ಶುಕ್ರವಾರ, ಜನವರಿ 17, 2020
22 °C

ಕಬ್ಬು ಅರೆಯುವಿಕೆ ತಡ: ಸಕ್ಕರೆ ಉತ್ಪಾದನೆ ಶೇ 50ರಷ್ಟು ಕುಂಠಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ರಾಷ್ಟ್ರದಲ್ಲಿ ಪ್ರಸಕ್ತ ಹಂಗಾಮಿಗೆ(2013–2014) ಕಬ್ಬು ಅರೆಯುವಿಕೆ ತಡವಾಗಿರುವ ಹಿನ್ನೆಲೆಯಲ್ಲಿ ಸಕ್ಕರೆ ಉತ್ಪಾದನೆ ಶೇಕಡಾ 50ರಷ್ಟು 24.24 ಲಕ್ಷ ಟನ್ ಮಾತ್ರ ಆಗಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್ಎಂಎ) ತಿಳಿಸಿದೆ.ಸಕ್ಕರೆ ಕಾರ್ಖಾನೆಗಳು 2013–2014ನೇ (ಅಕ್ಟೋಬರ್ ನಿಂದ ಸೆಪ್ಟೆಂಬರ್) ಸಾಲಿನಲ್ಲಿ 250 ಲಕ್ಷ ಟನ್ ಸಕ್ಕರೆ ಉತ್ಪಾದಿಸಬೇಕಿತ್ತು. ರಾಷ್ಟ್ರಾದಾದ್ಯಂತ ಸಕ್ಕರೆ ಕಾರ್ಖಾನೆಗಳು ಡಿ. 15ರ ವರೆಗೆ 24.24 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಇದು ಕಳೆದ ವರ್ಷದ ಉತ್ಪಾದನೆಯ ಶೇಕಡಾ 50ರಷ್ಟು ಮಾತ್ರ ಇದೆ ಎಂದು ಐಎಸ್ಎಂಎ ತಿಳಿಸಿದೆ.ಕಬ್ಬು ದರ ನಿಗದಿ ವಿಚಾರವಾಗಿ ಕಬ್ಬು ಅರೆಯುವಿಕೆಯನ್ನು ತಡ ಮಾಡಿರುವ ಮಹಾರಾಷ್ಟ್ರ ಪ್ರಸಕ್ತ ಹಂಗಾಮಿನಲ್ಲಿ ಶೇ 35 ರಷ್ಟು ಸಕ್ಕರೆ ಉತ್ಪಾನೆ ಮಾಡಿದರೆ, ಕರ್ನಾಟಕದ 55 ಕಾರ್ಖಾನೆಗಳು ಡಿ. 15ರ ಅಂತ್ಯಕ್ಕೆ 4.77 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಇದರೊಂದಿಗೆ ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ ಶೇ 57ರಷ್ಟಿದೆ ಎಂದು ಐಎಸ್ಎಂಎ ಹೇಳಿದೆ.

ಪ್ರತಿಕ್ರಿಯಿಸಿ (+)