ನಾದಂ ಸಂಸ್ಥೆಯವರು ಪ್ರತಿವರ್ಷ ನಡೆಸುವ `ಕಲಾನಾದಂ' ಉತ್ಸವವನ್ನು ಈ ವರ್ಷ ಭಾರತೀಯ ವಿದ್ಯಾಭವನದ ಸಹಭಾಗಿತ್ವದಲ್ಲಿ ಕಳೆದ ವಾರ ನಡೆಸಿದರು. ಕರ್ನಾಟಕಿ ಗಾಯನ, ಹಿಂದೂಸ್ತಾನಿ ಗಾಯನ, ಲಯವಾದ್ಯ ಗೋಷ್ಠಿಗಳ ಮೂಲಕ ಒಂದು ವೈವಿಧ್ಯಮಯ ಕಾರ್ಯಕ್ರಮ ನೀಡಿದರು.

ಇಲ್ಲಿ ಹಾಡಿದ ವಿದುಷಿ ಮನೋರಮಾ ಮೆಹ್ತಾ ಕೆಲ ವರ್ಷಗಳ ಹಿಂದಿನವರೆಗೆ ನಗರದ ಸಂಗೀತಾಭಿಮಾನಿಗಳಿಗೆ ಪರಿಚಿತರಾಗಿದ್ದ ಕಲಾವಿದೆ. ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ನಾಲ್ಕಾರು ಕಡೆ ಹಾಡಿದ ಅನುಭವವೂ ಇದೆ. ಇದೀಗ ತಮ್ಮ ಮಗಳ ಜೊತೆ (ಚಂದ್ರಿಕಾ ಕೆ. ಮೆಹ್ತಾ) ಯುಗಳ ಗಾಯನ ಮಾಡಿದರು. ಚಂದ್ರಿಕಾ ಸಹ ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರೆಯೇ. ಕೆಲ ದಶಕಗಳ ಹಿಂದೆ ಬಳಕೆಯಲ್ಲಿದ್ದ ರಾಗ-ರಚನೆಗಳನ್ನು ಆಯ್ದು, ಗತ ವೈಭವವನ್ನು ನೆನಪಿಸಿದರು.

ಬಾಲಗೋಪಾಲ'ವನ್ನು ನೆರವಲ್, ಸ್ವರಪ್ರಸ್ತಾರಗಳಿಂದ ವಿಸ್ತರಿಸಿದರು. ಆ ಮೊದಲು ಭೈರವಿಯನ್ನು ವಿಸ್ತರಿಸಿ, ರಾಗದ ಒಂದು ಉತ್ತಮ ಚಿತ್ರ ಬಿಡಿಸಿದರು. ಕಂಠದಲ್ಲಿ ಆಗಾಗ್ಗೆ ವಯಸ್ಸಿನ ಛಾಯೆ ಇಣುಕುತ್ತಿದ್ದರೂ ಪ್ರೌಢತೆಗೇನೂ ಕೊರತೆ ಇರಲಿಲ್ಲ. ಪರಿಚಿತ ಕೀರ್ತನೆ ಯೋಚನಾಗೆ ಮನೋರಮಾ ಕಿರು ಸ್ವರ ಹಾಕಿದರೂ ಚಂದ್ರಿಕಾ ಯಾಕೊ ಸ್ವರ ಪ್ರಸ್ತಾರದಲ್ಲಿ ಪಾಲ್ಗೊಳ್ಳಲಿಲ್ಲ! ತನ್ನ ಸಾಧನೆ-ಪ್ರತಿಭೆಗಳನ್ನು ಆಧರಿಸಿ ತನಿಯಾಗಿ ಹಾಡಲು ಚಂದ್ರಿಕಾ ಪ್ರಯತ್ನಿಸಬೇಕು.

ದೇವರನಾಮ (ಹರಿ ಕುಣಿದಾ ನಮ್ಮ) ಭಜನ್ (ಮೇರೆ ತೊ ಗಿರಿಧರ್ ಗೋಪಾಲ್) ಹಾಗೂ ತಿಲ್ಲಾನ (ಜಿಂಜೋಟಿ)ಗಳನ್ನೂ ಸೇರಿಸಿ, ಕಛೇರಿಗೆ ಪೂರ್ಣತ್ವ ಕೊಟ್ಟರು. ಪಿಟೀಲಿನಲ್ಲಿ ಚಾರುಲತಾ ರಾಮಾನುಜನ್, ಮೃದಂಗದಲ್ಲಿ ವಿ.ಎಸ್.ರಾಜಗೋಪಾಲ್ ಹಾಗೂ ಘಟದಲ್ಲಿ ಟಿ.ಎನ್. ರಮೇಶ್ ನೆರವಾದರು.

ಪೇಲವ ಗಾಯನ
ಕಲಾ ನಾದಂ ಉತ್ಸವದಲ್ಲಿ ಹಿಂದೂಸ್ತಾನಿ ಸಂಗೀತ ಹಾಡಿದ ಪಂಡಿತ್ ಅಮರೇಂದ್ರ ಧಾನೇಶ್ವರ್ ಅವರು ಮುಂಬಯಿ ವಾಸಿ ಹಾಗೂ ಗ್ವಾಲಿಯರ್ ಘರಾನಕ್ಕೆ ಸೇರಿದವರು. ಅನೇಕ ಸಂಗೀತ ಸಂಬಂಧಿ ಲೇಖನಗಳನ್ನು ಬರೆದಿರುವ ಇವರು ದೂರದರ್ಶನ, ಬಾನುಲಿಗಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಬರೆದು ಕೊಟ್ಟಿದ್ದಾರೆ. ಪಂಡಿತ್ ಅಮರೇಂದ್ರ ಧಾನೇಶ್ವರ್ ಅಂದಿನ ಕಾರ್ಯಕ್ರಮವನ್ನು ಬೇಹಾಗ್ ರಾಗದೊಂದಿಗೆ ಪ್ರಾರಂಭಿಸಿದರು.

ಕ್ರಮೇಣ ರಾಗವನ್ನು ಬೆಳೆಸುತ್ತಾ, ಜೀವ ಸ್ವರಗಳನ್ನು ಸ್ಪರ್ಶಿಸುತ್ತಾ ಸಾಂಗವಾಗಿ ರಾಗವನ್ನು ಪಸರಿಸುವ ಪ್ರಯತ್ನ ಮಾಡಿದರು. ಅದು ಪ್ರಖರವಾಗಿ ಬೆಳಗದಿದ್ದರೂ, ಸರಳವಾಗಿ ನಿರೂಪಿತವಾಯಿತು. ಮಧ್ಯ ಲಯದಲ್ಲಿ ಜೈಜೈವಂತಿ, ಒಂದು ಠುಮ್ರಿ ಹಾಗೂ ಭಜನ್ಗಳನ್ನು ಪ್ರಸ್ತುತ ಪಡಿಸಿದರೂ ಗಾಢವಾಗಿ ಇರಲಿಲ್ಲ.

ನಾದ ನಮನ
ವಿದುಷಿ ವೀಣಾ ಕಿನ್ಹಾಲ್ ಅವರು ತಮ್ಮ ವೀಣಾವಾದನದಲ್ಲಿ ಪೂರ್ಣವಾಗಿ ಎಲ್. ರಾಜಾರಾಯರ ಕೃತಿಗಳನ್ನೇ ಆರಿಸಿದ್ದು, ಔಚಿತ್ಯಪೂರ್ಣವಾಗಿತ್ತು. ಅಭೋಗಿ ರಾಗದಲ್ಲಿ `ವಂದಿಪೆನಾನು' ಮೂಲಕ ವಿಘ್ನರಾಜನಿಗೆ ವಂದಿಸಿ, ಸರಸ್ವತಿ ರಾಗದಲ್ಲಿ `ಸರಸ್ವತಿ ವನಜಭವ ಸತಿ' ಪ್ರಸ್ತುತಪಡಿಸಿದರು. ರಾಜಾರಾಯರು ಅನೇಕ ದೇವರನಾಮ, ವಚನಗಳಿಗೂ ರಾಗ ಸಂಯೋಜನೆ ಮಾಡಿದ್ದಾರೆ. ಅವುಗಳಲ್ಲಿ ಒಂದಾದ `ಊರಿಗೆ ಬಂದರೆ ದಾಸಯ್ಯ' (ಕಾಪೀ ರಾಗ)ವನ್ನು ನುಡಿಸಿದರು. ಕಿರು ಕಾರ್ಯಕ್ರಮವಾದರೂ ವೀಣಾ ಸರಳ ನಿರೂಪಣೆ, ಮೃದುವಾದ ಮೀಟುಗಳಿಂದ ವೀಣೆ ನುಡಿಸಿ, ತನ್ನ ಗುರುಗಳಿಗೆ ನಾದಾಂಜಲಿ ಸಲ್ಲಿಸಿದರು.

ನಂತರ ವೀಣಾ ರಾಜಾರಾಯರ ಶಿಷ್ಯರಲ್ಲಿ ಒಬ್ಬರಾದ ಡಾ. ಸುಮಾ ಸುಧೀಂದ್ರ ಅವರು ವೀಣಾವಾದನ ಮಾಡಿದರು. ಅವರೊಂದಿಗೆ ಪಿಟೀಲಿನಲ್ಲಿ ಎಂ.ಎಂ. ಗಣೇಶ್, ಮೃದಂಗದಲ್ಲಿ ಸಿ. ಚೆಲುವರಾಜ್ ಹಾಗೂ ಘಟದಲ್ಲಿ ನಾರಾಯಣಮೂರ್ತಿ ಸಹಕರಿಸಿದರು. ಕಲ್ಯಾಣಿ ವರ್ಣದಿಂದ ಕಛೇರಿ ಪ್ರಾರಂಭಿಸಿದರು. ವರ್ಣ ಪರಿಚಿತವಾದದ್ದೇ ಆದರೂ ನಿರೂಪಣೆಯಲ್ಲಿ ತಾಜಾತನವಿತ್ತು. ಐದು ಕಾಲಗಳಲ್ಲಿ ವರ್ಣ ನುಡಿಸಿ, ಕಾವು ತುಂಬಿದರು. ಓಟದಲ್ಲೂ ಮೂಡಿದ ವಿರಳತೆ ಗಮನಾರ್ಹ.

ಭೌಳಿ ರಾಗದಲ್ಲಿ ತಮ್ಮ ಗುರುಗಳ ಒಂದು ರಚನೆಯನ್ನು ಆಯ್ದು, ವಿಘ್ನರಾಜನಿಗೆ ವಂದಿಸಿದರು. ಷಣ್ಮುಖಪ್ರಿಯ ರಾಗವನ್ನು ವಿಸ್ತಾರಕ್ಕೆ ಆಯ್ದರು. 56ನೇ ಮೇಳಕರ್ತ ರಾಗವಾದ ಷಣ್ಮುಖಪ್ರಿಯ ಮೊದಲು ತ್ರಿಮೂರ್ತಿ ಹಾಗೂ ಚಾಮರ ಎಂದು ಪರಿಚಿತವಾಗಿತ್ತು. ಇಂದು ಬಹು ವಾಡಿಕೆಯಲ್ಲಿರುವ ಈ ರಾಗ, ತ್ರಿಮೂರ್ತಿಗಳ ನಂತರದ ವಾಗ್ಗೇಯಕಾರರಲ್ಲಿ ಹೆಚ್ಚು ಜನಪ್ರಿಯ. ಈ ರಾಗವನ್ನು ಹಿತಮಿತವಾಗಿ ಬೆಳೆಸಿದ ಡಾ. ಸುಮಾ, ಎಲ್ಲರಿಗೂ ಪ್ರಿಯವಾದ ಮರಿವೇರೆಯನ್ನು ತೆಗೆದುಕೊಂಡು ವಿಸ್ತರಿಸಿದರು. ಆ ಮೊದಲು ತಾನವನ್ನು ಬಿಗಿ ಹಂದರದಲ್ಲಿ ನುಡಿಸಿ, ಕೀರ್ತನೆಗೆ ಒಳ್ಳೆಯ ಪಾಯ ಹಾಕಿದರು. ಕೊನೆಯಲ್ಲಿ ತಿಲ್ಲಾನ ಹಾಗೂ ದೇವರನಾಮಗಳನ್ನೂ ನುಡಿಸಿ, ಕೇಳುಗರನ್ನು ಸಂತೋಷಗೊಳಿಸಿದರು.

ಆ ಮೊದಲು ನಡೆದ ವಿಶೇಷ ಸಮಾರಂಭದಲ್ಲಿ ಗಣ್ಯ ಸ್ಯಾಕ್ಸೋಫೋನ್ ವಾದಕ ಡಾ. ಕದ್ರಿ ಗೋಪಾಲನಾಥ್ ಅವರಿಗೆ ಕುಲಪತಿ ಡಾ. ಎಸ್.ಸಿ.ಶರ್ಮಾ ಅವರು ವೀಣೆ ರಾಜಾರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು.

ಮೋಹಿನಿ ಆಟ
ಕೇರಳ ಸಂಗೀತ ನಾಟಕ ಅಕಾಡೆಮಿ ಈ ವರ್ಷದ ಮೋಹಿನಿ ನೃತ್ಯಾತಿ ಮಹೋತ್ಸವವನ್ನು ರಾಷ್ಟ್ರದ ಹತ್ತು ನಗರಗಳಲ್ಲದೆ ಸಿಂಗಪುರ ಮತ್ತು ಕೌಲಾಲಂಪುರಗಳಲ್ಲೂ ಏರ್ಪಡಿಸಿದೆ. ಬೆಂಗಳೂರಿನಲ್ಲಿ ಮುದ್ರಾ ಹಾಗೂ ಈಸ್ಟ್ ಕಲ್ಚರಲ್ ಅಸೋಸಿಯೇಷನ್ಗಳ ಸಹಯೋಗದಲ್ಲಿ ಮೂರು ದಿನಗಳ ಮೋಹಿನಿ ಆಟವನ್ನು ಕಳೆದ ವಾರ ವ್ಯವಸ್ಥೆ ಮಾಡಿದ್ದರು.

ಮೊದಲು ನರ್ತಿಸಿದ ಡಾ. ಸುನಂದಾ ನಾಯರ್ ಪಿಎಚ್.ಡಿ ಗಳಿಸಿ, ರಾಷ್ಟ್ರದ ಒಳ ಹೊರಗೆ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಈ ಅನುಭವ ಸುನಂದಾ ನಾಯರ್ ಅವರ ಕಾರ್ಯಕ್ರಮದ ಉದ್ದಕ್ಕೂ ಗೋಚರವಾಗುತ್ತಿತ್ತು. ಗಣೇಶ ಸ್ತುತಿಯೊಂದಿಗೆ ಪ್ರಾರಂಭಿಸಿ, ಸ್ವಾತಿ ತಿರುನಾಳರ ಸುಪ್ರಸಿದ್ಧ ಕೃತಿ ಭಾವಯಾಮಿ ರಘುರಾಮಂ ತೆಗೆದುಕೊಂಡರು. ಸೀತಾ ಸ್ವಯಂವರ, ಜಟಾಯು, ಶೂರ್ಪಣಖಾ ಪ್ರಸಂಗ, ಮಾಯಾಮೃಗ ಮುಂತಾದ ಘಟನೆಗಳನ್ನು ಸಂಚಾರಿಯಲ್ಲಿ ಮಾಡಿದರು. ನಾಟಕೀಯ ಅಂಶಗಳಿಂದ ರಂಜಿಸುತ್ತಾ ಪ್ರಖರವಾಗಿ ಅಭಿನಯಿಸಿದರು. ಗಾಯನವೂ ನೃತ್ತದ ಪ್ರಭಾವವನ್ನು ಇಮ್ಮಡಿಗೊಳಿಸುವಲ್ಲಿ ಯಶಸ್ವಿಯಾಯಿತು.

ಎರಡನೆಯ ಕಾರ್ಯಕ್ರಮ ಮಾಡಿದ ಐಶ್ವರ್ಯಾ ವಾರಿಯರ್ ಸಹ ಅನುಭವಸ್ಥರೇ. ಕಾಳಿದಾಸನ ಅಭಿಜ್ಞಾನ ಶಾಕುಂತಲ ಪ್ರಪಂಚ ಪ್ರಸಿದ್ಧ. ಅದನ್ನು ಮೋಹಿನಿ ಆಟಕ್ಕೆ ಅಳವಡಿಸಿದ್ದರು. ಮಧುರ ಸಂಗೀತದ ಹಿನ್ನೆಲೆಯಲ್ಲಿ, ಒಬ್ಬರೇ ನರ್ತಿಸಿದರು. ಸಾಂಪ್ರದಾಯಿಕ ವಸ್ತ್ರ, ತಲೆಗಂಟಿನೊಡನೆ ನರ್ತಿಸಿದರಾದರೂ ಅಭಿನಯ ಅಷ್ಟು ಪ್ರಖರವಾಗಲಿಲ್ಲ ಎಂದೇ ಹೇಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.