ಜನವರಿ ಕಡೆಯ ವಾರ, ಪದವಿ ಕಾಲೇಜಿನಲ್ಲಿ ಪಾಠ ಮಾಡುವ ಗೆಳೆಯರೊಬ್ಬರು ಹೇಳಿದ್ದು: ‘ಸಾರ್ ನಾನು ಕ್ಲಾಸಿಗೆ ಹೋಗದೇ ಎರಡು ತಿಂಗಳಾಯಿತು. ಅಕ್ಟೋಬರ್ ಅಂತ್ಯಕ್ಕೆ ನಮ್ಮ ತರಗತಿಗಳು ಮುಗಿದವು. ನಂತರ ಸೆಮಿಸ್ಟರ್ ಪರೀಕ್ಷೆ, ಅದಾದ ನಂತರ ಮೌಲ್ಯಮಾಪನ, ಇನ್ನೂ ಹದಿನೈದು ದಿನ ಮೌಲ್ಯಮಾಪನ ಕಾರ್ಯ ಮುಗಿಯುವಂತೆ ಕಾಣುತ್ತಿಲ್ಲ. ಹೆಸರಿಗೆ ಕಾಲೇಜು ಆರಂಭವಾಗಿದ್ದರೂ ಕಾಲೇಜಿನಲ್ಲಿ ಮೇಷ್ಟ್ರುಗಳೂ ಇಲ್ಲ ವಿದ್ಯಾರ್ಥಿಗಳೂ ಇಲ್ಲ!

ಇವರೆಲ್ಲ ವಾಪಸ್ ಬಂದು ತರಗತಿ ಒಂದು ಹಂತಕ್ಕೆ ಬರುವಾಗ, ಇನ್ನೇನಾದರೂ ಸ್ಟ್ರೈಕು, ಯಾರೋ ಸತ್ತಿದ್ದಕ್ಕೆ ರಜೆ, ಆಮೇಲೆ ಸಾಲು ಸಾಲು ಬೀಳ್ಕೊಡುಗೆಗಳು. ಈ ವರ್ಷವಂತೂ ಚುನಾವಣೆ ದೂಳೆಬ್ಬಿಸುವ ಸಾಧ್ಯತೆ ಇರುವುದರಿಂದ ಕ್ಲಾಸುಗಳು ಎಷ್ಟು ದಿನ ನಿಜಕ್ಕೂ ನಡೆಯುವವೋ ಹೇಳಲಾಗದು. ಈ ಸೆಮಿಸ್ಟರ್ ಪದ್ಧತಿ ಬಂದಮೇಲೆ ಪಾಠ ಮಾಡುವ ದಿನಗಳೇ ಕಡಿಮೆಯಾಗಿವೆ. ಎಷ್ಟೋ ಕ್ಲಾಸುಗಳು ಆರಂಭಗೊಳ್ಳುವ ಮೊದಲೇ ಮುಗಿದು ಹೋಗುತ್ತವೆ’.

ಪಾಠ ಮಾಡುವ ಬಗ್ಗೆ ಆಸ್ಥೆಯಿರುವ ಕಾಲೇಜು ಅಧ್ಯಾಪಕರೊಬ್ಬರು ಹೇಳಿದ ಈ ಮಾತು ಈಚಿನ ದಿನಗಳಲ್ಲಿ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ನಡೆದಿರುವ ಪಾಠದ ಭರಾಟೆಯನ್ನು ವಸ್ತುನಿಷ್ಠವಾಗಿ ನಿರೂಪಿಸಬಲ್ಲದು. ನಿಜವೆಂದರೆ ಖಾಸಗಿ ಕಾಲೇಜುಗಳನ್ನು ಬಿಟ್ಟರೆ ರಾಜ್ಯದ ಬಹುತೇಕ ಸರ್ಕಾರಿ ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಅಧೀನ ಕಾಲೇಜುಗಳಲ್ಲಿ ಪರಿಸ್ಥಿತಿ ಹೀಗೇ ಇದೆ. ಸೆಮಿಸ್ಟರ್ ಬಂದಮೇಲೆ ಅಧ್ಯಾಪಕರಿಗೆ ಪಾಠ ಮಾಡಲು ಪುರಸತ್ತೇ ಇಲ್ಲ ಎಂಬಂತಾಗಿದೆ! ಹತ್ತಾರು ವರ್ಷಗಳಿಂದ ಮೇಷ್ಟ್ರುಗಳಾಗಿರುವವರ ಗಮನಕ್ಕೆ ಬಂದಿರುವುದೆಂದರೆ ದಾಖಲೆಗಳಲ್ಲಿ ಏನೇ ಇರಲಿ ವಾಸ್ತವವಾಗಿ ಪಾಠ ನಡೆಯುವ ದಿನಗಳೇ ಕಡಿಮೆಯಾಗಿರುವುದು.

ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿರ್ದೇಶನದಂತೆ ಈಗ ದೇಶದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಸೆಮಿಸ್ಟರ್ ಪದ್ಧತಿ ಜಾರಿಯಲ್ಲಿದೆ. ಇದು ವಾರ್ಷಿಕವಾಗಿ ನಡೆಯುತ್ತಿದ್ದ ಪಾಠ-ಪ್ರವಚನ ಹಾಗೂ ಪರೀಕ್ಷಾ ವಿಧಾನವನ್ನು ಬದಲಿಸಿ ನಾಲ್ಕು ತಿಂಗಳ ಪದ್ಧತಿಯನ್ನು ಜಾರಿಗೆ ತಂದ ವ್ಯವಸ್ಥೆ. ಒಂದು ಸೆಮಿಸ್ಟರಿಗೆ ಕಡಿಮೆಯೆಂದರೂ ೧೬ ವಾರಗಳ ಪಾಠ ನಡೆಯಬೇಕೆಂಬ ನಿಯಮವಿದೆ. ಆದರೆ ಆರು ವಾರಗಳ ಪಾಠವೂ ಅಡ್ಡಿ ಆತಂಕಗಳಿಲ್ಲದೇ ನಡೆಯುವುದು ಕಷ್ಟ ಎಂಬಂತ ಪರಿಸ್ಥಿತಿ ಎಲ್ಲೆಡೆ ಕಂಡುಬರುತ್ತಿದೆ.

ಸೆಮಿಸ್ಟರ್ ಪದ್ಧತಿಯ ಜಾರಿಯಿಂದಾಗಿ ವರ್ಷಕ್ಕೆ ಒಂದು ಬಾರಿ ನಡೆಯಬೇಕಿದ್ದ ಪರೀಕ್ಷಾ ಕೆಲಸಗಳೆಲ್ಲ ಈಗ ಎರಡು ಬಾರಿ ನಡೆಯು ವಂತಾದವು. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಐಚ್ಛಿಕ ವಿಷಯಗಳ ಅವಕಾಶ ನೀಡುವ ಮೈಸೂರಿನ ಮಹಾರಾಜಾ ಕಾಲೇಜಿನಂಥ ಕಡೆ ಸೆಮಿಸ್ಟರ್ ಪರೀಕ್ಷೆಗೆ ಎರಡು ತಿಂಗಳು ಬೇಕು. ಅನಿವಾರ್ಯ ಕಾರಣಗಳಿಂದ ಪರೀಕ್ಷೆ ಮುಂದಕ್ಕೆ ಹೋದರೆ ಈ ಅವಧಿ ಇನ್ನೂ ಹೆಚ್ಚು. ಅವುಗಳ ಮೌಲ್ಯಮಾಪನಕ್ಕೂ ಅಷ್ಟೇ ಕಾಲ ಬೇಕು.

ಹೀಗಾಗಿ ಹೆಸರಿಗೆ ಕಾಲೇಜುಗಳು ಆರಂಭವಾದರೂ ಅಧ್ಯಾಪಕರು ಮೌಲ್ಯಮಾಪನಕ್ಕೆ ತೆರಳುವುದರಿಂದ ಪಾಠಗಳು ಆರಂಭಗೊಳ್ಳುವುದಿಲ್ಲ. ವರ್ಷದ ನಡುವೆ ಹೆಚ್ಚೂ ಕಡಿಮೆ ನಾಲ್ಕು ತಿಂಗಳು ಕಲಿಯುವ, -ಕಲಿಸುವ ಕೆಲಸಕ್ಕೆ ಬಿಡುವು ಸಿಗುವಂತಾಗಿದೆ. ವಿದ್ಯಾರ್ಥಿಗಳು ಕೂಡಾ ಇದನ್ನು ಅರ್ಥ ಮಾಡಿಕೊಂಡಿರುವುದರಿಂದ ಎಲ್ಲಾ ಕಡೆ ‘ಚಲ್ತಾಹೈ’ ಮನೋಭಾವ ಕಂಡುಬರುತ್ತಿದೆ! ಮೊದಲ ಸೆಮಿಸ್ಟರ್ ಮುಗಿಸಿ ಎರಡನೇ ಸೆಮಿಸ್ಟರ್ ಆರಂಭವಾಗುವಾಗಲೇ ಆ ಸೆಮಿಸ್ಟರಿನ ಅರ್ಧಭಾಗ ಕಳೆದು ಹೋಗಿರುತ್ತದೆ! ಮತ್ತೆ ಪಾಠ ಶುರುವಾಗುವಾಗಲೇ ಮುಗಿಸುವ ಗಡಿಬಿಡಿ! ಇದು ಕಾಲೇಜುಗಳಲ್ಲಿ ಕಂಡುಬರುತ್ತಿರುವ ಸ್ಥಿತಿ!

ನಾಲ್ಕು ತಿಂಗಳಿಗೆ ಪಾಠ ಮಾಡಿ ಪರೀಕ್ಷೆ ಮಾಡಿಸುವ ಜವಾಬ್ದಾರಿ ಹೊತ್ತಿರುವ ವಿಶ್ವವಿದ್ಯಾಲಯಗಳಲ್ಲಿ ಸಂಕಟಕ್ಕೆ ಈಡಾಗಿರುವುದು ಚಿತ್ರಕಲೆ, ಸಂಗೀತ ಮುಂತಾದ ಲಲಿತ ಕಲೆಗಳ ವಿಭಾಗಗಳು. ‘ನಾವು ಒಂದು ರಾಗವನ್ನು ಆರಂಭಿಸುತ್ತೇವೆ. ಅರ್ಧ ಕಲಿಸುವಾಗ ಸೆಮಿಸ್ಟರ್ ಮುಗಿದುಹೋಗುತ್ತದೆ. ಮುಂದಿನ ಅರ್ಧ ಮುಂದಿನ ಸೆಮಿಸ್ಟರಿನಲ್ಲಿ ಕಲಿಸುತ್ತೇವೆಂದರೆ ಆಗುವುದಿಲ್ಲ. ನಡುವೆ ಮೂರು ತಿಂಗಳು ಬಿಡುವಿರುತ್ತದೆ. ಆ ಹೊತ್ತಿಗೆ ವಿದ್ಯಾರ್ಥಿಗಳು ಕಲಿತಿದ್ದನ್ನು ಮರೆತಿರುತ್ತಾರೆ. ಹೀಗಾಗಿ ಹೊಸದಾಗಿ ರಾಗವನ್ನು ಆರಂಭಿಸಬೇಕಾಗುತ್ತದೆ.

ಒಂದು ರಾಗ ಮುಗಿಯುವಷ್ಟರಲ್ಲಿ ಮತ್ತೆ ಸೆಮಿಸ್ಟರ್ ಪರೀಕ್ಷೆಗಳ ಹಾವಳಿ’ ಎಂಬುದಾಗಿ ಮೈಸೂರು ವಿಶ್ವವಿದ್ಯಾಲಯದ ಸಂಗೀತ ಅಧ್ಯಯನ ಮಂಡಳಿಯ ಅಧ್ಯಕ್ಷರಾದ ಪ್ರೊ. ಸಿ.ಎ. ಶ್ರೀಧರ್ ಸಮಸ್ಯೆಯನ್ನು ತೋಡಿಕೊಳ್ಳುತ್ತಾರೆ. ಈ ಸಮಸ್ಯೆ ದೃಶ್ಯಕಲಾ ಶಿಕ್ಷಣದಲ್ಲೂ ಇದೆ. ಅದಕ್ಕೇ ಮೈಸೂರು ವಿಶ್ವವಿದ್ಯಾಲಯದ ಅಧೀನಕ್ಕೊಳಪಟ್ಟ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ) ತನ್ನ ಪಠ್ಯಕ್ರಮವನ್ನು ಸೆಮಿಸ್ಟರ್ ಪದ್ಧತಿಗೆ ಅಳವಡಿಸಲು ಒಪ್ಪಿಲ್ಲ. ವಾರ್ಷಿಕ ಪರೀಕ್ಷೆಗಳ ಪದ್ಧತಿಯಲ್ಲೇ ಮುಂದುವರಿದಿದೆ.

ಆದರೆ ಸೆಮಿಸ್ಟರ್ ಪದ್ಧತಿಗೆ ಬರಬೇಕೆಂದು ಅವರ ಮೇಲೂ ಒತ್ತಡವಿದೆ. ‘ಅವರನ್ನೂ ಸೆಮಿಸ್ಟರಿಗೆ ತನ್ನಿ ಅಥವಾ ನಮ್ಮನ್ನೂ ಬಿಟ್ಟುಬಿಡಿ’ ಎಂಬ ಒತ್ತಾಯ ಇತರ ನಿಕಾಯಗಳಿಂದ ಬರುತ್ತಿದೆ. ಇದೇ ಕಾರಣಕ್ಕೆ ತಮಗೆ ನಾನ್ಸೆಮಿಸ್ಟರ್ ಪದ್ಧತಿಗೆ ಹೋಗಲು ಅವಕಾಶ ಮಾಡಿಕೊಡಿ ಎಂಬ ಸಂಗೀತ ಅಧ್ಯಯನ ಮಂಡಳಿಯ ಶಿಫಾರಸು ತಿರಸ್ಕಾರಗೊಂಡಿದೆ. ಅಂತೂ ೧೬ ವಾರಗಳಲ್ಲಿ ಪಾಠ ಮುಗಿಸಬೇಕಾದ ಗಡಿಬಿಡಿಯಲ್ಲಿ ಸೆಮಿಸ್ಟರ್ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಲು ಆಗುತ್ತಿಲ್ಲವೆಂಬ ಭಾವನೆ ಕಾಲೇಜು ಮೇಷ್ಟ್ರುಗಳನ್ನೂ ಆಂತರಂಗಿಕವಾಗಿ ಕಾಡುತ್ತಿರುವುದು ಸ್ಪಷ್ಟ.

ಇಲ್ಲಿರುವ ಸಮಸ್ಯೆಯೆಂದರೆ, ಕಡಿಮೆಯಾಗಿರುವ ಪಾಠದ ದಿನಗಳು ಹಾಗೂ ಗಂಟೆಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದಿರುವುದು. ಅಮೆರಿಕದಲ್ಲಾದರೆ ಒಂದು ವ್ಯವಸ್ಥೆಯನ್ನು ಒಪ್ಪಿಕೊಂಡ ಅಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಶಿಸ್ತು ಇರುತ್ತದೆ. ಬೆಳಿಗ್ಗೆ ೮ರಿಂದ ರಾತ್ರಿ ಎಷ್ಟು ಹೊತ್ತಾದರೂ ಸರಿ ಕಲಿಯುತ್ತೇನೆ, ಕಲಿಸುತ್ತೇನೆ ಎಂಬ ಬದ್ಧತೆ ಇರುತ್ತದೆ. ಹೀಗಾಗಿ ನೆಪಗಳಿಗೆ ಅವಕಾಶ ಕೊಡದಂತೆ ಸಮಯದ ಪರಿವೆಯಿಲ್ಲದಂತೆ ತರಗತಿಗಳು ನಡೆಯುತ್ತವೆ. ಆದರೆ ನಮ್ಮಲ್ಲಿ ಯಾವುದೋ ಕಾರಣಕ್ಕಾಗಿ ತರಗತಿ ತಪ್ಪಿಹೋದರೆ ಅದನ್ನು ಇನ್ನೊಂದು ದಿನ ತೆಗೆದುಕೊಳ್ಳುವ ಬದ್ಧತೆ ಅಧ್ಯಾಪಕರಿಗಾಗಲೀ ಈ ತರಗತಿ ನಡೆಯಲೇಬೇಕೆಂಬ ತುರ್ತು ವಿದ್ಯಾರ್ಥಿಗಳಿಗಾಗಲೀ ಇಲ್ಲ.

ಮೇಷ್ಟ್ರು ಯಾವುದಾದರೂ ಪಾಠ ಮಾಡದಿದ್ದರೆ ಅದಕ್ಕಾಗಿ ಹಕ್ಕೊತ್ತಾಯ ಮಾಡಿದ ಒಂದೇ ಒಂದು ಉದಾಹರಣೆ ಪದವಿ ಕಾಲೇಜುಗಳಿಂದ ಬಂದಿಲ್ಲ. ‘ಕೆಲವರು ಪಾಠ ಮಾಡದಿದ್ದರೇ ಒಳ್ಳೆಯದು’ ಎಂಬ ನಿರ್ಣಯಕ್ಕೆ ವಿದ್ಯಾರ್ಥಿಗಳು ಬಂದಿದ್ದಾರೋ ಎಂಬ ಅನುಮಾನ! ಹಬ್ಬಹರಿದಿನಗಳು, ದೊಡ್ಡವರ ಸಾವಿಗಾಗಿ ರಜೆಗಳು, ವಿದ್ಯಾರ್ಥಿಗಳ ತರಗತಿ ಬಹಿಷ್ಕಾರಗಳು, ತರಗತಿ ತೆಗೆದುಕೊಳ್ಳಬೇಕಾದ ಅಧ್ಯಾಪಕ ಇನ್ಯಾವುದೋ ಕೆಲಸದ ಮೇಲೆ ಹೋದ ಕಾರಣ ತಪ್ಪುವ ತರಗತಿಗಳು ಮುಂತಾಗಿ... ಯಾವ್ಯಾವುದೋ ನೆಪಗಳಿಂದ, ಸೆಮಿಸ್ಟರ್ ನಡೆಯಬೇಕಾದ ೧೬ ವಾರಗಳಲ್ಲಿ ನಿಜಕ್ಕೂ ಎಷ್ಟುದಿನ ಪಾಠಗಳು ನಡೆಯುತ್ತವೆ ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿಯುತ್ತದೆ.

ಸೆಮಿಸ್ಟರ್ ಪದ್ಧತಿಯ ಮುಂದುವರಿದ ಭಾಗವಾಗಿ ಇದೀಗ ಸ್ನಾತಕೋತ್ತರ ಮಟ್ಟದಲ್ಲಿ ಜಾರಿಗೆ ಬಂದಿರುವ ಸಿಬಿಸಿಎಸ್ ಪದ್ಧತಿಯನ್ನು ಪದವಿಮಟ್ಟದಲ್ಲೂ ಅಳವಡಿಸಬೇಕೆಂಬುದು ಯುಜಿಸಿಯ ಒತ್ತಾಯ. ನಮ್ಮ ವಿಶ್ವವಿದ್ಯಾಲಯಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ಬರಬೇಕಾದರೆ ಸಿಬಿಸಿಎಸ್ ಪದ್ಧತಿಯೂ ಅನಿವಾರ್ಯ. ಹೀಗಾಗಿ ಪದವಿ ಕಾಲೇಜುಗಳಲ್ಲೂ ಸಿಬಿಸಿಎಸ್ ಪದ್ಧತಿಯನ್ನು ಜಾರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಈ ಪದ್ಧತಿಯ ವಿಶೇಷವೆಂದರೆ ವಿಜ್ಞಾನ ಓದುವ ವಿದ್ಯಾರ್ಥಿಗೆ ಕಲೆಯೋ ವಾಣಿಜ್ಯವೋ ವಿದ್ಯಾರ್ಥಿಯ ಆಯ್ಕೆಯ ಒಂದೋ ಎರಡೋ ಐಚ್ಛಿಕ ವಿಷಯಗಳನ್ನು ಅಭ್ಯಸಿಸುವ ಅವಕಾಶವಿರುತ್ತದೆ. ವಿದ್ಯಾರ್ಥಿಗಳ ಆಸಕ್ತಿಗಳನ್ನು ವಿಸ್ತರಿಸಿಕೊಳ್ಳಲು ವಿಪುಲ ಅವಕಾಶ ನೀಡುವ ಈ ಪದ್ಧತಿ ನಿರಂತರ ಮೌಲ್ಯಮಾಪನ ಪದ್ಧತಿಯಾಗಿದೆ.

ಇದರಲ್ಲಿ ಅಧ್ಯಾಪಕರು ಪರೀಕ್ಷೆಯ ಒಂದೇ ದಿನ ವಿದ್ಯಾರ್ಥಿಗಳ ಸಾಮರ್ಥ್ಯ ಅಳೆಯುವ ಪ್ರಯತ್ನ ಮಾಡುವ ಬದಲು, ವಾರ ವಾರವೂ ಕೊಡುವ ಅಸೈನ್ಮೆಂಟ್, ಟೆಸ್ಟ್ುಗಳ ಆಧಾರದಲ್ಲಿ ಅಳೆಯುತ್ತಾರೆ. ಒಂದು ಟೆಸ್ಟಿನಲ್ಲಿ ಚೆನ್ನಾಗಿ ಮಾಡಿಲ್ಲವೆಂಬ ಭಾವನೆಯಿರುವ ವಿದ್ಯಾರ್ಥಿಗೆ ಮತ್ತೊಮ್ಮೆ ಆಂತರಿಕ ಪರೀಕ್ಷೆ ಬರೆಯುವ ಅವಕಾಶ, ಅತ್ಯುತ್ತಮ ಫಲಿತಾಂಶವನ್ನಷ್ಟೇ ಅಂತಿಮವಾಗಿ ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಮುಂತಾದ ಕ್ರಾಂತಿಕಾರಕ ಅಂಶಗಳನ್ನು ಸಿಬಿಸಿಎಸ್ ಪದ್ಧತಿ ಒಳಗೊಂಡಿದೆ. ಈಗ ರಾಜ್ಯದ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿಭಾಗಗಳಲ್ಲಿ ಅಳವಡಿಸಲಾಗಿರುವ ಈ ಪದ್ಧತಿಯನ್ನು ಪದವಿ ಕಾಲೇಜುಗಳಿಗೂ ವಿಸ್ತರಿಸುವ ಚಿಂತನೆ ನಡೆದಿದೆ.

ಇದರ ಪರಿಣಾಮವೆಂದರೆ ಮೇಷ್ಟ್ರುಗಳಿಗೆ ಪಾಠ ಮಾಡಲು ಪುರಸತ್ತು ಕಡಿಮೆಯಾಗಿ ಟೆಸ್ಟು ಮಾಡುವ ದಿನಗಳೇ ಹೆಚ್ಚಾಗುತ್ತವೆ. ವಿದ್ಯಾರ್ಥಿಗಳಿಗೂ ಅಷ್ಟೇ. ಎಲ್ಲ ವಿಷಯಗಳಲ್ಲೂ ನಿರಂತರ ಮೌಲ್ಯಮಾಪನವಿರುವುದರಿಂದ ಪ್ರತಿನಿತ್ಯ ಅವರಿಗೆ ಟೆಸ್ಟುಗಳೋ ಅಸೈನ್ಮೆಂಟುಗಳೋ ಇದ್ದೇ ಇರುತ್ತವೆ. ಬೇರೆ ಯಾವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿಕ್ಕೂ ಸಮಯವಿರುವುದಿಲ್ಲ. ಹೀಗಾಗಿ ಚರ್ಚಾ ಕೂಟವೋ ಪ್ರಬಂಧ ಸ್ಪರ್ಧೆಯೋ ಮುಂತಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಯಾರಿಗೆ ಬೇಕು? ಆಟೋಟಗಳಿಗಂತೂ ಜನರನ್ನು ಹುಡುಕಬೇಕು!

ಜಾಗತೀಕರಣದ ಯುಗದಲ್ಲಿ ಎಲ್ಲವೂ ಮುಂದುವರಿದ ರಾಷ್ಟ್ರಗಳ ಮಾದರಿಯಲ್ಲೇ ನಡೆಯುತ್ತಿರುವ ಈ ಸಂದರ್ಭದಲ್ಲಿ ಈಗಾಗಲೇ ಎಲ್ಲ ವಿ.ವಿ.ಗಳಲ್ಲಿ ಜಾರಿಗೆ ಬಂದಿರುವ ಸೆಮಿಸ್ಟರ್ ಪದ್ಧತಿಯಿಂದ ಹಿಂದೆ ಸರಿಯುವುದು ಸಾಧ್ಯವಿಲ್ಲ. ಇಂದಲ್ಲ ನಾಳೆ ಪದವಿ ಮಟ್ಟದಲ್ಲೂ ಸಿಬಿಸಿಎಸ್ ಪದ್ಧತಿ ಬಂದೇ ಬರುತ್ತದೆ. ಆದರೆ ಪ್ರತಿದಿನವೂ ಅಸೈನ್ಮೆಂಟು ಹಾಗೂ ಪ್ರತಿವಾರ ನಡೆಯಬೇಕಾದ ಟೆಸ್ಟುಗಳ ಸಂತೆಯಲ್ಲಿ ಕಳೆದುಹೋಗುವ ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳುವುದು ಹಾಗೂ ಪಾಠದ ದಿನಗಳೇ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವುದು ಹೇಗೆಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ಇಲ್ಲವಾದರೆ ವಿ.ವಿ.ಗಳ ಗುಣಮಟ್ಟ ಹೆಚ್ಚಿಸಲೆಂದೇ ತಂದ ಕ್ರಮಗಳು ವಿ.ವಿ.ಗಳನ್ನು ಕೇವಲ ಪರೀಕ್ಷೆಗಳನ್ನು ನಡೆಸುವ ಕಾರ್ಖಾನೆಗಳನ್ನಾಗಿ ಮಾಡಿ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಮತ್ತಷ್ಟು ಕೆಳಕ್ಕೆ ತಳ್ಳಲು ಕಾರಣವಾಗಬಹುದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.