ಬುಧವಾರ, ಜುಲೈ 15, 2020
22 °C

ಕವಿ ಚನ್ನವೀರಕಣವಿ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿ ಚನ್ನವೀರಕಣವಿ ಉದ್ಘಾಟನೆ

ಚಾಮರಾಜನಗರ: ಹನೂರು ಪಟ್ಟಣದಲ್ಲಿ ಮಾರ್ಚ್ 24 ಮತ್ತು 25 ರಂದು ಗಡಿನಾಡು ಕನ್ನಡಿಗರ ಸಂಸ್ಕೃತಿ ಉತ್ಸವವನ್ನು ಆದ್ದೂರಿಯಾಗಿ ನಡೆಸಲು ಜಿಲ್ಲಾಧಿಕಾರಿ ಕೆ.ಅಮರನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಿರ್ಮಾನಿಸಲಾಯಿತು. ಅಂದು ಮಹದೇಶ್ವರ ಕ್ರೀಡಾಂಗಣ ದಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದ ಆರ್. ಎಂ.ಸಿ. ಯಿಂದ ಮೆರವಣಿಗೆಯನ್ನು ನಡೆಸಲಾ ಗುವುದು, ಈ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಬಳಸಿಕೊಂಡು  ಕನ್ನಡ ಸಂಘ ಸಂಸ್ಥೆಗಳ ಸಹಕಾರ ಪಡೆದುಕೊಳ್ಳುವಂತೆಯೂ ತೀರ್ಮಾನಿಸಲಾಯಿತು.ಉದ್ಘಾಟನೆಗೆ ಚನ್ನವೀರಕಣವಿ, ಸಂಸದರು, ಜಿಲ್ಲಾ ಉಸ್ತವಾರಿ ಸಚಿವ ರೇಣುಕಾಚಾರ್ಯ, ಬರಗೂರು ರಾಮಚಂದ್ರಪ್ಪ ಅವರನ್ನು  ಎರಡನೇ ದಿನದ ಕಾರ್ಯಕ್ರಮಕ್ಕೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರುರವನ್ನು ಆಹ್ವಾನಿಸಿ, ಎರಡು ದಿನದ ಕಾರ್ಯಕ್ರಮಕ್ಕೆ ವಿವಿಧ ಕಮಿಟಿಗಳನ್ನು ರಚನೆ ಮಾಡಲು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಜಿ.ಎಸ್.ಜಯದೇವ್. ಕೊಳ್ಳೇ ಗಾಲ ತಹಶೀಲ್ದಾರ್ ವೆಂಕಟೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜಶೇಖರ್, ಕನ್ನಡ ಸಂಸ್ಕೃತಿಯ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಮಂಜಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ. ಎಂ.ನಾಗಮಲ್ಲಪ್ಪ, ಸೋಮಶೇಖರ್ ಬಿಸಲ್ವಾಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.