ಸೋಮವಾರ, ಜೂನ್ 14, 2021
27 °C

ಕರ್ನಾಟಕದ ಇತಿಶ್ರೀಗೆ ಮುನ್ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ. ಅಡೆ ತಡೆಗಳು ಇಲ್ಲದಿದ್ದರೆ ರಾಜ್ಯ ಅಭಿವೃದ್ಧಿಯಲ್ಲಿ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಮುಂದಿನ ವಿಧಾನ ಸಭಾ ಚುನಾವಣೆಗೆ ಮೊದಲು ರಾಜ್ಯವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವುದು ನನ್ನ ಗುರಿ~ ಎಂದಿದ್ದಾರೆ ಬಿ. ಎಸ್. ಯಡಿಯೂರಪ್ಪ (ಪ್ರ.ವಾ. ಮಾರ್ಚ್ 19).ರಾಜ್ಯದ ಸಮಗ್ರ ಅಭಿವೃದ್ಧಿ ತಮ್ಮಿಂದ ಮಾತ್ರವೇ ಸಾಧ್ಯ ಎಂಬ ನಂಬಿಕೆ ಅವರದು. ಅವರೇ ಮತ್ತೆ ಮುಖ್ಯಮಂತ್ರಿ ಆದರೂ ರಾಜ್ಯದ ಅಭಿವೃದ್ಧಿ ಸಾಧ್ಯವಾದೀತೇ? ಅವರಿಗೆ 70 ಶಾಸಕರ ಬೆಂಬಲ ಇದೆ. ಉಳಿದ 51 ಮಂದಿ ಶಾಸಕರ ಬೆಂಬಲ ಅವರಿಗೆ ಇಲ್ಲ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆದರೆ 20 ಮಂದಿ ಶಾಸಕರು ರಾಜೀನಾಮೆ ಕೊಡುತ್ತಾರೆ ಎಂದು ಸಚಿವ ಜಾರಕಿಹೊಳಿ ಬಹಿರಂಗವಾಗಿ ಹೇಳಿದ್ದಾರೆ. ಇಂತಹ ಗೊಂದಲದ ಪರಿಸ್ಥಿತಿಯಲ್ಲಿ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ?ಬಿಎಸ್‌ವೈ ಹಗಲು ಕನಸು ಕಾಣುತ್ತಿದ್ದಾರೆ ಅಥವಾ ರಾಜ್ಯದ ಜನರ ಕಿವಿಯ ಮೇಲೆ ಹೂ ಇಡಲು ಹೊರಟಿದ್ದಾರೆ. ಮುಂದಿನ  ಒಂದೂವರೆ ವರ್ಷದಲ್ಲಿ ರಾಜ್ಯವನ್ನು~ಮೊದಲ ಸ್ಥಾನಕ್ಕೆ~ ತರುವುದು ತಿರುಕನ ಕನಸಷ್ಟೇ. ಕರ್ನಾಟಕದ ಅಭಿವೃದ್ಧಿಗೆ ಇತಿಶ್ರಿ ಹಾಡಿದ ಯಡಿಯೂರಪ್ಪ ಅವರೇ ಭಾಜಪಕ್ಕೂ ಅದೇ ಗತಿ ತೋರಿಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.