ಭಾನುವಾರ, ಜನವರಿ 19, 2020
27 °C

ಕಲಂ 370 ಚರ್ಚೆಗೆ ಸಿದ್ಧ: ಒಮರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ (ಪಿಟಿಐ): ಸಂವಿಧಾನದ ಕಲಂ 370ರ ಬಗ್ಗೆ ಚರ್ಚೆ ನಡೆಸಲು ‘ಯಾವತ್ತೂ’, ‘ಎಲ್ಲಿಯಾದರೂ’ ಸಿದ್ಧ­ನಿ­ದ್ದೇನೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ­ಮಂತ್ರಿ ಒಮರ್‌ ಅಬ್ದುಲ್ಲಾ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಮರು ಸವಾಲು ಹಾಕಿದ್ದಾರೆ.‘ಕಲಂ 370ರ ಬಗ್ಗೆ ಅವರು ಚರ್ಚೆ ನಡೆಸಬೇಕು ಎಂದು ಬಯಸಿದ್ದಲ್ಲಿ. ಎಲ್ಲಿ ಮತ್ತು ಯಾವಾಗ ಚರ್ಚೆ ನಡೆಸಬೇಕು ಎನ್ನುವುದು ಹೇಳಲಿ. ಅಹಮದ­ಬಾದ್‌ನಲ್ಲಿ ಚರ್ಚೆ  ಆಯೋಜಿಸಿದ್ದರೂ ನಾನು ಸಿದ್ಧನಿದ್ದೇನೆ’ ಎಂದು ಸಾರ್ವಜನಿಕ ಸಭೆಯಲ್ಲಿ ಒಮರ್‌ ಹೇಳಿದರು.‘ಜಮ್ಮು ಮತ್ತು ಕಾಶ್ಮೀರದ ಗೊತ್ತಿಲ್ಲದವರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತನಾಡುತ್ತಿದ್ದಾರೆ. ಕಲಂ 370 ಬಗ್ಗೆ ಅರಿವಿಲ್ಲದೇ ಇದ್ದವರು ಅದರ ಬಗ್ಗೆ ಮಾತನಾಡುತ್ತಿ­ದ್ದಾರೆ’ ಎಂದು ಅವರು ಟೀಕಿಸಿದರು.

ಪ್ರತಿಕ್ರಿಯಿಸಿ (+)