ಶುಕ್ರವಾರ, ಜನವರಿ 24, 2020
16 °C

ಕಲ್ಮಾಡಿ ಜಾಮೀನು: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಕಾಮನ್‌ವೆಲ್ತ್ ಕ್ರೀಡಾಕೂಟದ ಹಗರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಸಂಸದ ಸುರೇಶ್ ಕಲ್ಮಾಡಿ ಮತ್ತು ಅವರ ಸಹಾಯಕ ವಿ. ಕೆ. ವರ್ಮಾ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ದೆಹಲಿ ಹೈಕೋರ್ಟ್ ಕಾಯ್ದಿರಿಸಿದೆ.ಕಾಮನ್‌ವೆಲ್ತ್ ಕ್ರೀಡಾಕೂಟದ ಸಿದ್ಧತೆಯ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿದ ಆಪಾದನೆಗಾಗಿ ಕಲ್ಮಾಡಿ ಅವರನ್ನು ಕಳೆದ ವರ್ಷದ ಏಪ್ರಿಲ್ 26ರಂದು ಬಂಧಿಸಲಾಗಿದೆ.ಕಲ್ಮಾಡಿ  ಮತ್ತು ವರ್ಮಾ ಅವರಿಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳನ್ನು ಬೆದರಿಸುವ ಸಾಧ್ಯತೆಗಳು ಇರುವುದರಿಂದ ಜಾಮೀನು ನೀಡಬಾರದು ಎಂದು ಸಿಬಿಐ ವಕೀಲರು ತಿಳಿಸಿದ್ದರು.

ಪ್ರತಿಕ್ರಿಯಿಸಿ (+)