ಕಲೆ, ಸಂಗೀತ, ನೃತ್ಯ ವಿವಿಧ ಕೋರ್ಸ್‌ಗಳು

ಮಂಗಳವಾರ, ಜೂನ್ 25, 2019
22 °C

ಕಲೆ, ಸಂಗೀತ, ನೃತ್ಯ ವಿವಿಧ ಕೋರ್ಸ್‌ಗಳು

Published:
Updated:

 

 

 

ಬೆಂಗಳೂರಿನ ಕನಕಪುರ  ರಸ್ತೆಯಲ್ಲಿರುವ ಶಂಕರ ಪ್ರತಿಷ್ಠಾನವು ನೃತ್ಯ, ಕಲೆ, ಸಂಗೀತವನ್ನು ಜನಪ್ರಿಯಗೊಳಿಸಲು ಹಲವು ಕಾರ್ಯಕ್ರಮಗಳನ್ನು  ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಷ್ಠಾನವು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೊ) ಸಹಯೋಗದಲ್ಲಿ 2011ರ ಜನವರಿಯಿಂದ ವಿವಿಧ ಸರ್ಟಿಫಿಕೆಟ್ ಕೋರ್ಸ್ ಆರಂಭಿಸುತ್ತಿದೆ.

ಲಲಿತ ಕಲೆ, ಭರತನಾಟ್ಯ, ಕೂಚಿಪುಡಿ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭಾರತೀಯ ಚಿತ್ರಕಲೆ ಹಾಗೂ ಶಿಲ್ಪಕಲೆಯಲ್ಲಿ ಒಂದು ವರ್ಷದ ಕೋರ್ಸ್ ನಡೆಸಲಾಗುತ್ತದೆ ಎಂದು ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ರಶ್ಮಿ  ಹೆಗ್ಡೆ ಗೋಪಿ ತಿಳಿಸಿದ್ದಾರೆ.

‘ನಮ್ಮಲ್ಲಿ ನೃತ್ಯ, ಸಂಗೀತ ಅಥವಾ ಇತರ ಕಲಾ ಪ್ರಕಾರಗಳನ್ನು ಕಲಿತ ಅನೇಕ ಮಹಿಳೆಯರು ಇದ್ದಾರೆ. ಆದರೆ ನಂತರದಲ್ಲಿ ಕಾರಣಾಂತರಗಳಿಂದ ಅವುಗಳನ್ನು ಕೈಬಿಟ್ಟಿದ್ದಾರೆ. ಇಂಥಹ ಮಹಿಳೆಯರೂ ಕೂಡ ಮತ್ತೆ ತಮ್ಮ ಕಲಿಕೆಯನ್ನು ಮುಂದುವರೆಸಲು ಶಂಕರ ಪ್ರತಿಷ್ಠಾನವು ಒಂದು ವೇದಿಕೆಯಾಗಿದೆ’ಎನ್ನುವುದು ರಶ್ಮಿ ಅವರ ಅಭಿಮತ.

ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾದ, ಕನಿಷ್ಠ 17 ವರ್ಷ ವಯಸ್ಸಿನ ಅಭ್ಯರ್ಥಿಗಳು ಈ ಕೋರ್ಸ್‌ಗೆ ಸೇರಬಹುದಾಗಿದೆ. ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುತ್ತದೆ.

ಪ್ರತಿಷ್ಠಾನದಲ್ಲಿ  ಗ್ರಂಥಾಲಯ ಕೂಡ ಇದೆ. ಕಲೆಯ ವಿವಿಧ ಪ್ರಕಾರಗಳ ಕುರಿತ ಪುಸ್ತಕಗಳು ಇಲ್ಲಿವೆ. ಹೆಚ್ಚಿನ ವಿವರಗಳಿಗೆ, ಶಂಕರ ಪ್ರತಿಷ್ಠಾನ, ಕನಕಪುರ ರಸ್ತೆ, ದೊಡ್ಡಲಸಂದ್ರ, ಬೆಂಗಳೂರು, ದೂರವಾಣಿ ಸಂಖ್ಯೆ: 32902689/28435133, ಇ-ಮೇಲ್ ವಿಳಾಸ: yoursforthearts@hotmail.com      

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry