ಕೂಡ್ಲಿಗಿ: ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ವಿರುದ್ಧ 12 ಜನ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮನವಿ ಪತ್ರ ಸಲ್ಲಿಸಿರುವುದು ತಾಲ್ಲೂಕಿನ್ಲ್ಲಲಿ ತೀವ್ರ ಕುತೂಹಲ ಕೆರಳಿಸಿದೆ.

ಪ್ರಸ್ತುತ ಅಧಿಕಾರದಲ್ಲಿರುವ ಅಧ್ಯಕ್ಷೆ ಪ್ರಮೀಳಾ ಚಿದಾನಂದಗೌಡ, ಉಪಾಧ್ಯಕ್ಷ ಮಂಜುನಾಥರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ 12 ಜನ ಸದಸ್ಯರು ಮನವಿ ಸ್ಲ್ಲಲಿಸಿದ್ದಾರೆ.

ಕಾಂಗ್ರೆಸ್ನ 10, ಬಿಜೆಪಿ 1, ಪಕ್ಷೇತರ 1 ಸದಸ್ಯರು ಹೊಸಪೇಟೆ ಸಹಾಯಕ ಆಯುಕ್ತರಿಗೆ ಜೂನ್ 3ರಂದು ಮನವಿ ಸ್ಲ್ಲಲಿಸಿದ್ದು, ಅವಿಶ್ವಾಸ ಗೊತ್ತುವಳಿ ಸಭೆಯನ್ನು ಜೂನ್ 15ಕ್ಕೆ ಸಹಾಯಕ ಆಯುಕ್ತರು ನಿಗದಿ ಮಾಡಿದ್ದಾರೆ.

ತಾಲ್ಲೂಕು ಪಂಚಾಯ್ತಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಅಧಿಕಾರವನ್ನು ಮೊಟಕುಗೊಳಿಸಿ ತಾನು ಅಧಿಕಾರಕ್ಕೇರುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿದ್ದು, ಇದೀಗ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಒಟ್ಟು 23 ಸದಸ್ಯರಿರುವ ತಾ.ಪಂ.ನಲ್ಲಿ ಬಿಜೆಪಿಯ 11, ಕಾಂಗ್ರೆಸ್ನ 10, ಜೆಡಿಎಸ್1, ಪಕ್ಷೇತರ 1 ಸದಸ್ಯರಿದ್ದಾರೆ. 2ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡ 8 ತಿಂಗಳ್ಲ್ಲಲಿಯೇ ಬಿಜೆಪಿಗೆ ಕಂಟಕ ಎದುರಾಗಿದೆ.

ಆಗ ಬಿಜೆಪಿ ಪಕ್ಷದಲ್ಲಿದ್ದ ಬಿ.ನಾಗೇಂದ್ರ ಈಗ ಪಕ್ಷೇತರ ಶಾಸಕರಾಗಿದ್ದು, ತಾ.ಪಂ ಅಧಿಕಾರದ ಈಗಿನ ವಿದ್ಯಮಾನವನ್ನು ಹೇಗೆ ಪರಿಗಣಿಸುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತ್ದ್ದಿದಂತೆಯೇ ಬಿಜೆಪಿ ಅಧಿಕಾರವನ್ನು ಕಿತ್ತು ಹಾಕಿ ತಾವೇ ಅಧಿಕಾರ ಹಿಡಿಯುವತ್ತ ತೀವ್ರ ಕಸರತ್ತನ್ನು ಕಾಂಗ್ರೆಸ್ ಸದಸ್ಯರು ನಡೆಸಿದ್ದಾರೆ.

ಇದಕ್ಕಾಗಿ ಬಿಜೆಪಿಯ ಒಬ್ಬ ಸದಸ್ಯೆಯನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದು, ಪಕ್ಷೇತರ ಸದಸ್ಯರು ಸಹ ಇದಕ್ಕೆ ಬೆಂಬಲ ನೀಡಿದ್ದಾರೆ. 1ನೇ ಅವಧಿಯಲ್ಲಿ ಪಕ್ಷೇತರ ಸದಸ್ಯನ ಬೆಂಬಲ ಪಡೆದ ಬಿಜೆಪಿ ಅಧಿಕಾರ ಹಿಡಿದು ಸುಗಮವಾಗಿ ಆಡಳಿತ ನಡೆಸಿತ್ತು.

ಆದರೆ 2ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ದಿನ ಘೋಷಣೆಯಾಗುತ್ತಿದ್ದಂತೆ ಅಧಿಕಾರದ ಚುಕ್ಕಾಣಿ ಹಿಡಿಯಲು ತೆರೆಮರೆಯಲ್ಲಿ ಕಾಂಗ್ರೆಸ್ ಪ್ರಯತ್ನಿಸಿತ್ತು. ಆದರೆ ಬಿಜೆಪಿ ಪಕ್ಷಕ್ಕೆ ಅಧಿಕಾರ ತಪ್ಪುವ ಸೂಚನೆಯನ್ನು ಕೊನೆಗಳಿಗೆಯಲ್ಲಿ ಅರಿತ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಬಿ.ನಾಗೇಂದ್ರ, ಖುದ್ದಾಗಿ ಸ್ಥಳಕ್ಕೆ ಧಾವಿಸಿ, ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

2ನೇ ಅವಧಿಗೆ ಆಯ್ಕೆ ನಡೆದು ಕೇವಲ 8 ತಿಂಗಳಾಗಿವೆ. ಬಿಜೆಪಿಯಲ್ಲಿದ್ದ ಬಿ.ನಾಗೇಂದ್ರ ಈಗ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಸೊರಗಿ ಹೋಗಿದೆ. ಇದಕ್ಕಿಂತಲೂ ಮುಖ್ಯವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ.

ಹೀಗಾಗಿ ತಾ.ಪಂಯ 12 ತಿಂಗಳ ಅವಧಿಯ ಅಧಿಕಾರವನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ನವರು ತಮ್ಮ ಸಂಖ್ಯೆಯನ್ನು 12ಕ್ಕೇರಿಸಿಕೊಂಡು, ಅಧ್ಯಕ್ಷೆ, ಉಪಾಧ್ಯಕ್ಷ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಎಲ್ಲ ರೀತಿಯಲ್ಲಿ ಸಜ್ಜಾಗಿದ್ದಾರೆ.

ಅವಿಶ್ವಾಸ ಮಂಡನೆ ಸಭೆಯ ಸಂದರ್ಭದಲ್ಲಿ ಯಾವುದೇ ಗಲಭೆ, ಗೊಂದಲಗಳಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಸಿಪಿಐ ಓ.ಬಿ. ಕಲ್ಲೇಶಪ್ಪ ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ, ಸಂದರ್ಭ ಬಂದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗುವುದು ಎಂದು ತಹಶೀಲ್ದಾರ್ ಜವರೇಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.