ಬುಧವಾರ, ಏಪ್ರಿಲ್ 14, 2021
31 °C

ಕಳಸ: ಖೋಟಾ ನೋಟು ಹಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಪಟ್ಟಣದಲ್ಲಿ 500 ಅಥವಾ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಯಾರೇ ನೀಡಿದರೂ ಒಮ್ಮೆ ನೋಟು ನೀಡಿದವರ ಕಡೆಗೆ ಮತ್ತೊಮ್ಮೆ ನೋಟಿನ ಕಡೆಗೆ ಎಚ್ಚ ರಿಕೆಯಿಂದ ಕಣ್ಣುಹಾಯಿಸಬೇಕಾಗಿದೆ.ಪಟ್ಟಣದ ಎಲ್ಲ ಬ್ಯಾಂಕುಗಳಲ್ಲೂ ಪ್ರತಿನಿತ್ಯ 500 ಮತ್ತು 1000 ರೂಪಾಯಿಯ ಖೋಟಾ ನೋಟುಗಳು ಪತ್ತೆಯಾಗುತ್ತಿರುವುದರಿಂದ ಸ್ಥಳೀ ಯರು ಈ ನೋಟುಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ನೋಡಲು ಅಸಲಿ ನೋಟಿನಂತೆಯೇ ಇರುವ ಈ ನೋಟುಗಳು ಬ್ಯಾಂಕು ತಲುಪಿದಾ ಗಲಷ್ಟೇ ಅವು ಖೋಟಾ ಎಂದು ಬೆಳಕಿಗೆ ಬರುತ್ತಿವೆ. ಇಲ್ಲದಿದ್ದಲ್ಲಿ ಅವು ವ್ಯಾಪಾರಿ ಸಮೂಹದಲ್ಲಿ ಅಡೆತಡೆ ಇಲ್ಲದೆ ಸರಾಗವಾಗಿ ಚಲಾವಣೆ ಆಗುತ್ತಿವೆ.ಬ್ಯಾಂಕಿಗೆ ಹಣ ತುಂಬುವಾಗ ಈ ಖೋಟಾ ನೋಟುಗಳು ಪತ್ತೆಯಾದಲ್ಲಿ ಬ್ಯಾಂಕುಗಳನ್ನು ಅವುಗಳು ಚಲಾವಣೆ ಆಗದಂತೆ ತಡೆಯಲು ತಮ್ಮಲ್ಲೇ ಇಟ್ಟುಕೊಳ್ಳುತ್ತವೆ. ಅಂತಹ ಸಂದರ್ಭ ದಲ್ಲಿ ಯಾರಿಂದಲೋ ಅಕಸ್ಮಾತ್ತಾಗಿ ಖೋಟಾ ನೋಟು ಪಡೆದವರ ಮುಖ ಪೆಚ್ಚಾಗುತ್ತದೆ. ಹಣ ಕಳೆದುಕೊಂ ಡವರು ಯಾವುದೇ ಉಪಾಯ ಇಲ್ಲದೆ ಖೋಟಾ ನೋಟು ಚಲಾಯಿ ಸುವವರಿಗೆ ಹಿಡಿಶಾಪ ಹಾಕಿ ಸುಮ್ಮನಾ ಗುತ್ತಾರೆ.ಖೋಟಾ ನೋಟಿನ ಮೂಲ: ಕಾಫಿ ,ಅಡಿಕೆ, ಕಾಳುಮೆಣಸಿನ ವ್ಯಾಪಾರ ದಂತಹ ಸಂದರ್ಭದಲ್ಲಿ ಪಟ್ಟಣಕ್ಕೆ ದೊಡ್ಡ ಮೊತ್ತದ ಹಣ ಪ್ರತಿದಿನವೂ ಶಿವಮೊಗ್ಗ, ಮಂಗಳೂರು, ಚಿಕ್ಕಮ ಗಳೂರಿನಿಂದ ಬರುತ್ತದೆ. ಈ ಹಣವೆಲ್ಲಾ ನಗದಿನ ರೂಪದಲ್ಲೇ ಬರುತ್ತಿದ್ದು ಖೋಟಾ ನೋಟು ಆ ಕಟ್ಟುಗಳಲ್ಲೇ ಬರುತ್ತದೆ ಎಂದು ಸ್ಥಳೀಯರು ಊಹಿಸುತ್ತಾರೆ.ತೆರಿಗೆ ತಪ್ಪಿಸಿ ನಡೆಯುವ ಈ ವ್ಯವಹಾರದಲ್ಲಿ ಬ್ಯಾಂಕ್‌ಗಳ ಮುಖಾಂತರ ವಹಿವಾಟು ನಡೆಯು ವುದು ಕಡಿಮೆ. ಲಕ್ಷಗಟ್ಟಲೆ ಮೊತ್ತ ನಗದಿನ ರೂಪದಲ್ಲೇ ಬರುವುದರಿಂದ ಆ ಕಟ್ಟುಗಲ್ಲಿ ಬರುವ ಖೋಟಾ ನೋಟುಗಳನ್ನು ಪರೀಕ್ಷಿಸುವ ಸಮಯ ಮತ್ತು ವ್ಯವಧಾನ ವ್ಯಾಪಾರಿಗಳಲ್ಲಿ ಇರವುದಿಲ್ಲ.ಆದರೆ ಆನಂತರ ಆ ಹಣವನ್ನು ವ್ಯಾಪಾರಿಗಳು ಸ್ಥಳೀಯ ಕೃಷಿಕರಿಗೆ ಮತ್ತು ವ್ಯಾಪಾರಿಗಳಿಗೆ ಬಟವಾಡೆ ಮಾಡತಾತರೆ. ಆ ಸಂದರ್ಭದಲ್ಲಿ ಖೋಟಾ ನೋಟುಗಳು ಸಣ್ಣ ಮಟ್ಟದ ಆರ್ಥಿಕ ವ್ಯವಹಾರ ನಡೆಸುವವರ ಕೈ ಸೇರುತ್ತದೆ. ಆ ಹಣ ಬ್ಯಾಂಕಿನ ಕೌಂಟ ರ್‌ನಲ್ಲಿ ಖೋಟಾ ಎಂದು ಪತ್ತೆ ಯಾ ದಾಗ ಹಣ ಪಾವತಿ ಮಾಡಿದವರು ಕಂಗಾಲಾಗುತ್ತಾರೆ.  ತಮ್ಮದಲ್ಲದ ತಪ್ಪಿಗೆ ನಷ್ಟ ಅನುಭವಿಸುತ್ತಾರೆ.ಪೊಲೀಸರು ಖೋಟಾ ನೋಟುಗಳು ಚಲಾವಣೆಯಾಗುತ್ತಿರುವ ಜಾಲವನ್ನು ಮತ್ತು ನೋಟಿನ  ಮೂಲವನ್ನು ಬೇಧಿಸುವುದು ತೀರಾ ಅಸಾಧ್ಯದ ಮಾತಲ್ಲ. ಇಲ್ಲದಿದ್ದರೆ ಪ್ರತಿದಿನವೂ ಬ್ಯಾಂಕಿನ ಕೌಂಟರ್‌ಗಳ ಬಳಿ ಖೋಟಾ ನೋಟಿನಿಂದಾಗಿ ನಷ್ಟ ಅನುಭವಿಸು ವವರ ಸಂಖ್ಯೆಯೂ ಕಡಿವೆು ಆಗುತ್ತದೆ. ಜೊತೆಗೆ ಸ್ಥಳೀಯ ವ್ಯಾಪಾರಿಗಳು 500 ಅಥವಾ 1000 ರೂಪಾಯಿಯ ನೋಟುಗಳನ್ನು ಸ್ವೀಕರಿಸಲು ಹಿಂದೇಟು ಹಾಕುವುದೂ ತಪ್ಪುತ್ತದೆ.

       

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.