ಬೆಂಗಳೂರು: ರಾಜಾನುಕುಂಟೆ ಬಳಿ ಇತ್ತೀಚೆಗೆ ಕಾರು ಮತ್ತು ಬಿಎಂಟಿಸಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾದಂಬರಿ ವಾಮನನ್ (37) ಎಂಬುವರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಸ್ನ ಚಾಲಕ ಸಾದಿಕ್ ಅವರನ್ನು ಅಮಾನತು ಮಾಡಿ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

‘ಘಟನೆಯ ಬಗ್ಗೆ ಸಂಸ್ಥೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಚಾಲಕ ಸಾದಿಕ್ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾದಿಕ್, ಯಲಹಂಕ ಬಳಿಯ ಪುಟ್ಟೇನಹಳ್ಳಿಯಲ್ಲಿರುವ ಬಿಎಂಟಿಸಿ 30ನೇ ಡಿಪೊದಲ್ಲಿ ಚಾಲಕರಾಗಿದ್ದರು.
ಸಾದಿಕ್ ಅವರು ಚಾಲನೆ ಮಾಡುತ್ತಿದ್ದ ಬಸ್ ಮತ್ತು ಕಾದಂಬರಿ ಅವರ ಕಾರಿನ ನಡುವೆ ಮಾ.2ರಂದು ಅಪಘಾತ ಸಂಭವಿಸಿತ್ತು.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಕಾದಂಬರಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆ ನಂತರ ಸಾದಿಕ್, ವಾಹನ ಬಿಟ್ಟು ಪರಾರಿಯಾಗಿದ್ದರು.

ಘಟನಾ ಸಂದರ್ಭದಲ್ಲಿ ಆ ಬಸ್ ದೊಡ್ಡಬಳ್ಳಾಪುರ ರಸ್ತೆಯ ಕಕ್ಕೇಹಳ್ಳಿಯಿಂದ ನಗರದ ಕೆ.ಆರ್.ಮಾರುಕಟ್ಟೆಗೆ (ಮಾರ್ಗ ಸಂಖ್ಯೆ– 285ಸಿಬಿ) ಬರುತ್ತಿತ್ತು ಎಂದು ಬಿಎಂಟಿಸಿ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.