ಸೋಮವಾರ, ಮಾರ್ಚ್ 8, 2021
19 °C

ಕಬೀರ್‌ ಬೇಡಿ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಬೀರ್‌ ಬೇಡಿ ಶ್ಲಾಘನೆ

ಹಾಡು–ನೃತ್ಯಗಳ ಸೊಗಸುಗಾರಿಕೆಯನ್ನು ಬಾಲಿವುಡ್‌ ಸಿನಿಮಾ ತೋರಿದಂತೆ ‘ಬ್ರಾಡ್ವೆ’ಗೆ ಕೂಡ ತೋರಲು ಆಗಿಲ್ಲ ಎಂದು ಕಬೀರ್‌ ಬೇಡಿ  ಹೊಗಳಿದ್ದಾರೆ.ನಾಲ್ಕು ದಶಕಗಳ ಕಾಲ ದೇಸಿ ಹಾಗೂ ವಿದೇಶಿ ಸಿನಿಮಾಗಳಲ್ಲಿ ಅಭಿನಯಿಸಿದ ಅನುಭವ ಇರುವ ಕಬೀರ್‌ ಅವರಿಗೀಗ 69 ವರ್ಷ. ಚಿತ್ರರಂಗದ ಹಲವು ಪಲ್ಲಟಗಳಿಗೆ ಸಾಕ್ಷಿಯಾದವರು ಅವರು. ತಾವು ಕಂಡ ಬದಲಾವಣೆಗಳನ್ನು ಬಾಲಿವುಡ್‌ ವಿಷಯದಲ್ಲಿ ಅನ್ವಯಿಸಿ ಅವರು ಹೇಳಿರುವುದು ಹೀಗೆ: ‘ಸಿನಿಮಾ ತಂತ್ರಗಾರಿಕೆಯಲ್ಲಿ ಭಾರತೀಯ ಚಿತ್ರರಂಗವು ಅಮೆರಿಕನ್‌ ಶೈಲಿಯನ್ನು ಅಳವಡಿಸಿಕೊಂಡಿದೆ. ಇದರಿಂದ ಆಗಿರುವ ಲಾಭ ಸಿನಿಮಾ ಚಿತ್ರೀಕರಣದ ಅವಧಿ ಮೊದಲಿಗಿಂತ ಸಾಕಷ್ಟು ಕಡಿಮೆಯಾಗಿರುವುದು.ವಿಶೇಷ ಪರಿಣಾಮಗಳ ಬಳಕೆಯ ವಿಷಯದಲ್ಲಿ ಹಾಲಿವುಡ್‌ ಈಗ ಸಾಕಷ್ಟು ಮುಂದಿದೆ, ನಿಜ. ಆದರೆ ವಸ್ತು ವೈವಿಧ್ಯದಲ್ಲಿ ಬಾಲಿವುಡ್‌ ಸಿನಿಮಾಗಳಿಗೆ ಸಾಟಿಯೇ ಇಲ್ಲ. ನಮ್ಮಲ್ಲಿ ಹಾಡು–ನೃತ್ಯಗಳ ಪರಿಕಲ್ಪನೆ ಅನನ್ಯ. ಸುಮ್ಮನೆ ಮರ ಸುತ್ತುವ ಹಾಡುಗಳನ್ನು ಈಗ ಯಾರೂ ಚಿತ್ರೀಕರಿಸುವುದಿಲ್ಲ. ಹೊಸತನಕ್ಕಾಗಿ ಎಲ್ಲರೂ ತುಡಿಯುತ್ತಾರೆ. ಈ ವಿಷಯದಲ್ಲಿ ಬಾಲಿವುಡ್‌ಗೆ ಬಾಲಿವುಡ್‌ ಮಾತ್ರ ಸಾಟಿ’.ಕಬೀರ್‌ ಬೇಡಿ ಹಲವು ದಶಕಗಳ ಕಾಲ ಸಿನಿಮಾ ಬದಲಾವಣೆಗಳನ್ನು ಸೂಕ್ಷ್ಮವಾಗಿ ಕಂಡವರು. 1970ರ ದಶಕದಲ್ಲೇ ವಿದೇಶಿ ನೆಲದಲ್ಲಿ ಧಾರಾವಾಹಿಯೊಂದರ ಮೂಲಕ ಸಂಚಲನೆ ಸೃಷ್ಟಿಸಿದವರು.‘ನಾವು ಯಾವತ್ತೂ ನಾಸ್ಟಾಲ್ಜಿಕ್‌ ಆಗಿ ಮಾತನಾಡುತ್ತೇವೆ. ಹಳೆಯ ಸಿನಿಮಾಗಳೇ ಶ್ರೇಷ್ಠ ಎಂದು ಅನೇಕರು ಹೇಳುವುದಿದೆ. ಅದು ಸುಳ್ಳು. ಯಾವುದೇ ದಶಕ ನೋಡಿದರೂ ಹತ್ತೋ ಹದಿನೈದೋ ಒಳ್ಳೆಯ ಸಿನಿಮಾಗಳು ಕಾಣುತ್ತವೆ. ಈಗಲೂ ಆ ಪ್ರಮಾಣ ಹಾಗೆಯೇ ಇದೆ. ಈಗ ತಂತ್ರಜ್ಞಾನ ಬೆಳೆದಿರುವು ದರಿಂದ, ಕಾರ್ಪೊರೇಟ್‌ ಸಂಸ್ಕೃತಿ ಸಿನಿಮಾ ಕ್ಷೇತ್ರದಲ್ಲೂ ಇರುವುದರಿಂದ ನಿರ್ಮಾಣದ ಸ್ವರೂಪ ಬದಲಾಗಿದೆ. ಹೆಚ್ಚು ಸಿನಿಮಾಗಳು ಬರುತ್ತಿವೆ. ಹಲವು ಚಿತ್ರೋತ್ಸವ ಗಳು ನಡೆಯುತ್ತಿರುವುದರಿಂದ ಅನೇಕರು ಆರೋಗ್ಯಕರ ಚರ್ಚೆ ನಡೆಸಲು ಕಾರಣವಾಗಿದೆ’ ಎಂದು ಕಬೀರ್‌ ಹೊಸಕಾಲದ ಸಿನಿಮಾಗಳನ್ನು ಮೆಚ್ಚಿ ಮಾತನಾಡಿದ್ದಾರೆ.ಚಿತ್ರೋತ್ಸವಗಳಲ್ಲಿ ಹಲವು ದೇಶಗಳ, ಭಿನ್ನ ಸಂವೇದನೆಯ ಜನರು ಮುಖಾಮುಖಿ ಯಾಗುವುದರಿಂದ ಹೊಸ ಆಲೋಚನೆಗಳು ಮೂಡುತ್ತವೆ ಎನ್ನುವುದು ಅವರ ಅನುಭವ ನುಡಿ.  ಮುಂದೆ ಯಾವ ಯಾವ ಸಿನಿಮಾಗಳಲ್ಲಿ ತೊಡಗಿಕೊಳ್ಳುವಿರಿ ಎಂದು ಕಬೀರ್‌ ಅವರನ್ನು ಕೇಳಿದರೆ, ‘ಮಾತನಾಡುವುದಕ್ಕಿಂತ ಮಾಡಿ ತೋರಿಸು ವುದನ್ನು ನಂಬುತ್ತೇನೆ’ ಎಂದು ಮಾತು ಮುಗಿಸುತ್ತಾರೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.