ಮುಳಬಾಗಲು: ಕಾನೂನು ವಿದ್ಯಾಭ್ಯಾಸ ಸಹ ಇತರೆ ವಿಭಾಗಗಳಿಗಿಂತ ಮಹತ್ವದ್ದಾಗಿದೆ ಹಾಗೂ ಹೆಣ್ಣು ಮಕ್ಕಳಿಗೆ ಕಾನೂನು ಕ್ಷೇತ್ರದಲ್ಲಿ ಹಲವು ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಸ್ತುತ ಕಾನೂನು ಮಹಿಳೆಯರಿಗೆ ಮಹತ್ವವನ್ನು ನೀಡಿ ಆಕೆಗೆ ಹೆಚ್ಚಿನ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಾಲಕರು ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು ಹೇಳಿದರು.

ಪಟ್ಟಣದ ನೇತಾಜಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹೆಣ್ಣು ಮಕ್ಕಳ ಮಾರ್ಗದರ್ಶಿ ಕೇಂದ್ರದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹೆಣ್ಣು ಮಕ್ಕಳ ಮಾರ್ಗದರ್ಶಿ ಕೇಂದ್ರದ ವತಿಯಿಂದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಕಾನೂನು ಮಹಿಳೆಯರಿಗೆ ಮಹತ್ವವನ್ನು ನೀಡಿ ಆಕೆಗೆ ಹೆಚ್ಚಿನ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಾಲಕರು ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು ಎಂದು ಕಿವಿಮಾತು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎ.ವಿಜಯನ್ , ಪ್ರಧಾನ ಸಿವಿಲ್ ನ್ಯಾಯಾಧೀಶ ಡಿ.ನಾಗರಾಜೇಗೌಡ ಮಕ್ಕಳೊಡನೆ ಸಂವಾದ ನಡೆಸಿದರು. ಎಸ್ಡಿಎಂಸಿ ಅಧ್ಯಕ್ಷ ಎನ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಟಿ.ವೆಂಕಟರವಣಪ್ಪ. ಮಾಜಿ ವಕೀಲರ ಸಂಘದ ಅಧ್ಯಕ್ಷ ಕುರುಡುಮಲೆ ಮಂಜುನಾಥ್, ತಾ.ಪಂ. ಸದಸ್ಯ ಎಂ.ಎಸ್.ಶ್ರೀನಿವಾಸರೆಡ್ಡಿ, ವಕೀಲರಾದ ಎಂ.ಎಲ್.ವೆಂಕಟೇಶ್, ಕೆ.ಆರ್.ರಾಜಣ್ಣ, ತಾಲ್ಲೂಕು ನೌಕರರ ಸಂಘದ ಮಾಜಿ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟರವಣಪ್ಪ, ಮುಖ್ಯ ಶಿಕ್ಷಕ ಬಿ.ಎಂ.ಶ್ರೀರಾಮ್, ಮೆಕಾನಿಕ್ ಶ್ರೀನಿವಾಸ್, ಕೆ.ವಿಜಯಕುಮಾರ್, ಶಿಕ್ಷಕರಾದ ಎನ್.ಗೀತಾ, ರಾಧಬಾಯಿ,ಪ್ರಮೀಳಮ್ಮ, ಎಲ್.ಎಲ್.ಬಿ.ಶ್ರೀನಿವಾಸ್. ಜಯಪ್ರದ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.