ ಮಂಗಳವೇಡೆ, ಜಂಗಿನ ಮುರುಗಯ್ಯ, ಪತ್ರಿಕಾ ರಂಗದ ಭೀಷ್ಮೆರೆಂದೇ ಖ್ಯಾತರಾದ ಮೊಹರೆ ಹಣಮಂತರಾಯರನ್ನು ನಾವೆಲ್ಲರೂ ನೆನೆಯಬೇಕಿದೆ ಎಂದು ಹೇಳಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಾಗಲಕೋಟೆ ಜಿಲ್ಲೆಗೆ 2011-12ನೇ ಸಾಲಿನಲ್ಲಿ ರೂ. 9.92 ಕೋಟಿ ಹಾಗೂ 2012-13ನೇ ಸಾಲಿನಲ್ಲಿ ಇಲ್ಲಿಯವರೆಗೆ ರೂ. 1.30 ಕೋಟಿ ಅನುದಾನವನ್ನು  ಸಾಂಸ್ಕೃತಿಕ ಭವನ, ಬಯಲು ರಂಗಮಂದಿರ ನಿರ್ಮಾಣಕ್ಕೆಬಿಡುಗಡೆ ಮಾಡಲಾಗಿದೆ ಎಂದರು.29 ಮಹನೀಯರಿಗೆ ಪ್ರಶಸ್ತಿ: ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 29 ಮಹನೀಯರಿಗೆ `ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ~ ನೀಡಲಾಯಿತು.ಶಿವರಾಮ ಹೆಗಡೆ, ಬಾಗಲಕೋಟೆ (ಸಮಾಜ ಸೇವೆ), ದೇವಿಂದ್ರಪ್ಪ ಪೂಜಾರ,  ಹಿರೇಬೂದಿಹಾಳ (ನಾಟಕ), ಗ್ಯಾನೋಬಾ  ಕಾಶೀದ, ಕಿತ್ತಲಿ (ನಾಟಕ), ಚನ್ನಬಸಪ್ಪ ಮಲ್ಲಪ್ಪ ಕುರಬರ,  ನಾಗೂರ (ಶಿಕ್ಷಣ), ಎನ್.ಬಿ.ಗೊರವರ (ಶಿಕ್ಷಣ), ಮಲ್ಲಪ್ಪ ಉದಪುಡಿ, ಮುಧೋಳ (ಶಿಕ್ಷಣ), ಶಿವಶಂಕ್ರಪ್ಪ ಸಾರಂಗಿ,  ಗುಳೇದಗುಡ್ಡ(ರಂಗಭೂಮಿ), ರುದ್ರಪ್ಪ ಮುದ್ದೇಬಿಹಾಳ, ಹುನಗುಂದ (ರಂಗಭೂಮಿ), ಶ್ರಿಧರ ಸವಣೂರ, ಜಮಖಂಡಿ (ಕ್ರೀಡೆ), ರಾಜೇಶ್ವರಿ ಡೊಳ್ಳಿ, ಜಮಖಂಡಿ (ಕ್ರೀಡೆ), ಯಂಕಪ್ಪ ಎಂಟಿತ್ತ (ಕ್ರೀಡೆ), ದುಂಡಪ್ಪ ಕುಂಬಾರ (ಸಾಹಿತ್ಯ), ನೀಲಕಂಠ ಕಾಳಗಿ (ಸಾಹಿತ್ಯ), ತಿಮ್ಮಪ್ಪ ಭಜಂತ್ರಿ (ಸಂಗೀತ), ಅಲ್ಲಸಾಬ್‌ನದಾಫ್(ಶಿಲ್ಪಿ), ಗಂಗವ್ವ ಮುಧೋಳ(ಜಾನಪದ), ನಿಂಗಪ್ಪ ನಾಯ್ಕರ (ಜಾನಪದ), ಧರ್ಮಣ್ಣ ನರಗುಂದ (ಜಾನಪದ), ಕಲಾವತಿ ಮಾದರ (ಜಾನಪದ ಬಯಲಾಟ), ಕಲ್ಲೇಶ ಕೆಸರಟ್ಟಿ(ಕುಸ್ತಿಪಟು), ರಾಜು ಬಂಡಿ (ಸಮಾಜ ಸೇವೆ), `ಪ್ರಜಾವಾಣಿ~ ದಿನಪತ್ರಿಕೆಯ ಮುಧೋಳ ತಾಲ್ಲೂಕು ಅರೆಕಾಲಿಕ ವರದಿಗಾರ ಆರ್.ಎನ್. ಜೋಶಿ (ಪತ್ರಿಕೆ), ಗಂಗಾಧರ ಅವಟೇರ (ಪತ್ರಿಕೆ), ಎಂ.ಎಚ್.ನದಾಫ್(ಪತ್ರಿಕೆ), ವಿಶ್ವನಾಥ ಮುನಹಳ್ಳಿ(ಪತ್ರಿಕೆ), ಮರೋತೋಜ್ ಕೆಸರಹಟ್ಟಿ(ಶಿಕ್ಷಣ, ಸಾಹಿತ್ಯ), ರುದ್ದಪ್ಪ ಸನ್ನಿ (ಸಾಹಿತ್ಯ), ಡಾ. ಆಶಾಲತಾ ಮಲ್ಲಾಪೂರ (ವೈದ್ಯಕೀಯ) ಹಾಗೂ ಡಾ.ಭುವನೇಶ್ವರಿ ಎಳಮೇಲಿ (ವೈದ್ಯಕೀಯ) ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿದ್ದಾರೆ.ಗಮನ ಸೆಳೆದ ಸ್ತಬ್ಧಚಿತ್ರ: ಕೆ.ಎಸ್.ಆರ್.ಟಿ.ಸಿ, ಜವಳಿ ಮತ್ತು ಕೈಮಗ್ಗ ಅಭಿವೃದ್ದಿ ಇಲಾಖೆ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಮಾಜಿಕ ಅರಣ್ಯ, ರೇಷ್ಮೆ ಇಲಾಖೆ ವತಿಯಿಂದ ಆಕರ್ಷಕ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲಾಯಿತು.ಕೈಮಗ್ಗ ಇಲಾಖೆಯು ಸಿದ್ದಪಡಿಸಿದ ನೇಕಾರರು ಸೀರೆ ನೇಯುವ ಪ್ರದರ್ಶನಕ್ಕೆ ಪ್ರಥಮ ಸ್ಥಾನ, ಕೆ.ಎಸ್.ಆರ್.ಟಿ.ಸಿ.ಯ ಕೃಷ್ಣರಾಜ ಸಾಗರ ಜಲಾಶಯ ಮಾದರಿ ಎರಡನೇ ಸ್ಥಾನ ಹಾಗೂ ತೋಟಗಾರಿಕೆ ಇಲಾಖೆಯು ತೃತೀಯ ಸ್ಥಾನ ಪಡೆದವು.ವಿದ್ಯಾರ್ಥಿಗಳಿಂದ ನೃತ್ಯ: ನಗರದ ವಿವಿಧ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.ಆಕರ್ಷಕ ಮೆರವಣಿಗೆ: ತುಂತುರು ಮಳೆಯ ನಡುವೆಯೇ ಬೆಳಿಗ್ಗೆ  ನಗರದ ತಹಶೀಲ್ದಾರ ಕಚೇರಿ ಆವರಣದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ನಾರಾಯಣಸಾ ಭಾಂಡಗೆ, ಜಿ.ಪಂ ಅಧ್ಯಕ್ಷೆ ಶಾಂತವ್ವ ಭೂಷಣ್ಣವರ, ಉಪಾಧ್ಯಕ್ಷ ಕೃಷ್ಣಾ ಓಗೆನ್ನವರ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಎಸ್‌ಪಿ ಈಶ್ವರಚಂದ್ರ ವಿದ್ಯಾಸಾಗರ, ಜಿ.ಪಂ ಸಿ.ಇ.ಒ. ಎಸ್.ಜಿ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.`ನೀಲಂ~ ಅಡಚಣೆ: ಬೆಳಿಗ್ಗೆಯಿಂದಲೇ ಬಿಟ್ಟೂ ಬಿಡದೇ ಸುರಿದ ಮಳೆ `ಕನ್ನಡ ರಾಜ್ಯೋತ್ಸವ~ ಆಚರಣೆಗೆ ಅಡಚಣೆಯಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.