ನಾನು ಎಷ್ಟೇ ಚೆನ್ನಾಗಿ ಹಾಡಿದ್ರೂ ಅಪ್ಪಾಜಿ ಅವ್ರನ್ನು ಒಪ್ಪಿಸೋದು ಕಷ್ಟ ಆಗ್ತಿತ್ತು. ಕಳೆದ 12 ವರ್ಷಗಳಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಡ್ತಾ ಇದ್ದೀನಿ. ನಾನೇ ರಾಗ ಸಂಯೋಜನೆ ಮಾಡಿರುವ ಅನೇಕ ಹಾಡುಗಳನ್ನು, ಗಜಲ್ಗಳನ್ನೂ ಹಾಡಿದ್ದೇನೆ.

ಏನು ಹಾಡಿದ್ರೂ ಅದ್ರಲ್ಲಿ ಏನಾದ್ರೂ ತಪ್ಪು ಕಂಡುಹಿಡಿಯೋರು ನನ್ನ ಅಪ್ಪಾಜಿ. ಕಳೆದ ವಾರವಷ್ಟೇ ನಾನು ರಾಗ ಸಂಯೋಜನೆ ಮಾಡಿ ನನ್ನ ತಂಗಿ ಜತೆ ಸೇರಿ ಹಾಡಿರುವ ಕನ್ನಡ ಗಜಲ್ಗಳ ಸಿಡಿ ಕೇಳಿ ಅಪ್ಪಾಜಿ ಕಣ್ಣಂಚಲ್ಲಿ ನೀರು..! `ಇದು ತುಂಬ ಚೆನ್ನಾಗಿ ಬಂದಿದೆ. ಇದನ್ನು ನಾನು ಒಪ್ಕೊಂಡಿದ್ದೀನಿ. ಹೀಗೇ ಹಾಡೋದನ್ನು ಮುಂದುವರಿಸು..~ ಅಂತ ಆಶೀರ್ವಾದ ಮಾಡಿದ್ರು. ಆಗ ನಂಗೆ ಒಂಥರಾ ಫೀಲ್ ಆಯ್ತು. ನನ್ನ ಇಷ್ಟು ವರ್ಷದ ಶ್ರಮ ಸಾರ್ಥಕ ಆಯ್ತು ಅನ್ನಿಸ್ತು.

ಈ ಕನ್ನಡ ಗಜಲ್ ಸಿಡಿ ಹೆಸರು `ಹನಿ ಹನಿ ಎಲೆ~ ಅಂತ. ಒಟ್ಟು ಎಂಟು ಕನ್ನಡ ಹಾಡುಗಳಿವೆ ಇದರಲ್ಲಿ. ತಂಗಿ ಮಾಲಾಶ್ರೀ ಕಣವಿ ಜತೆ ಸೇರಿ ಹಾಡಿದ ಈ ಗಜಲ್ ಸಿಡಿಗೆ ಹಾಡಿ ಮುಗಿಸಿದಾಗ ಮನಸ್ಸಿಗೂ ಖುಷಿ ಆಯ್ತು. ಇದು ಕೇಳುಗರಿಗೂ ಇಷ್ಟ ಆಗಬಹುದು ಅಂ ಅಂದ್ಕೊಂಡಿದ್ದೀನಿ.

ನಾನು ಹುಟ್ಟಿದ್ದು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನಲ್ಲಿ ಆದರೂ ಬೆಳೆದದ್ದು, ಓದಿದ್ದು ಎಲ್ಲ ಗುಲ್ಬರ್ಗದಲ್ಲೇ. ಅಪ್ಪಾಜಿ ಪಂ. ಫಕೀರೇಶ ಕಣವಿ, ಗುಲ್ಬರ್ಗ ಆಕಾಶವಾಣಿಯಲ್ಲಿ ಹಿಂದೂಸ್ತಾನಿ ಗಾಯಕರು. ತಾಯಿ ಶಾಂತಾ ಕಣವಿ ಅವರು ಸಹ ಲಘು ಸಂಗೀತದಲ್ಲಿ ಆಕಾಶವಾಣಿ ಗ್ರೇಡೆಡ್ ಆರ್ಟಿಸ್ಟ್.

ನನ್ನ ಗುರುವೂ ಆಗಿರುವ ಅಪ್ಪಾಜಿಗೆ ಬೇಕಾಗಿದ್ದು ಸಂಗೀತದಲ್ಲಿ ಸಾಧನೆ, ಗಾಯನದಲ್ಲಿ ಪಕ್ವತೆ, ಪರಿಪೂರ್ಣತೆ. ಹೀಗಾಗಿ ಇದುವರೆಗೆ ಅನೇಕ ಸಂಗೀತ ಕಛೇರಿಗಳನ್ನು ನಾಡಿನಾದ್ಯಂತ ನೀಡಿದ್ದರೂ, ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದರೂ ಅಪ್ಪಾಜಿ ಕಳೆದ ವಾರ ನೀಡಿದ ಅಭಿಪ್ರಾಯದಷ್ಟು ಖುಷಿ ಯಾವುದೂ ಆಗಿರಲಿಲ್ಲ. ಅವರ ಈ ಮಾತು ನನಗೆ ಇನ್ನೂ ಸಂಗೀತದಲ್ಲಿ ಬೆಳೆಯಲು ಸ್ಪೂರ್ತಿ ನೀಡಿದೆ.

ಹಾಗೆ ನೋಡಿದರೆ ನಮ್ಮದು ಸಂಗೀತದ ಮನೆತನವೇ. ಮನೆಯಲ್ಲಿ ಎಲ್ಲರೂ ಸಂಗೀತಗಾರರೇ. ತಾಯಿ ಆಕಾಶವಾಣಿ ಕಲಾವಿದೆ. ತಂಗಿ ಮಾಲಾಶ್ರೀ ಕಣವಿ ಗಾಯಕಿ. ಸುವರ್ಣ ವಾಹಿನಿಯವರು ನಡೆಸಿದ ಸ್ಟಾರ್ ಸಿಂಗರ್ನಲ್ಲಿ ಪ್ರಥಮ ಬಹುಮಾನ, ಎಂಎಸ್ಐಎಲ್ ನಡೆಸಿದ `ನಿತ್ಯೋತ್ಸವ~ ಸುಗಮ ಸಂಗೀತದಲ್ಲೂ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವಳು.

ತಮ್ಮ ಪಂಚಾಕ್ಷರಿ ಕಣವಿ ತಬಲಾ ನುಡಿಸ್ತಾನೆ. ನಾನು ಹಾರ್ಮೋನಿಯಂ ಕೂಡ ನುಡಿಸ್ತೀನಿ. ಅಪ್ಪಾಜಿ ಸಂಗೀತ ಕಛೇರಿ ಇದ್ರೆ ನಮ್ಮ ಇಡೀ ಕುಟುಂಬ ವೇದಿಕೆ ಮೇಲಿರುತ್ತೆ.ಮರೆಯಲಿ ಹ್ಯಂಗ..!

ಕಷ್ಟಕಷ್ಟದ ರಾಗಗಳನ್ನು ಹಾಡೋದು ಅಂದ್ರೆ ನಂಗೆ ಬಹಳ ಇಷ್ಟ. ರಾಗ ಮಧುವಂತಿ, ಸರಸ್ವತಿ, ಬಿಲಾಸ್ಖಾನಿ ತೋಡಿ, ಪೂರಿಯಾ ಕಲ್ಯಾಣ್ ರಾಗಗಳನ್ನು ಬಹಳ ಇಷ್ಟಪಡ್ತೇನೆ. ಅನೇಕ ಕಛೇರಿಗಳಲ್ಲಿ ಹಾಡಿದ್ದೇನೆ ಕೂಡ. ರಾಗಗಳ ಬಗ್ಗೆ ಮಾತನಾಡುವಾಗ ಇನ್ನೊಂದು ಘಟನೆ ನೆನಪಾಗ್ತದೆ.

ಅದು 2002ನೇ ಇಸವಿ. ಗದಗದ ಪಂ. ಪುಟ್ಟರಾಜ ಗವಾಯಿ ಅವರ ವೀರೇಶ್ವರ ಪುಣ್ಯಾಶ್ರಮದಲ್ಲಿ ತಂಗಿ ಮಾಲಾಶ್ರೀ ಜತೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜುಗಲ್ಬಂದಿ ಕಾರ್ಯಕ್ರಮ. ತಂಗಿಯ ಸ್ಕೇಲ್ಗೆ ಸರಿಹೊಂದುವಂತೆ ಒಂದು ಸ್ಕೇಲ್ ಕಡಿಮೆ ಮಾಡಿಕೊಂಡು ಇಲ್ಲಿ ಹಾಡಿದೆ. ಅದು ಸಖತ್ ಕ್ಲಿಕ್ ಆಯ್ತು. ಮನಸ್ಸಿಗೂ ಖುಷಿ ಆಯ್ತು. ಈ `ಅಣ್ಣ-ತಂಗಿ~ ಜುಗಲ್ಬಂದಿ ಸಂಗೀತ ಪರಂಪರೆಯಲ್ಲಿಯೇ ಅಪರೂಪದ್ದು ಎನ್ನಬಹುದು.

ವೀರೇಶ್ವರ ಪುಣ್ಯಾಶ್ರಮದಲ್ಲೇ ಇನ್ನೊಂದು ಕಛೇರಿ. ಅದರಲ್ಲಿ ನಾನು ಶಾಸ್ತ್ರೀಯ ಗಾಯನ ನಡೆಸಿಕೊಟ್ಟೆ. ತಂಗಿ ಅಮ್ಮ ಇಬ್ಬರೂ ತಂಬೂರಿ ನುಡಿಸಿದರೆ, ತಮ್ಮ ತಬಲಾ ಸಾಥಿ ನೀಡಿದ. ಮನೆಯ ಎಲ್ಲ ಸದಸ್ಯರು ಅಷ್ಟು ದೊಡ್ಡ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ್ದನ್ನು ಮರೆಯಲಿ ಹ್ಯಂಗ..!

ಕುರುಕ್ಷೇತ್ರ ವಿಶ್ವವಿದ್ಯಾನಿಲಯದಲ್ಲಿ 2006ರಲ್ಲಿ ಹಿಂದೂಸ್ತಾನಿ ಗಜಲ್ ರಾಷ್ಟ್ರಮಟ್ಟದ ಸ್ಪರ್ಧೆ ನಡೆದಿತ್ತು. ಅದರಲ್ಲಿ ದ್ವಿತೀಯ ಬಹುಮಾನ, ಕೊಲ್ಹಾಪುರ ವಿವಿಯಲ್ಲಿ ಇದೇ ತರದ ಸ್ಪರ್ಧೆ ನಡೆದಾಗ ಮೊದಲ ಬಹುಮಾನವೇ ಬಂತು. ಈ ಎರಡೂ ಸ್ಪರ್ಧೆಗಳು ಬಹಳ ಟಫ್ ಇತ್ತು. ಒಂದೇ ಹಾಡನ್ನು 10-15 ಬಾರಿ ರಿಯಾಜ್ ಮಾಡಿಕೊಂಡಿದ್ದೆ. ಬಹುಮಾನ ಬಂದೇ ಬರುತ್ತೆ ಅಂದ್ಕೊಂಡಿದ್ದೆ. ನನ್ನ ಶ್ರಮಕ್ಕೆ ಯಶ ಸಿಕ್ಕಿದಾಗ ಖುಷಿನೂ ಆಯ್ತು.

ನಾನು ಎಳೆಯ ವಯಸ್ಸಿನಿಂದಲೇ ಹಾಡಲು ಆರಂಭಿಸಿದವನಲ್ಲ. ಮನೆಯಲ್ಲಿ ಸದಾ ಸಂಗೀತದ ವಾತಾವರಣವೇ ಇದ್ದರೂ ಏಳನೇ ತರಗತಿಯ ನಂತರ ಸಂಗೀತದ ಬಗ್ಗೆ ಆಸಕ್ತಿ ವಹಿಸಿದೆ. ಸೀರಿಯಸ್ ಆಗಿ ಸಂಗೀತದಲ್ಲಿ ತೊಡಗಿಸಿಕೊಂಡದ್ದು ಎಸ್ಸೆಸ್ಸೆಲ್ಸಿ ನಂತರವೇ.

ಆದರೆ ನಂತರ ಶಾಸ್ತ್ರೀಯ ಸಂಗೀತವನ್ನು, ಹಾರ್ಮೋನಿಯಂ ನುಡಿಸುವುದನ್ನು ನಿರಂತರವಾಗಿ ಮುಂದುವರೆಸಿದೆ. ಸತತ ರಿಯಾಜ್ ಮಾಡಿದೆ. ಪದವಿಯಲ್ಲಿ ಸಂಗೀತವನ್ನೇ ಐಚ್ಚಿಕ ವಿಷಯವಾಗಿ ತೆಗೆದುಕೊಂಡೆ. ಗುಲ್ಬರ್ಗದ ನೂತನ ವಿದ್ಯಾಲಯದಲ್ಲಿ ಎಂಎ ಮ್ಯೂಸಿಕ್ ಮುಗಿಸಿದೆ. ಸಂಗೀತದಲ್ಲೇ ಪಿಎಚ್ಡಿ ಮಾಡುವ ಯೋಜನೆಯೂ ಇದೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಮೂರೂ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದೆ. ಆಕಾಶವಾಣಿಯಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಬಿ ಗ್ರೇಡ್ ಮತ್ತು ಲಘು ಸಂಗೀತದಲ್ಲಿ ಬಿ ಹೈ ಗ್ರೇಡ್ ಕಲಾವಿದನಾಗಿ ರೂಪುಗೊಂಡೆ.

ಇದಕ್ಕೆಲ್ಲ ಕಾರಣ ನನ್ನ ಅಪ್ಪಾಜಿ ಅಮ್ಮನ ಪ್ರೋತ್ಸಾಹ. ಹಿಂದೂಸ್ತಾನಿ ಗಾಯನವಲ್ಲದೆ ವಚನ ಸಂಗೀತ, ಲಘು ಸಂಗೀತ, ಗಜಲ್ಸ್ ಹಾಡುವುದನ್ನೂ ನಾನು ತುಂಬ ಇಷ್ಟಪಡುತ್ತೇನೆ. ಹಾಡುವಾಗ ಭಿನ್ನ ಭಿನ್ನ ಪ್ರಯೋಗಗಳನ್ನೂ ನಡೆಸ್ತೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಶ್ರಾವಣ ಮಾಸದುದ್ದಕ್ಕೂ ಮನೆಮನೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ವಚನ ಸಂಗೀತೋತ್ಸವ, ದಾಸವಾಣಿ ಕಾರ್ಯಕ್ರಮ ಆಯೋಜಿಸುತ್ತಾರೆ.

ಆಗ ಪ್ರತಿದಿನವೂ ಕಾರ್ಯಕ್ರಮ ಇರುತ್ತದೆ. ನಮ್ಮ ಇಡೀ ಕುಟುಂಬ ಒಟ್ಟಾಗಿ ಸಂಗೀತ ಕಾರ್ಯಕ್ರಮ ನೀಡ್ತೀವಿ. ಬಸವೇಶ್ವರರ ವಚನ, ಶಿವ ಶರಣರ ಹಾಡುಗಳನ್ನು ಶಾಸ್ತ್ರೀಯತೆಯ ಟಚ್ ಕೊಟ್ಟು ಜನಪದ ಶೈಲಿಯಲ್ಲೂ ಹಾಡ್ತೀವಿ. ಇದನ್ನು ಜನ ಆಸ್ವಾದಿಸುತ್ತಾರೆ.

ಶ್ರೀಶೈಲದಲ್ಲಿ 2000ನೇ ಇಸವಿಯಲ್ಲಿ ನಡೆದ ವಚನ ಸಂಗೀತೋತ್ಸವ, 2001ರಲ್ಲಿ ಆಂಧ್ರದ ಜೈರಾಬಾದ್ನಲ್ಲಿ ನಡೆದ ವಚನೋತ್ಸವ, 2002ರಲ್ಲಿ ಸೋಲಾಪುರದಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ, ಉಳವಿಯ ಚನ್ನಬಸವೇಶ್ವರ ದೇವಾಲಯದಲ್ಲಿ ನಡೆದ ವಚನ ಸಂಗೀತೋತ್ಸವ, ಬೀದರ್ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ನೀಡಿದ ಕಛೇರಿಯ ಅನುಭವ ಎಂದೂ ಹಸಿರಾಗಿಯೇ ಇರುತ್ತದೆ.

ಮೈಸೂರು ದಸರಾ ಉತ್ಸವ, ಬೆಂಗಳೂರು ಹಬ್ಬ, ಕದಂಬೋತ್ಸವ, ಕೇರಳ, ಗುರುವಾಯೂರುಗಳಲ್ಲಿ ನಡೆದ ಕಥಕ್ ಉತ್ಸವ, ಹಂಪಿ ಉತ್ಸವ, ಎಂಎಸ್ಐಎಲ್ ನಿತ್ಯೋತ್ಸವ, ಕರ್ನಾಟಕ ಸುಗಮ ಸಂಗೀತ ಪರಿಷತ್ ನಡೆಸಿದ ಗೀತೋತ್ಸವ, ಮುಂಬೈಯಲ್ಲಿ ನಡೆದ ಮುಂಬೈ ಉತ್ಸವಗಳಲ್ಲೂ ಹಾಡುವ ಅವಕಾಶ ಸಿಕ್ಕಿದೆ.

ಸುವರ್ಣ ವಾಹಿನಿಯವರು ಪ್ರಸಾರ ಮಾಡಿದ್ದ `ಸ್ಟಾರ್ ಸಿಂಗರ್~ ಕಾರ್ಯಕ್ರಮದಲ್ಲಿ ತಂಗಿ ಮಾಲಾಶ್ರೀ ಕಣವಿ ಪ್ರಥಮ ಬಹುಮಾನ ಪಡೆದಳು. ನಾನೂ ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿ ರಾಗಾಧಾರಿತ ಸಿನಿಮಾ ಗೀತೆಗಳನ್ನು ಹಾಡಬೇಕಿತ್ತು. ಪ್ರತಿ ಸಲ ರೆಕಾರ್ಡಿಂಗ್ಗೆ ಹೋಗುವಾಗಲೂ ತಂಗಿಯ ಸಲಹೆ ಪಡೀತಿದ್ದೆ. 10 ಸಲ ಹಾಡಿ ತೋರಿಸುತ್ತಿದ್ದೆ. ಅವಳಿಗೆ ಸಿನಿಮಾ ಗೀತೆಗಳಲ್ಲೂ ಆಸಕ್ತಿ ಇದೆ. ಇದೂ ಒಂಥರ ಥ್ರಿಲ್ಲಿಂಗ್ ಎಕ್ಸ್ಪೀರಿಯೆನ್ಸ್..!

ಸದ್ಯ ಬೆಂಗಳೂರಿನಲ್ಲಿ ನಾದಶ್ರೀ ಸಂಗೀತ ಮಹಾವಿದ್ಯಾಲಯದಲ್ಲಿ 25 ಸಂಗೀತ ವಿದ್ಯಾರ್ಥಿಗಳಿಗೆ ಕಲಿಸ್ತಾ ಇದ್ದೇನೆ. ಇಷ್ಟೂ ವಿದ್ಯಾರ್ಥಿಗಳು ಸೇರಿ ಹಾಡುವ ರಾಗ `ಸರಸ್ವತಿ~ ಯಲ್ಲಿ `ಸ್ವರ ವಂದನ~ ಎಂಬ ವಿಶೇಷ ಕಾರ್ಯಕ್ರಮವನ್ನೂ ಹಾಕಿಕೊಂಡಿದ್ದೀನಿ.
ಸಂಗೀತ ಸಮುದ್ರ ಇದ್ದ ಹಾಗೆ. ಎಷ್ಟು ಕಲಿತರೂ, ಎಷ್ಟು ಸಾಧನೆ ಮಾಡಿದರೂ ಸಾಲದು. ನಿರಂತರ ಅಭ್ಯಾಸ, ಹೊಸ ಹೊಸ ರಾಗಗಳನ್ನು ಕೇಳುವುದರಿಂದ ನಾವು ಬಹಳಷ್ಟು ಕಲಿಯುವುದಿದೆ. ಹಿರಿಯ ವಿದ್ವಾಂಸರ ಸಂಗೀತ ಸಾಧನೆ ಕೂಡ ನಮ್ಮಂತಹ ಕಲಾವಿದರಿಗೆ ದಾರಿದೀಪವಾಗಿಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.