ಚಿತ್ತಾಪುರ: ಇಲ್ಲಿಂದ ಗುಲ್ಬರ್ಗಕ್ಕೆ ಸಂಪರ್ಕ ಜೋಡಿಸುವ ಮುಖ್ಯ ರಸ್ತೆಯ ಮಾರ್ಗದಲ್ಲಿ ಇರುವ ಕಾಗಿಣಾ ನದಿ ಹತ್ತಿರ ನಿರ್ಮಾಣಹಂತದಲ್ಲಿರು ರಸ್ತೆ ಹದಗೆಟ್ಟಿದೆ. ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ತಾಲ್ಲೂಕಿನ ಮರಗೋಳ ಕ್ರಾಸ್ದಿಂದ ತೆಂಗಳಿ ಕ್ರಾಸ್ವರೆಗಿನ 5 ಕಿ.ಮೀ ರಸ್ತೆಯನ್ನು ರೂ,5 ಕೋಟಿ ವೆಚ್ಚದಲ್ಲಿ ದ್ವಿಪಥ ಡಾಂಬರ್ ರಸ್ತೆಯಾಗಿ ನಿರ್ಮಿಸುವ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.

ಸೇತುವೆ ಹತ್ತಿರ ಮಳೆ ನೀರು ರಸ್ತೆಯ ಮೇಲೆ ಹರಿದು ಬರದಂತೆ ಮಾಡಲು ತಾಂತ್ರಿಕತೆಯನ್ನು ಸರಿಯಾಗಿ ಉಪಯೋಗಿಸಿಕೊಂಡು ರಸ್ತೆಯನ್ನು ಸರಿಯಾಗಿ ನಿರ್ಮಿಸಲು ಕಾಳಗಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮತ್ತು ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ವಿಫಲರಾಗಿದ್ದರಿಂದ ರಸ್ತೆ ಹಾಳಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.

ಕಾಗಿಣಾ ಸೇತುವೆ ಹತ್ತಿರ ಅಗತ್ಯಕ್ಕಿಂತ ಅಧಿಕವಾಗಿ ಮಣ್ಣು ಅಗೆಯಲಾಗಿದೆ. ಇಳಿಜಾರು ರಸ್ತೆಯಿಂದಾಗಿ ಮಳೆ ನೀರು ನೇರವಾಗಿ ಇದೇ ರಸ್ತೆಯ ಮೇಲೆ ಬಂದು ನಿಲ್ಲುತ್ತವೆ. ಮಳೆ ನೀರು ರಸ್ತೆಯ ಮೇಲೆ ಹರಿದು ಬರದಂತೆ ಮಾಡಲು ಸುಮಾರು 40 ಮೀಟರ್ ಉದ್ದಳತೆಯಲ್ಲಿ ರಸ್ತೆಯನ್ನು ಇನ್ನೂ ಸ್ವಲ್ಪ ಎತ್ತರವಾಗಿ ನಿರ್ಮಿಸಲು ಹೆಚ್ಚಿನ ಪ್ರಮಾಣದಲ್ಲಿ ಮುರುಮ್ ಹಾಕಬೇಕಿತ್ತು. ಕಾಮಗಾರಿ ಮುಗಿಸುವ ದಾವಂತದಲ್ಲಿ ರಸ್ತೆಯನ್ನು ತರಾತುರಿ ಮಾಡಿ ಮುಗಿಸಿದ್ದಾರೆ.

ಮುಂದೆ ಆಗಬಹುದಾದ ಸಮಸ್ಯೆಯನ್ನು ಗುತ್ತಿಗೆದಾರು ಮತ್ತು ಎಂಜಿನಿಯರರು ನಿರ್ಲಕ್ಷಿಸಿದ್ದಾರೆ ಎಂಬುದು ಜನರ ಆಕ್ರೋಶ.

ದ್ವಿಪಥ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಅದರ ಮೇಲೆ ಮತ್ತೊಮ್ಮೆ ಡಾಂಬರ್ ಲೇಯರ್ ಹಾಕುವ ಕೆಲಸ ಬಾಕಿಯಿದೆ. ಆಗಲೇ ರಸ್ತೆ ಹದಗೆಟ್ಟು ಕಳಪೆ ರಸ್ತೆಗೆ ಸಾಕ್ಷಿಯಾಗಿದೆ. ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಸೇತುವೆ ಹತ್ತಿರದ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಬೇಕು. ಮಳೆ ನೀರು ರಸ್ತೆಯ ಮೇಲೆ ಹರಿದು ಬರದಂತೆ ಮಾಡಬೇಕು.

ಇಳಿಜಾರಿನಲ್ಲಿ ಇನ್ನೂ ಸ್ವಲ್ಪ ಎತ್ತರವಾಗಿ ರಸ್ತೆ ನಿರ್ಮಿಸಬೇಕು ಎಂದು ಜನರು ಮನವಿ ಮಾಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.