ಆಲಮಟ್ಟಿ: ವಿಜಾಪುರ ಜಿಲ್ಲೆಯ ಬರ ಸ್ಥಿತಿ ಅಧ್ಯಯನಕ್ಕಾಗಿ ಆಗಮಿಸಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಬುಧವಾರ ಆಣೆಕಟ್ಟೆ ಮತ್ತು ವಿವಿಧ ಉದ್ಯಾನಗಳ ವೀಕ್ಷಣೆ ಮಾಡಿದರು.

ಉದ್ಯಾನಗಳ ನಿರ್ವಹಣೆಯನ್ನು ಶ್ಲಾಘಿಸಿದ ಅವರು, ರಾಮಾಯಣವನ್ನು ಪರಿಚಯಿಸುವ ಲವ ಕುಶ ಉದ್ಯಾನ ವನದಲ್ಲಿರುವ ಮೂರ್ತಿಗಳನ್ನು ತಯಾರಿಸಿದ ಕಲಾವಿದರ ಕೈಚಳಕವನ್ನು ಮುಕ್ತಕಂಠದಿಂದ ಹೊಗಳಿದರು.

ಸಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಎಸ್.ಕೆ. ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ, ಸಾರ್ವಭೌಮ ಬಗಲಿ, ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಶಿವಾನಂದ ಕಲ್ಲೂರ, ಕೆಬಿಜೆಎನ್ಎಲ್ನ ಎಂ.ಡಿ. ಕಪಿಲ್ ಮೋಹನ್, ಡಿಎಫ್ಒ ದಿಲೀಪ್ ಅಘೋರೆ, ಎಂಜಿನಿಯರ್ ಪೊದ್ದಾರ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಉಪಸ್ಥಿತರಿದ್ದರು.

ಪ್ರವಾಸಿ ಮಂದಿರ ಉದ್ಘಾಟನೆ: ಬಸವನ ಬಾಗೇವಾಡಿ ತಾಲ್ಲೂಕಿನ ಬಸವನಬಾಗೇವಾಡಿ, ಕೊಲ್ಹಾರ ಹಾಗೂ ಮುಳವಾಡ ಗ್ರಾಮಗಳಲ್ಲಿ ನಿರ್ಮಿಸಿದ ಪ್ರವಾಸಿ ಮಂದಿರಗಳನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಸಾಂಕೇತಿಕವಾಗಿ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.