ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 12 ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಬಿಗ್ಬಾಸ್ ಮನೆಯಿಂದ ಮೂವರು ಸ್ಪರ್ಧಿಗಳು ಹೊರ ಹೋಗಿದ್ದಾರೆ. ಆ ಬೆನ್ನಲ್ಲೆ ಭಾನುವಾರದ ಸಂಚಿಕೆಯಲ್ಲಿ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಆಗಮಿಸಿದ್ದಾರೆ.
.BBK12 | ಬಿಗ್ಬಾಸ್ಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಪ್ರವೇಶ: ಯಾರಿವರು?.ಯಾರ ಅಪ್ಪನ ಆಸ್ತಿಯಲ್ಲ: ಅಶ್ವಿನಿ ಗೌಡ, ಜಾಹ್ನವಿ ವಿರುದ್ಧ ಸುದೀಪ್ ಕೆಂಡಾಮಂಡಲ.
ಬೆಳ್ಳಂಬೆಳಗ್ಗೆ ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮ್ಯೂಟಂಟ್ ರಘು ಎಂಟ್ರಿ ಕೊಟ್ಟಿದ್ದಾರೆ. ರಘು ಅವರ ಸಿಂಹ ಘರ್ಜನೆಗೆ ಮನೆ ಮಂದಿ ದಂಗಾಗಿದ್ದಾರೆ. ಅಲ್ಲದೇ ರಘು ಬಂದ ಕೆಲವೇ ಗಂಟೆಗಳಲ್ಲಿ ಅಶ್ವಿನಿ ಜೊತೆಗೆ ದೊಡ್ಡ ಗಲಾಟೆ ನಡೆದಿದೆ.

ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬೆಳ್ಳಂಬೆಳಗ್ಗೆ ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮ್ಯೂಟಂಟ್ ರಘು ಮೈಕ್ ಜೊತೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಮಲಗಿಕೊಂಡಿದ್ದ ಎಲ್ಲರನ್ನು ಮೈಕ್ ಮೂಲಕವೇ ‘ಇದು ರೆಸಾರ್ಟ್ ಅಲ್ಲ. ಬಿಗ್ಬಾಸ್ ಮನೆ ಎದ್ದೇಳಿ’ ಎಂದು ಬಡಿದೆಬ್ಬಿಸಿದ್ದಾರೆ.

ಇನ್ನು, ಮನೆಗೆ ಬಂದ ರಘು ಅವರು, ಗಾರ್ಡನ್ ಏರಿಯಾದಲ್ಲಿ ಸ್ಪರ್ಧಿಗಳ ಮೇಲೆ ನೀರು ಸುರಿದು ಕಾರಣ ಕೊಟ್ಟಿದ್ದಾರೆ. ಇದೇ ವೇಳೆ ಅಶ್ವಿನಿ ಗೌಡ ಅವರ ಮೇಲೆಯೂ ನೀರು ಹಾಕುತ್ತಾರೆ. ಆಗ ಅಶ್ವಿನಿ ಗೌಡ ಮೇಲೆ ನೀರು ಸುರಿದ ಬಳಿಕ ಏಕವಚನದಲ್ಲಿಯೇ ಮಾತನಾಡಿಸುತ್ತಾರೆ. ಇದರಿಂದ ಕೋಪಗೊಂಡ ಅಶ್ವಿನಿ ಗೌಡ ‘ನೀವು ಒಬ್ಬ ಸ್ಪರ್ಧಿ, ಹಾಗೇ ಇರಿ’ ಎಂದು ರೇಗಿದ್ದಾರೆ. ಆಗ ಜಾಹ್ನವಿ, ‘ನಮ್ಮ ಹತ್ತಿರ ಬಂದು ಏಕವಚನದಲ್ಲಿ ಮಾತನಾಡಿದರೆ ಇಲ್ಲಿಂದ ಹೋಗಬಹುದು’ ಎಂದಿದ್ದಾರೆ. ಹೀಗೆ ಅಶ್ವಿನಿ ಗೌಡ ಹಾಗೂ ರಘು ಮಧ್ಯೆ ಜೋರು ಗಲಾಟೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.