ಮಂಗಳವಾರ, ಜನವರಿ 21, 2020
29 °C

ಕಬ್ಬಿನ ದರ: 9ರಂದು ಮತ್ತೆ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಬ್ಬಿನ ದರ ನಿರ್ಧಾರಕ್ಕೆ ಸಂಬಂ­ಧಿಸಿದಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಡಿ. 9ರಂದು ಸಭೆ ನಡೆಸಲಿದ್ದೇನೆ. ಆ ಸಭೆಯಲ್ಲಿ ಗೊಂದಲಗಳು ನಿವಾರಣೆಯಾಗಲಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಗುರುವಾರ ನ್ಯಾನೊ ತಂತ್ರಜ್ಞಾನ ಸಮ್ಮೇಳನ­ದಲ್ಲಿ ಪಾಲ್ಗೊಂಡಿದ್ದ ಅವರು,ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.‘ಸರ್ಕಾರ ನಿಗದಿ ಮಾಡಿದ ದರ ನೀಡಲು ಹಲವು ಕಾರ್ಖಾನೆಗಳ ಮಾಲೀಕರು ಈಗಾಗಲೇ ಸಮ್ಮತಿ ಸೂಚಿಸಿದ್ದಾರೆ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಈ ವಿಷಯ­ವಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ. ಆದರೆ, ಡಿ. 9ರಂದು ನಡೆಯುವ ಸಭೆಯಲ್ಲಿ ಎಲ್ಲ ಗೊಂದಲ­ಗಳಿಗೆ ತೆರೆ ಬೀಳಲಿದೆ’ ಎಂದು ಹೇಳಿದರು.‘ಕಬ್ಬಿನ ವಿಷಯವಾಗಿ ಚರ್ಚಿಸಲು ನವದೆಹಲಿಯಲ್ಲಿ ಡಿ. 6ರಂದು ಪ್ರಧಾನ ಮಂತ್ರಿ­ಗಳು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆ­ದಿ­ದ್ದಾರೆ. ಆ ಸಭೆಯಲ್ಲಿ ಭಾಗವಹಿಸಲಿದ್ದೇನೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)