ಮಂಗಳವಾರ, ಜೂನ್ 15, 2021
24 °C

ಕಲ್ಲಿದ್ದಲು ಪೂರೈಕೆಗೆ ಕೇಂದ್ರ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಎರಡನೇ ಘಟಕಕ್ಕೆ ಕಲ್ಲಿದ್ದಲು ಪೂರೈಕೆಗೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಶುಕ್ರವಾರದಿಂದಲೇ ಈ ಘಟಕ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.ವಿದ್ಯುತ್ ಕಡಿತ ಕುರಿತಂತೆ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಶೋಭಾ, `ಬಳ್ಳಾರಿ ಘಟಕಕ್ಕೆ ಕಲ್ಲಿದ್ದಲು ಒದಗಿಸಲು ಒಪ್ಪಿಗೆ ಸೂಚಿಸಿ ಕೇಂದ್ರ ಸರ್ಕಾರ ಈಗಾಗಲೇ ಪತ್ರದ ಮೂಲಕ ತಿಳಿಸಿದೆ. ಹತ್ತು ದಿನಗಳಲ್ಲಿ ಕಲ್ಲಿದ್ದಲು ಲಭ್ಯವಾಗಬಹುದು. 500 ಮೆಗಾ ವಾಟ್ ವಿದ್ಯುತ್ ಈ ಘಟಕದಿಂದ ಲಭ್ಯವಾಗಲಿದೆ. ಉಡುಪಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದಲೂ 600 ಮೆಗಾ ವಾಟ್ ಸದ್ಯದಲ್ಲೇ ಲಭ್ಯವಾಗಲಿದೆ. ಇದರಿಂದ ವಿದ್ಯುತ್ ಕೊರತೆ ತಕ್ಕಮಟ್ಟಿಗೆ ನೀಗಬಹುದು~ ಎಂದರು. ಬೇಸಿಗೆಯ ಪರಿಣಾಮವಾಗಿ ನಿತ್ಯವೂ 200 ದಶಲಕ್ಷ ಯೂನಿಟ್ ವಿದ್ಯುತ್‌ಗೆ ಬೇಡಿಕೆ ಇದ್ದು, 180 ದಶಲಕ್ಷ ಯೂನಿಟ್ ಪೂರೈಸಲಾಗುತ್ತಿದೆ.ಬೆಂಗಳೂರು ನಗರದಲ್ಲೇ ನಿತ್ಯದ ಬೇಡಿಕೆ 350 ಮೆಗಾ ವಾಟ್‌ಗೆ ತಲುಪಿದೆ. ಎಲ್ಲೂ ಅಧಿಕೃತವಾಗಿ ಲೋಡ್‌ಶೆಡ್ಡಿಂಗ್ ಜಾರಿಗೊಳಿಸಿಲ್ಲ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.