ಗುರುವಾರ , ಜನವರಿ 23, 2020
28 °C

ಕರಕುಶಲ ಮೇಳ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಕುಶಲ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ಫೂರ್ತಿ ಹಸ್ತ ಶಿಲ್ಪಕಲಾ ವಿಕಾಸ ಸಮಿತಿ ಕರಕುಶಲ ವಸ್ತುಗಳ ಪ್ರದರ್ಶನವನ್ನು ಆರಂಭಿಸಿದೆ.ಜ.11ರಿಂದ ಪ್ರಾರಂಭವಾಗಿರುವ ಈ ಭಾರತೀಯ ಕ್ರಾಫ್ಟ್ ಮೇಳದಲ್ಲಿ ಅನೇಕ ಕರಕುಶಲ ವಸ್ತುಗಳು, ಕೈಮಗ್ಗ, ಗೃಹೋಪಯೋಗಿ ಮತ್ತು ಅಲಂಕಾರಿಕ ಸಾಮಗ್ರಿಗಳು ದೊರೆಯಲಿವೆ.

ವಿವಿಧ ಬಗೆಯ ಉಡುಪುಗಳು, ಹಲವು ರಾಜ್ಯಗಳ ವಿಶೇಷ ಕಲಾಕೃತಿಗಳು, ಮರಗೆತ್ತನೆ ಶಿಲ್ಪಗಳು, ಪೀಠೋಪಕರಣಗಳು, ತೂಗುಯ್ಯಾಲೆ, ಹಿತ್ತಾಳೆ ಶಿಲ್ಪ ಕಲಾಕೃತಿಗಳು, ಉತ್ತರ ಪ್ರದೇಶದ ಆಭರಣಗಳು, ಹೈದರಾಬಾದ್ ಮುತ್ತುಗಳು, ಕಾಟನ್‌ಬಟ್ಟೆಗಳು, ಹೀಗೆ ಇನ್ನೂ ಕಣ್ಸೆಳೆಯುವ ಹಲವು ಅಲಂಕಾರಿ ವಸ್ತುಗಳು ಮೇಳದಲ್ಲಿ ಲಭ್ಯ.ಪ್ರದರ್ಶನ ಇದೇ ಜನವರಿ 23ರವರೆಗೆ ಗಣಪತಿ ದೇವಸ್ಥಾನದ ಬಳಿಯಿರುವ ಬಿಬಿಎಂಪಿ ಆಟದ ಮೈದಾನ, ಜೆ.ಪಿ.ನಗರ ಪುಟ್ಟೇನಹಳ್ಳಿ ಮುಖ್ಯ ರಸ್ತೆ, ಇಲ್ಲಿ ನಡೆಯಲಿದೆ. ಬೆಳಿಗ್ಗೆ 10.30ರಿಂದ ರಾತ್ರಿ 9.30ರವರೆಗೆ ಪ್ರದರ್ಶನ ಲಭ್ಯ.

ಪ್ರತಿಕ್ರಿಯಿಸಿ (+)