`ಕಾಮರಾಜ್: ರಾಜಕಾರಣದ ಕಿಂಗ್ ಮೇಕರ್'

ಮಂಗಳವಾರ, ಜೂಲೈ 23, 2019
24 °C

`ಕಾಮರಾಜ್: ರಾಜಕಾರಣದ ಕಿಂಗ್ ಮೇಕರ್'

Published:
Updated:

ಬೆಂಗಳೂರು: `ಕಾಮರಾಜ್ ಅವರು ದೇಶದ ರಾಜಕಾರಣದ ಕಿಂಗ್ ಮೇಕರ್ ಆಗಿದ್ದರು. ಅವರ ಆಡಳಿತ ಅವಧಿಯಲ್ಲಿ ತಮಿಳುನಾಡಿನಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದರು' ಎಂದು ಸಂಸದ ಪಿ.ಸಿ.ಮೋಹನ್ ಅವರು ಅಭಿಪ್ರಾಯಪಟ್ಟರು.ಕರ್ನಾಟಕ ಹಿಂದೂ ನಾಡರ್ ಅಸೋಸಿಯೇಷನ್ ಸೋಮವಾರ ನಗರದಲ್ಲಿ ಆಯೋಜಿಸಿದ್ದ ದಿವಂಗತ ಕೆ.ಕಾಮರಾಜ್ ಅವರ 111ನೇ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಲಾಲ್‌ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾಗಾಂಧಿ ಅವರು ಪ್ರಧಾನಮಂತ್ರಿಗಳಾಗಲು ಕಾಮರಾಜ್ ಕಾರಣರಾಗಿದ್ದರು. ಮಧ್ಯಾಹ್ನದ ಬಿಸಿ ಊಟದಂತಹ ಮಹತ್ವದ ಯೋಜನೆಯನ್ನು ಅವರು ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಆರಂಭಿಸಿದ್ದರು. ಉತ್ತಮ ಆಡಳಿತದಿಂದಾಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಅವರು ಶ್ರಮಿಸಿದ್ದರು ಎಂದರು.ತಮಿಳುನಾಡಿನ ಒಂದು ವಿಶ್ವವಿದ್ಯಾಲಯ, ವಿಮಾನ ನಿಲ್ದಾಣ ಮತ್ತು ನಗರದ ಒಂದು ರಸ್ತೆಗೆ ಕಾಮರಾಜ್ ಹೆಸರಿಟ್ಟಿರುವುದು ಹಾಗೂ ಅವರಿಗೆ ಭಾರತರತ್ನ ಪ್ರಶಸ್ತಿ ಸಂದಿರುವುದು ಅವರ ಜನಪ್ರಿಯತೆಗೆ ಸಾಕ್ಷಿ ಎಂದು ನುಡಿದರು. ಅಸೋಸಿಯೇಷನ್‌ನ ಚೇರ್‌ಮನ್ ಎಂ.ಎಸ್.ಪಳನಿಚಾಮಿ, ಅಧ್ಯಕ್ಷ ಟಿ.ಬಾಲಸುಂದರಂ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry