ಭಾನುವಾರ, ಜೂನ್ 20, 2021
28 °C

ಕಾಂಗ್ರೆಸ್‌ನಲ್ಲಿ ಗುಲಾಮಗಿರಿ ಜೀವಂತ: ಮಹಿಮ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಕಾಂಗ್ರೆಸ್‌ನಲ್ಲಿ ಗುಲಾಮ­­­ಗಿರಿ ಸಂಸ್ಕೃತಿ ಇನ್ನೂ ಜೀವಂತ­­ವಾಗಿದ್ದು, ಎಲ್ಲದಕ್ಕೂ ವರಿ­ಷ್ಠರ ಮನೆಯ ಬಾಗಿಲು ಕಾಯುವ ಪರಿಸ್ಥಿತಿಯಿದೆ’ ಎಂದು ಜೆಡಿಎಸ್‌ ಅಭ್ಯರ್ಥಿ ಮಹಿಮ ಪಟೇಲ್‌ ಆಪಾದಿಸಿದರು.

ಕಾಂಗ್ರೆಸ್‌ನಿಂದ ಜೆಡಿಎಸ್‌ ಸೇರಿ ಆ ಪಕ್ಷದಿಂದ ಚುನಾವಣೆಗೆ ಬಿ–ಫಾರಂ ಪಡೆದ ಮಹಿಮ ಭಾನು­ವಾರ ನಗರದಲ್ಲಿ ನಡೆದ ಕಾರ್ಯ­ಕರ್ತರ  ಸಭೆಯಲ್ಲಿ ಮಾತನಾಡಿ­ದರು.‘ಜೆಡಿಎಸ್‌ನದ್ದು ಕುಟುಂಬ ರಾಜ­ಕಾರಣ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ನಮ್ಮದು ಕುಟುಂಬ ರಾಜ­ಕಾರಣವೇ. ಇಡೀ ರಾಜ್ಯವನ್ನು ಎಚ್‌.ಡಿ.ಕುಮಾರಸ್ವಾಮಿ ಒಟ್ಟಾಗಿ ತೆಗೆದು­ಕೊಂಡು ಹೋಗುವ ಮೂಲಕ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು. ‘ಈ ಚುನಾವಣೆಯಲ್ಲಿ ಹಣ, ಜಾತಿ ಬಲ ನಡೆಯು­ವುದಿಲ್ಲ. ಹಣ ಕೊಟ್ಟು ಮತದಾರರ ಖರೀದಿ ಮಾಡಲು ಅಸಾಧ್ಯ. ರಾಜ್ಯದಲ್ಲಿ ಜೆಡಿಎಸ್‌ ಸುಂಟರಗಾಳಿಗೆ ಕಾಂಗ್ರೆಸ್‌, ಬಿಜೆಪಿ ಹಾರಿ ಹೋಗಲಿವೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.