ನವದೆಹಲಿ: ಮದುವೆಗೂ ಎರಡು ಗಂಟೆಗಳ ಮೊದಲು ವಧುವಿನ ಉಡುಗೆ ಧರಿಸಿ ಯುವತಿಯೊಬ್ಬಳು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಬಂದಿದ್ದಾಳೆ ಎನ್ನುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಅನೇಕರು, ಹುಡುಗಿ ಹೀಗೆ ಮಾಡುವುದು ಸರಿಯಲ್ಲ, ಮದುವೆಯಾಗುವ ಹುಡುಗನ ಗತಿಯೇನು ಎಂದೆಲ್ಲ ಕಮೆಂಟ್ ಮಾಡಿದ್ದಾರೆ.

ಆದರೆ ಈ ವಿಡಿಯೊ ನಕಲಿಯಾಗಿದೆ.

ಪಿಟಿಐ ಸುದ್ದಿ ಸಂಸ್ಥೆಯ ಫ್ಯಾಕ್ಟ್ಚೆಕ್ ಡೆಸ್ಕ್ ವಿಡಿಯೊವನ್ನು ಪರಿಶೀಲನೆ ನಡೆಸಿದಾಗ, ಇದು ಕಂಟೆಂಟ್ಗಾಗಿ ಮಾಡಿದ ವಿಡಿಯೊವಾಗಿದ್ದು, ನಿಜವಾಗಿ ನಡೆದ ಘಟನೆಯಲ್ಲ ಎನ್ನುವುದು ಪತ್ತೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ

ಕಂಟೆಂಟ್ ಕ್ರಿಯೇಟರ್ ಆರವ್ ಮಾವಿ ಎನ್ನುವವರು ಡಿ.13ರಂದು ಈ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಪಿಟಿಐಗೆ ಸ್ಪಷ್ಟಪಡಿಸಿರುವ ಆರವ್, ಇದು ಸ್ಕ್ರಿಪ್ಟ್ ಮೂಲಕ ಮಾಡಿದ ವಿಡಿಯೊವಾಗಿದ್ದು ಯಾರೊಬ್ಬರ ಜೀವನಕ್ಕೆ ಸಂಬಂಧಿಸಿದ ನೈಜ ಘಟನೆಯಲ್ಲ ಎಂದಿದ್ದಾರೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ನಿಜ ಘಟನೆಯೆಂದು ನಂಬಿರುವ ಬಳಕೆದಾರರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ‘ವೆನಮ್’ ಎನ್ನುವ ಹೆಸರಿನ ಬಳಕೆದಾರರೊಬ್ಬರು ವಿಡಿಯೊ ಹಂಚಿಕೊಂಡು, ‘ಆಕೆ ಮದುವೆಗೆ ಸಜ್ಜಾಗಿದ್ದಾಳೆ. ಆದರೂ ಮಾಜಿ ಗೆಳೆಯನನ್ನು ಭೇಟಿಯಾಗಲು ಬಂದಿದ್ದಾಳೆ. ಈ ರೀತಿಯ ಅನೇಕ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತವೆ. ಹಿಂದಿನದು ನಿಜವಾಗಿಯೂ ಮುಖ್ಯವಾಗಿರುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.