ಗುರುವಾರ , ಮೇ 13, 2021
31 °C
ಬಸವರಾಜೇಂದ್ರ ಪ್ರೌಢಶಾಲೆ ಆವರಣದಲ್ಲಿ ವೇದಿಕೆ ನಿರ್ಮಾಣ

ಕಲ್ಪತರು ನಾಡಲ್ಲಿ ಕನ್ನಡ ಡಿಂಡಿಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಪತರು ನಾಡಲ್ಲಿ ಕನ್ನಡ ಡಿಂಡಿಮ

ಅರಸೀಕೆರೆ: ಪಟ್ಟಣದಲ್ಲಿ ಜೂನ್ 24 ರಂದು ನಡೆಯಲಿರುವ ತಾಲ್ಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಅಕ್ಷರ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಬಾರಿ ಸಮ್ಮೇಳದಲ್ಲಿ ಸುಮಾರು ಎರಡು ಸಾವಿರ ಮಂದಿ ಭಾಗವಹಿಸಿದ್ದರು. ಈ ಬಾರಿ ಕನ್ನಡ ಪರ ಘಟನೆಗಳ ಸದಸ್ಯರು, ಆಟೊ ಚಾಲಕರು, ಸಾಹಿತ್ಯಾಭಿಮಾನಿಗಳು, ಕನ್ನಡಾಭಿಮಾನಿಗಳು ಸೇರಿದಂತೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯಲಾಗುವುದು. ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ 600 ಸದಸ್ಯರು  ಇದ್ದು, ಸಮ್ಮೇಳನದ ಯಶಸ್ಸಿಗೆ ಶ್ರಮಿಸಲಿದ್ದಾರೆ. ಪಟ್ಟಣದ ಬಿ.ಎಚ್‌ರಸ್ತೆಯ ಎರಡು ಬದಿಗಳಲ್ಲಿ ಬ್ಯಾನರ್‌ಗಳು, ಬಂಟಿಂಗ್ಸ್ ಹಾಗೂ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಅಕ್ಷರ ಜಾತ್ರೆಗೆ ಬರುವವರಿಗೆ ಹಾಗೂ ಸಮ್ಮೇಳನಾಧ್ಯಕ್ಷರಿಗೆ ಸ್ವಾಗತ ಕೋರುವುದಕ್ಕಾಗಿ ತಾಲ್ಲೂಕಿನ ಎಲ್ಲ ಸರ್ಕಾರಿ ಇಲಾಖೆಗಳವರು ಒಂದೊಂದು ಫ್ಲೆಕ್ಸ್ ಅಳವಡಿಸಿದ್ದಾರೆ. ಸಂಘ-ಸಂಸ್ಥೆಗಳವರು, ವರ್ತಕರು, ಶಿಕ್ಷಕರು, ಪತ್ರಕರ್ತರ ಸಂಘ ಹೀಗೆ ಎಲ್ಲ ವರ್ಗದವರು ಬ್ಯಾನರ್‌ಗಳನ್ನು ಕಟ್ಟಿಸಿ ಪಟ್ಟಣವನ್ನು ಶೃಂಗರಿಸಿದ್ದಾರೆ.ಮೆರವಣಿಗೆ: ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಹಲವು ಸ್ಥಳೀಯ ಜಾನಪದ ಕಲಾತಂಡಗಳನ್ನು ಆಹ್ವಾನಿಸಲಾಗಿದೆ. ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭ ಕಳಶ ಹೊತ್ತು ಸಮ್ಮೇಳನಾಧ್ಯಕ್ಷ ಡಿ.ಎಸ್. ರಾಮಸ್ವಾಮಿ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಿಂದ  ಬಸವರಾಜೇಂದ್ರ ಪ್ರೌಢಶಾಲಾ ಅವರಣದಲ್ಲಿರುವ ಹೊಯ್ಸಳ ಮಹಾದ್ವಾರದ ಮೂಲಕ ಉಮಾದೇವಿ ವೇದಿಕೆಗೆ ಕರೆ ತರುತ್ತಾರೆ.

ಸುಮಾರು 25ಕ್ಕೂ ಹೆಚ್ಚು ಕಲಾ ತಂಡಗಳೊಂದಿಗೆ ಮೆರವಣಿಗೆಗೆ ಮೆರಗು ನೀಡುವರು. ಸ್ಥಬ್ಧಚಿತ್ರ ಹಾಗೂ ಸಂಜೆ ಕಾರ್ಯಕ್ರಮಗಳ ಹೊಣೆಯನ್ನು ಶಿಕ್ಷಣ ಇಲಾಖೆ ವಹಿಸಿಕೊಂಡಿದೆ. ಬಿ.ಎಚ್ ರಸ್ತೆಯ ಇಕ್ಕೆಲಗಳನ್ನು ತಳಿರು-ತೋರಣಗಳಿಂದ ಅಲಂಕರಿಸುವ ಜವಾಬ್ದಾರಿಯನ್ನು  ಪುರಸಭೆ ವಹಿಸಿಕೊಂಡಿದೆ. 

ಭೊಜನ ವ್ಯವಸ್ಥೆ: ಸಮ್ಮೇಳನದಲ್ಲಿ ಭೋಜನ ವ್ಯವಸ್ಥೆಗೆ 5 ಕೌಂಟರ್ ತೆರೆಯಲಾಗುವುದು. ಸಮ್ಮೇಳನ ಸ್ಥಳದ ಸನಿಹದಲ್ಲೇ ಇರುವ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಭೋ)ಜನ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.