ಮಂಗಳವಾರ, ಏಪ್ರಿಲ್ 13, 2021
30 °C

ಕಪ್ಪು ಚಿರತೆ ನೋಡ ಬನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಪ್ಪು ಚಿರತೆ ನೋಡ ಬನ್ನಿ

ಶಿವಮೊಗ್ಗ: ಸಮೀಪದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಆರು ತಿಂಗಳ ಹಿಂದೆ ಜನಿಸಿದ ಬಹು ಅಪರೂಪದ ಕಪ್ಪು ಬಣ್ಣದ ಚಿರತೆ ಮರಿಯನ್ನು ಸಾರ್ವಜನಿಕರ ವೀಕ್ಷಣೆಗೆ ಭಾನುವಾರ ಬಿಡಲಾಯಿತು.



ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ನಂಜುಂಡಸ್ವಾಮಿ  ತ್ಯಾವರೆಕೊಪ್ಪದ ಹುಲಿ- ಸಿಂಹಧಾಮದಲ್ಲಿರುವ ಚಿರತೆ ಸಾಕಾಣಿಕೆ ಮನೆಯಿಂದ ಕಪ್ಪು ಬಣ್ಣದ ಈ ಹೆಣ್ಣು ಮರಿಯನ್ನು ಚಿರತೆ ಪ್ರದರ್ಶನ ಆವರಣಕ್ಕೆ ಬಿಡುಗಡೆ ಮಾಡಿದರು.



ಸಿಂಹ ಧಾಮದಲ್ಲಿ `ಕೃತಿಕಾ~ ಎಂಬ ಹೆಸರಿನ ಚಿರತೆಯು ಈ ಕಪ್ಪು ಮರಿಗೆ ಜನ್ಮ ನೀಡಿತ್ತು.

ಕಾರ್ಯಕ್ರಮದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ನಂಜುಂಡಸ್ವಾಮಿ, ರಾಜ್ಯದ ಮೃಗಾಲಯಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ತ್ಯಾವರೆಕೊಪ್ಪದ ಹುಲಿ- ಸಿಂಹಧಾಮಲ್ಲಿ  ಚಿರತೆಯೊಂದು ಕಪ್ಪು ಬಣ್ಣದ ಮರಿಗೆ ಜನ್ಮ ನೀಡಿದೆ. ರಾಜ್ಯದಲ್ಲಿ ಬನ್ನೇರುಘಟ್ಟ ಹಾಗೂ ತ್ಯಾವರೆಕೊಪ್ಪದಲ್ಲಿ ಮಾತ್ರ ಸಫಾರಿಗಳಿವೆ ಎಂದು ಮಾಹಿತಿ ನೀಡಿದರು.



ತ್ಯಾವರೆಕೊಪ್ಪದ ಸಿಂಹಧಾಮವನ್ನು ಇನ್ನಷ್ಟು ಆಕರ್ಷಿಸಲು ಮೈಸೂರು ಮೃಗಾಲಯದಿಂದ 117 ವಿವಿಧ ಪಕ್ಷಿಗಳನ್ನು ತರಿಸಲಾಗಿದೆ. ತಮಿಳುನಾಡಿನಿಂದ 2 `ಎಮು~ ಪಕ್ಷಿಗಳನ್ನು ತರಲಾಗಿದೆ. ಸಫಾರಿಗಾಗಿ ಒಂದು ಹೊಸ ವಾಹನ  ನೀಡಲಾಗಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.