ನವಿ ಮುಂಬೈ : ಕೊನೆಯ ಎರಡು ಓವರುಗಳಲ್ಲಿ ನಾಟಕೀಯ ತಿರುವುಗಳನ್ನು ಕಂಡ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ, ಬಾಂಗ್ಲಾದೇಶ ತಂಡದಿಂದ ಗೆಲುವನ್ನು ಕಸಿದುಕೊಂಡಿತು. ಸೋಮವಾರ ನಡೆದ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯವನ್ನು ಶ್ರೀಲಂಕಾ ಏಳು ರನ್ಗಳಿಂದ ಜಯಿಸಿತು. ಇದು ಜಂಟಿ ಆತಿಥೇಯರಿಗೆ ಮೊದಲ ಜಯ.

ಈ ಗೆಲುವಿನೊಡನೆ, ಲಂಕಾ ಸೆಮಿಫೈನಲ್ನ ಕ್ಷೀಣ ಆಸೆ ಉಳಿಸಿಕೊಂಡರೆ, ಬಾಂಗ್ಲಾದೇಶ ಹೊರಬಿತ್ತು. 203 ರನ್ಗಳ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ಒಂದು ಹಂತದಲ್ಲಿ 4 ವಿಕೆಟ್ಗೆ 191 ರನ್ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. 12 ಎಸೆತಗಳಲ್ಲಿ 12 ರನ್ ಗಳಿಸುವ ಸುಲಭ ಗುರಿ ಎದುರಿತ್ತು. ಆದರೆ ಒಂದು ರನ್ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡು ಕೈಲಿದ್ದ ಪಂದ್ಯ ಕಳೆದುಕೊಂಡರು. 49ನೇ ಓವರಿನಲ್ಲಿ ಸುಗಂಧಿಕಾ ಕೇವಲ ಮೂರು ರನ್ ಕೊಟ್ಟು ಒಂದು ವಿಕೆಟ್ ಪಡೆದರು.

ಬ್ಯಾಟಿಂಗ್ನಲ್ಲಿ 46 ರನ್ ಗಳಿಸಿದ್ದ ನಾಯಕಿ ಚಾಮರಿ ಅಟಪಟ್ಟು ಕೊನೆಯ ಓವರಿನಲ್ಲಿ ಕೇವಲ ಒಂದು ರನ್ನಿತ್ತು 3 ವಿಕೆಟ್ ಪಡೆದರು. ಒಬ್ಬರು ರನ್ಔಟ್ ಆದರು. ಬಾಂಗ್ಲಾದೇಶ ತಂಡದ ನಾಯಕಿ ನಿಗರ್ ಸುಲ್ತಾನಾ ಹೋರಾಟದ 77 (98) ಮತ್ತು ಶಮೀನ್ ಅಖ್ತರ್ (ಅಜೇಯ 64) ಅವರ ಆಟ ಫಲ ನೀಡಲಿಲ್ಲ.

ತಂಡ 3 ವಿಕೆಟ್ಗೆ 44 ರನ್ ಗಳಿಸಿದ್ದಾಗ ಶಮೀಮ್ ಮತ್ತು ನಿಗರ್ ಅವರು ನಾಲ್ಕನೇ ವಿಕೆಟ್ಗೆ 82 ರನ್ ಜೊತೆಯಾಟವಾಡಿದ್ದರು. ಮೊತ್ತ 126 ರನ್ ಆಗಿದ್ದಾಗ, ಗಾಯಾಳಾಗಿದ್ದ ಶಮೀಮ್ ಕೊನೆಯ ಓವರಿನಲ್ಲಿ ಮರಳಿದರೂ ಅವರಿಗೆ ಒಂದು ಎಸೆತವನ್ನಷ್ಟೇ ಆಡುವ ಅವಕಾಶ ದೊರೆಯಿತು.

ಇದಕ್ಕೆ ಮೊದಲು, ಲೆಗ್ ಸ್ಪಿನ್ನರ್ ಶೋರ್ನಾ ಅಖ್ತರ್ (10–4–27–3) ಅವರ ಸ್ಫೂರ್ತಿಯುತ ಬೌಲಿಂಗ್ ಪ್ರದರ್ಶನದಿಂದ ಬಾಂಗ್ಲಾದೇಶ ತಂಡವು, ಶ್ರೀಲಂಕಾ ತಂಡವನ್ನು 202 ರನ್ಗಳಿಗೆ ಕಟ್ಟಿಹಾಕಿತ್ತು. ಹಸಿನಿ ಪೆರೇರಾ ಜೀವನಶ್ರೇಷ್ಠ 85 ರನ್ ಹೊಡೆದರು.

ಮೂರನೇ ಕ್ರಮಾಂಕದ ಆಟಗಾರ್ತಿ ಹಸಿನಿ ಅವರಿಗೆ ಇದು ಚೊಚ್ಚಲ ಅರ್ಧ ಶತಕ. 99 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸರ್, 13 ಬೌಂಡರಿಗಳನ್ನು ಬಾರಿಸಿದರು. ಎರಡು ಉಪಯುಕ್ತ ಜೊತೆಯಾಟಗಳಲ್ಲಿ ಭಾಗಿಯಾಗಿ ಶ್ರಿಲಂಕಾ ತಂಡದ ಕುಸಿತ ತಪ್ಪಿಸಿದರು. ವಿಷ್ಮಿ ಗುಣರತ್ನೆ ಇನಿಂಗ್ಸ್ನ ಮೊದಲ ಎಸೆತದಲ್ಲೇ ನಿರ್ಗಮಿಸಿದ್ದರು. ನಾಯಕಿ ಚಮರಿ ಅಟಪಟ್ಟು ಜೊತೆಗೂಡಿದ ಹಸಿನಿ ಎರಡನೇ ವಿಕೆಟ್ಗೆ 71 ರನ್ ಸೇರಿಸಿದರು. ಅಟಪಟ್ಟು (46, 43ಎ, 4x6, 6x2) ಅವರು ಈ ಪಂದ್ಯದಲ್ಲಿ ಏಕದಿನ ಮಾದರಿಯಲ್ಲಿ 4000 ರನ್ ಪೂರೈಸಿದ ಲಂಕಾದ ಮೊದಲ ಆಟಗಾರ್ತಿ ಎನಿಸಿದರು.

ಹಸಿನಿ ನಂತರ ನೀಲಾಕ್ಷಿಕಾ ಸಿಲ್ವ ಜೊತೆ 74 ರನ್ ಸೇರಿಸಿದರು. ಆದರೆ ಲಂಕಾ ಉತ್ತಮ ಮೊತ್ತದತ್ತ ಸಾಗುತ್ತಿರುವಂತೆ ಕಂಡಾಗ ಶೋರ್ನಾ ಪೆಟ್ಟು ನೀಡಿದರು. ಒಂದು ಹಂತದಲ್ಲಿ 32 ಓವರುಗಳ ನಂತರ 4 ವಿಕೆಟ್ಗೆ 174 ರನ್ ಗಳಿಸಿದ್ದ ಲಂಕಾ 48.4 ಓವರುಗಳಲ್ಲಿ 202 ರನ್ಗಳಿಗೆ ಆಲೌಟಾಯಿತು.

ತಮ್ಮ ನಾಲ್ಕನೇ ಓವರಿನಲ್ಲಿ ನೀಲಾಕ್ಷಿ ಅವರ ವಿಕೆಟ್ ಪಡೆದ ಶೋರ್ನಾ ನಂತರದ ಎರಡು ಓವರುಗಳಲ್ಲಿ ಕ್ರಮವಾಗಿ ಅನುಷ್ಕಾ ಸಂಜೀವನಿ ಮತ್ತು ಹಸಿನಿ ಅವರ ಪ್ರಮುಖ ವಿಕೆಟ್ಗಳನ್ನು ಪಡೆದಿದ್ದರಿಂದ ಬಾಂಗ್ಲಾದೇಶ ಹಿಡಿತ ಸಾಧಿಸಿತು. ರಿವರ್ಸ್ ಸ್ವೀಪ್ ಯತ್ನದಲ್ಲಿ ಹಸಿನಿ ಎಲ್ಬಿಡಬ್ಲ್ಯು ಆದರು.

ಸ್ಕೋರುಗಳು:

ಶ್ರೀಲಂಕಾ: 48.4 ಓವರುಗಳಲ್ಲಿ 202 (ಚಾಮರಿ ಅಟಪಟ್ಟು 46, ಹಸಿನಿ ಪೆರೇರಾ 85, ನೀಲಾಕ್ಷಿಕಾ ಸಿಲ್ವ 37; ರಬೆಯಾ ಖಾನ್ 39ಕ್ಕೆ2, ಶೋರ್ನಾ ಅಖ್ತರ್ 27ಕ್ಕೆ3); ಬಾಂಗ್ಲಾದೇಶ: 50 ಓವರುಗಳಲ್ಲಿ 9 ವಿಕೆಟ್ಗೆ 195 (ಶಮೀಮ್ ಅಖ್ತರ್ ಔಟಾಗದೇ 64, ನಿಗರ್ ಸುಲ್ತಾನಾ 77; ಸುಗಂಧಿಕಾ 38ಕ್ಕೆ2, ಚಾಮರಿ ಅಟಪಟ್ಟು 42ಕ್ಕೆ4).

ಪಂದ್ಯದ ಆಟಗಾರ್ತಿ: ಹಸಿನಿ ಪೆರೇರಾ
.ICC Women's WC: ಬಾಂಗ್ಲಾ ವಿರುದ್ಧ ಶ್ರೀಲಂಕಾ 202ಕ್ಕೆ ಆಲೌಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.