ಶುಕ್ರವಾರ, ಮೇ 14, 2021
31 °C

ಕವಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿತೆ

ನಿಮಿಷಗಳು ಸೋರಿ ವರ್ಷಗಳಾಗುತ್ವೆ ಯುಗ ಪುರುಷನಿಗು ಕಾಲಪುರುಷನಿಗು

ಸಮಯ ಎಲ್ಲಿಯೂ ನಿಲ್ಲುವುದಿಲ್ಲನಾವು ಡಾಕ್ಟರ್ ಫಾಸ್ಟಸ್‌ನಂತೆ ಕೂಗಾಡುತ್ತೇವೆ: ನಿಲ್ಲು ಗಡಿಯಾರವೇ ನಿಲ್ಲು! ಹೊಡೀಬೇಡ

ಹನ್ನೆರಡ!ಡಾಕ್ಟರ್ ಫಾಸ್ಟಸ್‌ನಂತೆಯೆ ನಿಷಿದ್ಧತೆಯ ಶೋಧನೆಗೆ ಹೊರಟವರು ನಾವು

ಅರ್ಥಾತ್ ಸಾಧ್ಯತೆಯ ಅಂಚುಗಳ ವಿದ್ಯುತ್ ಸ್ಪರ್ಶಕ್ಕೆಆದರೂ ನಾವು ಪೂರ್ಣತೆಯ ಪ್ರಾಪ್ತಿಗೆ ಯಾವ ಡೆವಿಲಿಗೂ ನಮ್ಮ ಆತ್ಮವ ಮಾರಿಕೊಂಡವರಲ್ಲಪೂರ್ಣತೆಯಲ್ಲೆ ನಮಗೆ ನಂಬಿಕೆಯಿಲ್ಲ ಅಂತೆಯೇ ಡೆವಿಲಿನಲ್ಲಾಗಲಿ ದೇವರಲ್ಲಾಗಲಿ

ಇನ್ನು ಆತ್ಮದ ಪ್ರಶ್ನೆ: ಆತ್ಮಸಾಕ್ಷಿಯೊಂದೇ ಆತ್ಮಕ್ಕೆ ಸಾಕ್ಷಿ ಅದರ ಸ್ಫುರಣವೂ

ಪರಿಶುದ್ಧವಲ್ಲ ಅದೊಂದು ಬ್ಯಾಟರಿ ಮುಗಿಯುತ್ತ ಬಂದಿರುವ ಟಾರ್ಚ್

ಕಾಣಿಸಿದಷ್ಟೇ ಮುಚ್ಚುತ್ತದೆ ಬೆಳಕು ಕತ್ತಲಿನ ಮೊಸೇಕ್ ತಡಿಕೆ to be or not to be

ಎನ್ನುತ್ತಲೇ ಆತ ಎಷ್ಟೊಂದು ಪಾಪಗಳ ಮಾಡಿಯೂ ಆಯ್ತು!ಬರೀ 20ರ ಹರೆಯದಲಿ (ಆ ಅದೇ ಹ್ಯಾಮ್ಲೆಟಿನ ವಯಸು ಅದು)

ಕೀಟ್ಸ್ ಅಂದಿದ್ದಕವಿಗೆ ಬೇಕಾದ್ದು ನೆಗೆಟಿವ್ ಕೇಪೆಬಿಲಿಟಿ ಅರ್ಥಾತ್ `ಋಣಾತ್ಮಕ ಶಕ್ತಿ~

ಸ್ವಂತವ ಬಿಡುವ ಪರಕಾಯ ಪ್ರವೇಶದ ವಿನಯಅನಿಶ್ಚಿತತೆಗಳಲ್ಲಿರೋದು, ಅದ್ಭುತಗಳಲ್ಲಿರೋದು, ಮತ್ತು ಸಂದೇಹಗಳಲ್ಲಿ

ಯಾವುದೇ ಸತ್ಯ ಅಥವಾ ತತ್ವದ ಕಡೆಗೆ ಹಾತೊರೆಯುವುದಲ್ಲ

ಶೇಕ್ಸ್‌ಪಿಯರಿಗೆ ಇತ್ತು ಕೋಲರಿಜ್‌ಗೆ ಇರಲಿಲ್ಲಡಾಕ್ಟರ್ ಫಾಸ್ಟಸ್- ಅವನ ಬಾಯಲ್ಲಿ ಮಾರ್ಲೊ ಎಷ್ಟೇ ಸುಂದರ ಸಾಲುಗಳನ್ನ

ಇರಿಸಿದ್ದರೂ, ಜಗದೇಕ ಸುಂದರಿ ಹೆಲೆನಳನೆ ತಂದರೂ- ಕವಿಯಾಗುವುದು

ಸಾಧ್ಯವಿರಲಿಲ್ಲ ಫಾಸ್ಟಸ್‌ಗೆ, ನಿಷ್ಠುರ ಜ್ಞಾನದ ಹಟ ಹಿಡಿದವ ಅವ

ಡೆವಿಲ್ ಮತ್ತು ದೇವರ ನಡುವೆ ಆಯ್ಕೆ ಅನಿವಾರ್ಯ ಅಂಥವರಿಗೆ

ನಮಗಾದರೆ ಹಾಗಲ್ಲ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.