ನವದೆಹಲಿ (ಪಿಟಿಐ): ‘ಈ ಸಲದ ವಿಶ್ವಕಪ್ ಕ್ರಿಕೆಟ್ನ ಎರಡೂ ಪಂದ್ಯಗಳಲ್ಲಿ ಭಾರತದ ಕಳಪೆ ಬೌಲಿಂಗ್ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಆದರೂ ಕಳೆದ ಎರಡು ವರ್ಷದ ಅವಧಿಯಲ್ಲಿ ಭಾರತ ಸಾಕಷ್ಟು ಪಂದ್ಯಗಳನ್ನು ಗೆಲ್ಲಲು ಇದೇ ಬೌಲರ್ಗಳು ನೆರವಾದದ್ದನ್ನು ಮರೆಯುವಂತಿಲ್ಲ’ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

ಭಾರತ ತಂಡದ ಬ್ಯಾಟಿಂಗ್ ಬಲವನ್ನು ಕೊಂಡಾಡಿರುವ ಕಪಿಲ್ ದೇವ್, ವಿಶ್ವಕಪ್ನಲ್ಲಿ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಬ್ಯಾಟ್ಸ್ಮನ್ಗಳು ತೋರಿದ ಪ್ರದರ್ಶನ ನಿಜಕ್ಕೂ ಮೆಚ್ಚುವಂತದ್ದು ಎಂದಿದ್ದಾರೆ. ಆದರೆ ಬೌಲಿಂಗ್ನಲ್ಲಿ ಕೊಂಚ ಸುಧಾರಣೆ ಕಾಣಬೇಕು. ಹಾಗೆಂದು ಬೌಲರ್ಗಳನ್ನು ಟೀಕಿಸುವುದು ಸರಿಯಲ್ಲ. ಇಂಗ್ಲೆಂಡ್ ವಿರುದ್ಧದ ಪಂದ್ಯವು ‘ಟೈ’ ಆಗುವಲ್ಲಿ ಬೌಲರ್ಗಳ ಕೊಡುಗೆಯು ಇದೆ’ ಎಂದು ಕಪಿಲ್ ಹೇಳಿದ್ದಾರೆ.

ಆರಂಭಿಕ ಪಂದ್ಯದಲ್ಲಿ ಭಾರತ 370ರ ಗಡಿ ಮುಟ್ಟಿತ್ತು. ಆದರೆ ಬಾಂಗ್ಲಾ ಕೂಡಾ ಉತ್ತಮ ಪ್ರದರ್ಶನ ತೋರಿತು. ಎರಡನೇ ಪಂದ್ಯದಲ್ಲಿ ನಾಯಕ ಆ್ಯಂಡ್ರ್ಯೋ ಸ್ಟ್ರಾಸ್ ಶತಕ ಗಳಿಸಿದ್ದರಿಂದ ಇಂಗ್ಲೆಂಡ್ ಕೂಡ ಉತ್ತಮ ಮೊತ್ತವನ್ನೇ ಗಳಿಸಿತು. ಭಾರತದ ಬೌಲಿಂಗ್ನಲ್ಲಿ ಸುಧಾರಣೆ ಕಾಣಲು ಕಠಿಣ ಅಭ್ಯಾಸ ನಡೆಸಬೇಕಿದೆ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.