ಭಾನುವಾರ, ಜನವರಿ 26, 2020
25 °C

ಕಾಫಿ ಉತ್ಪಾದನೆ ಹೆಚ್ಚಳಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶೀಯ ಕಾಫಿ ಬೇಡಿಕೆ ವಾರ್ಷಿಕ ಶೇ 6ರಷ್ಟು ಹೆಚ್ಚುತ್ತಿದ್ದು, ಬೇಡಿಕೆ ಪೂರೈಸಲು ಮತ್ತು ರಫ್ತು ಗುರಿ ತಲುಪಲು ವಾರ್ಷಿಕ ಕಾಫಿ ಉತ್ಪಾದನೆ ಶೇ 5ರಷ್ಟು ಹೆಚ್ಚಿಸುವ ಅಗತ್ಯ ಇದೆ ಎಂದು ಕಾಫಿ ಮಂಡಳಿ ಹೇಳಿದೆ.  2003-08ರ ಅವಧಿಯಲ್ಲಿ ದೇಶೀಯ ಕಾಫಿ ಬೇಡಿಕೆಯು ಶೇ 42ರಷ್ಟು ಹೆಚ್ಚಿದೆ. ರಫ್ತು ವಹಿವಾಟು ಕೂಡ ಚೇತರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಕಾಫಿ  ಉತ್ಪಾದನೆ ಶೇ 5ರಷ್ಟು ಹೆಚ್ಚಿಸುತ್ತಾ ಹೋಗಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ಜಾವೇದ್ ಅಖ್ತರ್ ಇಲ್ಲಿ ನಡೆದ    ಭಾರತೀಯ ಅಂತರರಾಷ್ಟ್ರೀಯ ಕಾಫಿ ಉತ್ಸವದಲ್ಲಿ (ಐಐಸಿಎಫ್) ಅಭಿಪ್ರಾಯಪಟ್ಟರು.ಕಾಫಿ ಉತ್ಸವದಲ್ಲಿ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ನೈಜೀರಿಯಾ, ಜರ್ಮನಿ, ಕೀನ್ಯಾ, ನಾರ್ವೆ, ಸ್ವೀಡನ್, ಬೆಲ್ಜಿಯಂನ 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)