ಗುರುವಾರ , ಜನವರಿ 23, 2020
29 °C
ಚುನಾವಣೆಗೆ ಸ್ಪರ್ಧಿಸಲು ನಂದನ್‌ ನಿಲೇಕಣಿ ಆಸಕ್ತಿ

ಕಾಂಗ್ರೆಸ್‌ ಹೈಕಮಾಂಡ್‌ ಅಂಗಳದಲ್ಲಿ ಚೆಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಹೈಕಮಾಂಡ್‌ ಅಂಗಳದಲ್ಲಿ ಚೆಂಡು

ನವದೆಹಲಿ: ಬೆಂಗಳೂರು ದಕ್ಷಿಣ ಲೋಕ­ಸಭೆ ಕ್ಷೇತ್ರದಿಂದ ಚುನಾವ­ಣೆಗೆ ಸ್ಪರ್ಧಿಸಲು ‘ವಿಶಿಷ್ಟ ಗುರುತು ಪ್ರಾಧಿ­ಕಾರ’ (ಯುಐಡಿಎಐ)ದ ಅಧ್ಯಕ್ಷ ನಂದನ್‌ ನಿಲೇಕಣಿ ಆಸಕ್ತಿ ತೋರಿದ್ದು, ಚೆಂಡು ಈಗ ಕಾಂಗ್ರೆಸ್‌ ಹೈಕಮಾಂಡ್‌ ಅಂಗಳದಲ್ಲಿದೆ.ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ  ಡಾ. ಜಿ. ಪರಮೇಶ್ವರ್‌ ಅವರನ್ನು ಭೇಟಿ ಮಾಡಿದ್ದ ನಂದನ್‌ ನಿಲೇಕಣಿ ಬೆಂಗ­ಳೂರು ದಕ್ಷಿಣ ಲೋಕಸಭಾ ಕ್ಷೇತ್ರ­ದಿಂದ ಚುನಾವ­ಣೆಗೆ ನಿಲ್ಲುವ ಇರಾದೆ ವ್ಯಕ್ತಪಡಿ­ಸಿ­ದ್ದಾರೆ. ಈ ವಿಷಯವನ್ನು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರು ಮಂಗಳ­ವಾರ ಮಾಧ್ಯ­ಮ  ಪ್ರತಿನಿಧಿಗಳಿಗೆ ತಿಳಿಸಿದರು.ಯಾವಾಗ ಪಕ್ಷದ ಸದಸ್ಯತ್ವ ಪಡೆಯ­­ಬೇಕು ಹಾಗೂ ಯಾವ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಯಾ­ಗಬೇಕು ಎಂದು ಇನ್ನು ತೀರ್ಮಾನ­ವಾಗಿಲ್ಲ. ಪಕ್ಷದ ನಿಯಮದ ಪ್ರಕಾರ ಸದಸ್ಯತ್ವ ಪಡೆದು 3 ವರ್ಷಗಳ­-ವರೆಗೆ ಚುನಾವಣೆ ಸ್ಪರ್ಧಿಸಲು ಅವ­ಕಾಶ­ವಿಲ್ಲ. ಆದರೆ, ವಿಶೇಷ ಸಂದರ್ಭ­ಗಳಲ್ಲಿ ನಿಯಮ ಸಡಿಲಿಸಲು ಕಾಂಗ್ರೆಸ್‌ ಅಧ್ಯಕ್ಷರಿಗೆ ಅಧಿಕಾರವಿದೆ ಎಂದು ಪರಮೇಶ್ವರ್‌ ಸ್ಪಷ್ಟಪಡಿಸಿದರು.ನಂದನ್‌ ನಿಲೇಕಣಿ ಅವರಂಥ ಗಣ್ಯರು ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿ­ಕೊಳ್ಳುವುದು ಒಳ್ಳೆಯದು ಎಂದರು.ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಕುರಿತು ನನಗೆ ಮಾಹಿತಿ ಇಲ್ಲ. ಸೋಮ­ವಾರ ಇಂಥ ಯಾವುದೇ ಚರ್ಚೆಯು ನಡೆಯಲಿಲ್ಲ ಎಂದು ಪರಮೇಶ್ವರ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)