ಶುಕ್ರವಾರ, ಮೇ 14, 2021
32 °C

ಕಾಯಕ ನಿರತ ಕೋಲೆ ಬಸವ ಕುಟುಂಬ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಬೈಪಾಸ್‌ರಸ್ತೆಯಲ್ಲಿ ಸ್ತ್ರೀ ಪುರುಷರು, ಮಕ್ಕಳಾದಿಯಾಗಿ ಅಲಂಕೃತ ಬಸವನ ಪ್ರದರ್ಶನ ನೀಡುತ್ತಿರುವುದು ಕೆಲವು ದಿನಗಳಿಂದ ಸಾಮಾನ್ಯ ದೃಶ್ಯವಾಗಿದೆ. ತಿರುಪತಿಯಿಂದ ಬಂದ ಕೋಲೆ ಬಸವನನ್ನು ಆಡಿಸುವ ಜನಾಂಗದ ಕುಟುಂಬಗಳು ಪಟ್ಟಣದಲ್ಲಿ ಬೀಡು ಬಿಟ್ಟಿವೆ.`ಎಂಥಾ ಅನುಕೂಲಸ್ಥನೇ ಆಗಿರ್ಲಿ ವರ್ಷದಲ್ಲಿ 2 ತಿಂಗಳು ಬಸವನನ್ನು ಆಡಿಸಲೇ ಬೇಕು. ನಾವು ವ್ಯವಸಾಯ ಮಾಡುವವರು. ನಮ್ಗೂ ಮನೆ-ಮಠ, ಆಸ್ತಿಪಾಸ್ತಿ ಎ್ಲ್ಲಲ ಇದೆ. ಮಕ್ಕಳೂ ಶಾಲೆಗೆ ಹೋಗುತ್ತಾರೆ. ಆದ್ರೂ ಸಂಪ್ರದಾಯದಂತೆ ವರ್ಷದಲ್ಲಿ 2 ತಿಂಗಳು ಬಸವನನ್ನು ಆಡಿಸುತ್ತಾ ಊರೂರು ತಿರುಗ್ತೀವಿ' ಎನ್ನುತ್ತಾರೆ ಸುಬ್ಬಣ್ಣ ಮತ್ತು ಗಂಗಪ್ಪ.ಕೋಲೆ ಬಸವನ ಜನಾಂಗದವರು ಪ್ರತಿವರ್ಷ ಏಪ್ರಿಲ್ ಇಲ್ಲವೇ ಮೇ ತಿಂಗಳಲ್ಲಿ ಶನಿವಾರಸಂತೆ ಹಾಗೂ ಸುತ್ತಮುತ್ತಲ ಪಟ್ಟಣಗಳಲ್ಲಿ ಬೀಡು ಬಿಟ್ಟು ಬಸವನನ್ನು ಆಡಿಸುವ ಕಾಯಕ ಮಾಡಿ ಹಿಂದಿರುಗುತ್ತಾರೆ. ಹಾಗಾಗಿ ಈ ಜನ ಇಲ್ಲಿನವರಿಗೆ ಚಿರಪರಿಚಿತರು. ಮನೆ, ಅಂಗಡಿಗಳ ಮುಂದೆ ಅಲಂಕೃತ ಬಸವನನ್ನು ಕರೆತಂದು ವಾದ್ಯ ನುಡಿಸುತ್ತಾರೆ.ರಾಮ-ಸೀತೆ ಮದುವೆ ಇತ್ಯಾದಿ ಪೌರಾಣಿಕ ಆಟಗಳನ್ನು ಆಡಿಸುತ್ತಾರೆ. ಪ್ರತಿಯಾಗಿ ಜನರು ಗೋವುಗಳ ಮೇಲಿನ ಭಕ್ತಿಯಿಂದ ಹಣ, ದವಸ, ಧಾನ್ಯ ನೀಡುತ್ತಾರೆ. ಬೇಸಿಗೆ ಕಾಲದಲ್ಲಿ 2-3 ಕುಟುಂಬದವರು ಒಟ್ಟಾಗಿ ಸೇರಿ ಕೋಲೆ ಬಸವಣ್ಣನೊಂದಿಗೆ ಕರ್ನಾಟಕದಾದ್ಯಂತ ಸಂಚರಿಸುತ್ತಾರೆ. ಊರ ಹೊರಭಾಗದಲ್ಲೋ, ಸಂತೆ ಮಾಳದಲ್ಲೋ ಟೆಂಟ್ ಹಾಕುತ್ತಾರೆ. ಒಂದೆರಡು ದಿನ ಅಲ್ಲೇ ಉಳಿದು ಪ್ರದರ್ಶನ ಮುಗಿದ ನಂತರ ಮುಂದಿನೂರಿಗೆ ಪಯಣಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.