ಶುಕ್ರವಾರ, ಜನವರಿ 24, 2020
28 °C

ಕಬಡ್ಡಿ: ಕಾತ್ಯಾಯಿನಿ ತಂಡಕ್ಕೆ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಕಾರವಾರದ ಕಾತ್ಯಾಯಿನಿ ಸ್ಪೋರ್ಟ್ಸ್ ಕ್ಲಬ್ ತಂಡ ತಾಲ್ಲೂಕಿನ ಕುಂಚನೂರ ಗ್ರಾಮದ ನ್ಯೂ ಮಹಾದೇವ ಯುವಕ ಮಂಡಳ ಆಶ್ರಯದಲ್ಲಿ ಭಾನುವಾರ ಆರಂಭವಾದ ಅಂತರ ರಾಜ್ಯ ಕಬಡ್ಡಿ ಟೂರ್ನಿಯ ಮಹಿಳೆಯರ ವಿಭಾಗದ `ಎ~ ಗುಂಪಿನಲ್ಲಿ ತಾನಾಡಿದ ಎರಡೂ ಲೀಗ್ ಪಂದ್ಯಗಳನ್ನು ಗೆದ್ದು ನಾಕೌಟ್ ಹಂತದತ್ತ ಮುನ್ನಡೆಯಿತು.ಕಾತ್ಯಾಯಿನಿ ತಂಡ 19-12ರಿಂದ ಮುಂಬಯಿನ ಸಾವಿತ್ರಿಬಾಯಿ ತಂಡವನ್ನು ಮಣಿಸಿ ಟೂರ್ನಿಯ ಮೊದಲ ಜಯ ದಾಖಲಿಸಿದ ಸಾಧನೆ ಮಾಡಿತು. ನಂತರ ನಡೆದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರಿನ ಮಹಾರಾಣಿ ತಂಡವನ್ನು 32-25 ಅಂಕಗಳಿಂದ ಸುಲಭವಾಗಿ ಸೋಲಿಸಿತು.`ಡಿ~ ಗುಂಪಿನಲ್ಲಿ ಮುಂಬೈನ ದೇನಾ ಬ್ಯಾಂಕ್ ತಂಡ ಕೂಡ ಎರಡು ಲೀಗ್ ಪಂದ್ಯ ಜಯಿಸಿತು. `ಬಿ~ ಗುಂಪಿನಲ್ಲಿ ಕೊಲ್ಲಾಫುರದ ಮಹಾಲಕ್ಷ್ಮೀ, ಮೂಡಬಿದ್ರಿಯ ಆಳ್ವಾಸ್ ಹಾಗೂ `ಸಿ~ ಗುಂಪಿನಲ್ಲಿ ಸಾಂಗಲಿಯ ತರುಣ ಭಾರತ, `ಡಿ~ ಗುಂಪಿನಲ್ಲಿ ಪನ್ನಾಲದ ಸಂಸ್ಕೃತಿ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿದವು. ಆದರೆ ಪನ್ನಾಲದ ಸಂಸ್ಕೃತಿ ತಂಡ ತನ್ನ ಎರಡನೇ ಪಂದ್ಯದಲ್ಲಿ ದೇನಾ ಬ್ಯಾಂಕ್ ವಿರುದ್ದ (20-21) ಏಕೈಕ ಪಾಯಿಂಟ್‌ನಿಂದ ಸೋಲು ಅನುಭವಿಸಿತು.ಕೊಲ್ಲಾಪುರದ ಮಹಾಲಕ್ಷ್ಮೀ ತಂಡ 29-9ರಿಂದ ಪುಣೆಯ ಎಸ್‌ಪಿಸಿ ವಿರುದ್ಧ ಜಯ ಪಡೆಯಿತು.

 ಮೂಡಬಿದ್ರಿಯ ಆಳ್ವಾಸ್ ತಂಡ 24-10ರಿಂದ ಪುಣೆಯ ಎಸ್‌ಪಿಸಿ ಮೇಲೂ, ಸಾಂಗಲಿಯ ತರುಣ ಭಾರತ ತಂಡ 27-21ರಿಂದ ಬಾಚಣಿಯ ಜೈಹನುಮಾನ್ ತಂಡದ ವಿರುದ್ಧವೂ; ಪುತ್ತೂರಿನ ಸೇಂಟ್ ಫಿಲೋಮಿನಾ ತಂಡ 20-5ರಿಂದ ಸಾಂಗಲಿಯ ತರುಣ ಭಾರತ ತಂಡದ ಮೇಲೂ; ಪನ್ನಾಲದ ಸಂಸ್ಕೃತಿ ತಂಡ 34-13ರಿಂದ ಠಾಣೆ ತಂಡದ ವಿರುದ್ಧವೂ; ಮುಂಬೈಯ ದೇನಾ ಬ್ಯಾಂಕ್ ತಂಡ 19-8 ಅಂಕಗಳಿಂದ ಯಶವಂತಪುರ ತಂಡದ ಮೇಲೂ; ಯಶವಂತಪುರ ತಂಡ 21-20 ಅಂಕಗಳಿಂದ ಪನ್ನಾಲದ ಸಂಸ್ಕೃತಿ ತಂಡದ ವಿರುದ್ಧವೂ ಜಯ ದಾಖಲಿಸಿದವು.

 

ಪ್ರತಿಕ್ರಿಯಿಸಿ (+)