ಸೋಮವಾರ, ಜನವರಿ 20, 2020
22 °C

ಕಲ್ಲೂರು ದಾರಿ ಸರಿಯಾಗುವುದು ಯಾವಾಗ?

ಪ್ರಸನ್ನಕುಮಾರ ಹಿರೇಮಠ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ನಮ್ಮ ಊರಾಗ ಹತ್ನೆತ್ತಾ ಮಟಾ ಸಾಲಿ ಇಲ್ಲಲ್ರೀ, ಸಣ್ಣ ಮಕ್ಕಳು ಮುಂದಿನ ಊರಿನ ಸಾಲಿಗೆ ಹೋದ ನೆಂದರ ರಸ್ತೆ, ಬಸ್ ಸರಿಯಾಗಿಲ್ಲ. ನಮ್ಮ ಮಕ್ಕಳ ಸಂಕಟ ಯಾರೂ ನೋಡವಲ್ರಿ~ ಎಂದು ಧಾರವಾಡ ತಾಲ್ಲೂಕು ಕಲ್ಲೂರ ಗ್ರಾಮದ ಸಿದ್ದಪ್ಪ ನೊಂದು ನುಡಿಯುತ್ತಾರೆ.ಸುಮಾರು ಐದು ಸಾವಿರ ಜನಸಂಖ್ಯೆ ಇರುವ ಕಲ್ಲೂರ ಧಾರವಾಡ ಗ್ರಾಮೀಣ ಮತಕ್ಷೇತ್ರದ ಅಂಚಿನಲ್ಲಿರುವ ಗ್ರಾಮ. ಇಲ್ಲಿ ಮೊದಲು ಐದನೇ ತರಗತಿವರೆಗೆ, ಆಮೇಲೆ ಏಳು, ಈಗ ಎಂಟನೇ ತರ ಗತಿವರೆಗೆ ಶಾಲೆ ಶುರುವಾಗಿದೆ. ಮುಂದೆ ಓದಬೇಕೆಂದರೆ ಮಕ್ಕಳು ಪಕ್ಕದ ದೊಡ್ಡ ಊರಾದ ಉಪ್ಪಿನಬೆಟಗೇರಿಗೆ ಹೋಗ ಬೇಕು. ಇದು ಧಾರವಾಡ ಗ್ರಾಮೀಣ ಶಾಸಕಿ ಸೀಮಾ ಮಸೂತಿಯವರ ಊರು ಎಂಬುದನ್ನು ಬೇರೆ ಹೇಳಬೇಕಿಲ್ಲ.ತಡಕೋಡ-ಉಪ್ಪಿನ ಬೆಟಗೇರಿ ಮಾರ್ಗದಲ್ಲಿ ಬರುವ ಕಲ್ಲೂರಿನಿಂದ ಐದಾರು ಕಿ.ಮೀ. ದೂರದಲ್ಲಿರುವ ಉಪ್ಪಿನಬೆಟಗೇರಿಗೆ ಹೋಗುವ ರಸ್ತೆ ತುಂಬಾ ಹದೆಗೆಟ್ಟು ಹೋಗಿದೆ. ಎಲ್ಲೆಂದ ರಲ್ಲಿ ತಗ್ಗುಗಳು ಬಿದ್ದಿದ್ದು ಕಚ್ಚಾ ರಸ್ತೆ ಯಂತಾಗಿದೆ. ತಗ್ಗುಗಳಲ್ಲಿ ರಸ್ತೆಯನ್ನು ನೋಡುವ ಸ್ಥಿತಿ ಇಲ್ಲಿದೆ.ರಸ್ತೆ ವ್ಯವಸ್ಥೆ ಹೀಗಾದರೆ ಕಲ್ಲೂರ- ಉಪ್ಪಿನಬೆಟಗೇರಿ ಮಧ್ಯದಲ್ಲಿ ರಸ್ತೆ ಸೇತುವೆ ನಿರ್ಮಿಸಬೇಕಾಗಿದೆ. ಆದರೆ, ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯವರು ಸಿಮೆಂಟ್ ಪೈಪ್ ಹಾಕಿ ಮೇಲೆ `ಮಣ್ಣು~ ಎಳೆದಿದ್ದಾರೆ. ಮಣ್ಣು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಯಾವಾಗಲಾದರೂ ಅಪಘಾತ ಸಂಭವಿಸುವ ಅಥವಾ ಬಸ್ ಎಲ್ಲೆಂದ ರಲ್ಲಿ ಕೆಟ್ಟು, ಪಾಟಾ ಮುರಿದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಾರಿಗೆ ಸಂಸ್ಥೆಯವರು ಬಸ್ ಓಡಿಸಲು (ಈ ಮೊದಲು ಊರಿಗೆ ಐದಾರು ಬಾರಿ ಬಸ್ ಬರುತ್ತಿದ್ದವು) ಹಿಂದೇಟು ಹಾಕುತ್ತಿದ್ದಾರೆ.ಪರೀಕ್ಷೆ ಸಮೀಪ ಬಂದಿವೆ ಬಸ್ ಓಡಿಸಿರಿ ಎಂದು ಆಗ್ರಹಿಸಿ ರಸ್ತೆಗಿಳಿದು ಪ್ರತಿಭಟನೆ ಮಾಡಿದಾಗ ಆಗಮಿಸಿದ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಮಾಡಿದ್ದರಿಂದ ಬಸ್ ಓಡಿಸುತ್ತಿದ್ದಾರೆ ಅದು ಸ್ವಲ್ಪ ನೆಮ್ಮದಿರೀ ಎನ್ನುತ್ತಾರೆ ಗ್ರಾಮಸ್ಥರು.35 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು ಎಂದು ಶಾಸಕಿ ಸೀಮಾ ಮಸೂತಿಯವರು ಹೇಳಿದ್ದಾರೆ ಎನ್ನುವ ಗ್ರಾಮಸ್ಥರು, ಈ ರಸ್ತೆ ಎಂದು ಸುಧಾರಿಸುವುದೋ ಆ ದೇವರೆ ಬಲ್ಲ ಎಂದು ನೋವಿನಿಂದ ನುಡಿಯುತ್ತಾರೆ.ಹೈಸ್ಕೂಲ್‌ಗೆ ಉಪ್ಪಿನಬೆಟಗೇರಿಗೆ, ಸೈನ್ಸ್ ಮತ್ತು ಕಾಮರ್ಸ್ ಕಲಿಯ ಬೇಕೆಂದರೆ ನಮ್ಮೂರಿನ ಮಕ್ಕಳು ಧಾರ ವಾಡಕ್ಕೆ ಹೋಗಬೇಕು. ಆದರೆ, ಇದು ರಸ್ತೆ ಸುಧಾರಣೆಯಾದರೆ ಮಾತ್ರ ಸಾಧ್ಯ ಎನ್ನುತ್ತಾರೆ ಗ್ರಾಮದ ಮಡಿವಾಳಪ್ಪ ಬೂದಕಟ್ಟಿ ಮತ್ತು ಅಜ್ಜಪ್ಪ ದಂಡಿನ.

ಪ್ರತಿಕ್ರಿಯಿಸಿ (+)