ಭಾನುವಾರ, ಮೇ 9, 2021
26 °C

ಕಾಬೂಲ್ ಮೇಲೆ ತಾಲಿಬಾನ್ ಉಗ್ರರ ದಾಳಿ: ಭಾರತೀಯರು ಸುರಕ್ಷಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ತಾಲಿಬಾನ್ ಆತ್ಮಾಹುತಿ ಉಗ್ರರ ತಂಡ ಇಂದು ಆಫ್ಘಾನ್ ರಾಜಧಾನಿ ಕಾಬೂಲ್ ಮೇಲೆ ದಾಳಿ ನಡೆಸಿ ಭಾರೀ ಸ್ಫೋಟಕ ಹಾಗೂ ಗುಂಡಿನ ಮರೆಗಳೆದರು. ಹೋಟೆಲ್ ಒಂದರ ಮೇಲೆ ಹಿಡಿತ ಸಾಧಿಸಿದ ಉಗ್ರರು ನಂತರ ಸಂಸತ್ತು ಭವನವನ್ನು ಪ್ರವೇಶಿಸಲು ವಿಫಲ ಯತ್ನ ನಡೆಸಿದರು.  ಉಗ್ರರು ವಾಜರ್ ಅಕ್ಬರ್ ಖಾನ್ ಪ್ರದೇಶದಲ್ಲಿರುವ  ಪಂಚಾತಾರ  ಹೋಟೆಲ್ ಮೇಲೆ ದಾಳಿ ಮಾಡಿದರು ಅಲ್ಲದೆ  ಆಫ್ಘಾನ್ ಸಂಸತ್ತನ್ನು ಪ್ರವೇಶಿಸಲು ಮುಂದಾದರು ಅದರೆ ಹೆಚ್ಚು  ಭದ್ರತೆ ಇದ್ದ ಕಾರಣ ಇದು ಸಾದ್ಯವಾಗಲಿಲ್ಲ. ಉಗ್ರರು ವಶಪಡಿಸಿಕೊಂಡ ಹೋಟೆಲೆನ ಸನ್ನಿಹದಲ್ಲೆ ಆಮೆರಿಕಾದ ರಾಯಭಾರ ಕಛೇರಿ, ಐಎಸ್ಎಎಪ್ ಕೇಂದ್ರ ಕಛೇರಿ, ಟರ್ಕಿ ದೇಶದ ರಾಯಭಾರ ಕಛೇರಿ, ಆಧ್ಯಕ್ಷರ ಅರಮನೆ, ಇರಾನ್ ರಾಯಭಾರ ಕಛೇರಿ, ಹಾಗೂ ಇನ್ನೂ ಇತರೆ ರಾಜತಾಂತ್ರಿಕ  ಕಛೇರಿಗಳು ಇವೆ.ಉಗ್ರರ ವಶದಲ್ಲಿರುವ  ಪ್ರದೇಶವನ್ನು ಭಧ್ರತ ಪಡೆಗಳು ಸುತ್ತುವರೆದಿವೆ.

ಆಫ್ಘಾನ್ ನಲ್ಲಿರುವ  ಭಾರತೀಯರು  ಸುರಕ್ಷಿತವಾಗಿದ್ದರೆ ಎಂದು ಭಾರತೀಯ ರಾಯಭಾರ ಕಛೇರಿಯ ಮೂಲಗಳು ತಿಳಿಸಿವೆ.

 

ಆಫ್ಘಾನಿಸ್ಥಾನದ ಆರ್ಥೀಕ ಹಾಗೂ ಸಾಮಾಜಿಕ ಪುನರ್ ನಿರ್ಮಾಣ ಕಾರ್ಯಕ್ರಮದಲ್ಲಿ 4000 ಭಾರತೀಯರಿದ್ದು ಅವರೆಲ್ಲರು ಸುರಕ್ಷಿತವಾಗಿದ್ದರೆ ಎಂದು ಮೂಲಗಳು ತಿಳಿಸಿವೆ.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.