ಮಂಗಳವಾರ, ಜನವರಿ 28, 2020
19 °C

ಕಲಾ ಆರ್ಟ್ಸ್‌ ಮತ್ತು ಕ್ರಾಫ್ಟ್ಸ್‌ ಟ್ರಸ್ಟ್‌ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ. ಡಿ.6ರಿಂದ ಡಿ.15ರವರೆಗೆ ದೇಸಿ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.

ಶುಕ್ರವಾರ ಸಂಜೆ 5ಕ್ಕೆ ಉದ್ಘಾಟನೆ. ಅತಿಥಿ– ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ಡಿ.ಕೆ. ಚೌಟ, ಜವಳಿ ಇಲಾಖೆ ಅಭಿವೃದ್ಧಿ ಆಯುಕ್ತ ಶಶಿಧರ್‌, ಬನಶಂಕರಿ ಮಹಿಳಾ ಸಮಾಜದ ಕಾರ್ಯದರ್ಶಿ ಶಾಂತಾ ರಾಮಸ್ವಾಮಿ.ಮೇಳದಲ್ಲಿ 125 ಮಳಿಗೆ, 22 ರಾಜ್ಯಗಳ ಕರಕುಶಲ ಕರ್ಮಿಗಳು, ಕಸೂತಿ, ಖಾದಿ, ಬನಾರಸ್‌ ಸೀರೆಗಳು,  ಪುರುಷ ಮತ್ತು ಮಹಿಳೆಯರ ಕುರ್ತಾಗಳು,   ಚಿತ್ರಕಲೆಗಳು, ಮಕ್ಕಳ ಉಡುಪು, ಆಭರಣ, ಮರದ ಕೆತ್ತನೆ, ಚರ್ಮದ ಬ್ಯಾಗ್‌, ಗೃಹೋಪಯೋಗಿ ವಸ್ತುಗಳು ಇರಲಿವೆ. ಪ್ರತಿ ಸಾಯಂಕಾಲ ಡೊಳ್ಳು ಕುಣಿತ, ಯಕ್ಷಗಾನ, ಪೂಜಾ ಕುಣಿತ, ಭರತನಾಟ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರದರ್ಶನ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ.

ಪ್ರತಿಕ್ರಿಯಿಸಿ (+)