ಮುಂಡಗೋಡ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ.ಪಾಟೀಲ ಪ್ರಯಾಣಿಸುತ್ತಿದ್ದ ಕಾರಿಗೆ ಕಾಡುಹಂದಿಯೊಂದು ಡಿಕ್ಕಿ ಹೊಡೆದಿದ್ದರಿಂದ ಕಾರಿನ ಮುಂಭಾಗ ಭಾಗಶಃ ಹಾನಿಯಾದ ಘಟನೆ ತಾಲ್ಲೂಕಿನ ಕೊಳಗಿ ಕ್ರಾಸ್ ಹತ್ತಿರ ಮಂಗಳವಾರ ನಡೆದಿದೆ. ಸಚಿವರಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ.

ಸಾಗರದತ್ತ ತೆರಳುತ್ತಿದ್ದ ಸಚಿವ ಪಾಟೀಲ ಅವರ ಕಾರು ಕೊಳಗಿ ಕ್ರಾಸ್ ಹತ್ತಿರ ಬರುತ್ತಿದ್ದಂತೆಯೇ ಕಾಡುಹಂದಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ.

ಕಾರಿನಲ್ಲಿ ಪ್ರಯಾಣಿಸುತ್ತದ್ದ ಸಚಿವರಾಗಲಿ, ಅವರ ಆಪ್ತರಿಗಾಗಲಿ ಯಾವುದೇ ರೀತಿಯ ತೊಂದರೆಯಾಗಿಲ್ಲ. ನಂತರ ಸಚಿವರು ಬೇರೆ ವಾಹನದಲ್ಲಿ ತಮ್ಮ ಪ್ರಯಾಣ ಬೆಳೆಸಿದರು. ಸಿ.ಪಿ.ಐ ವಿರೇಂದ್ರಕುಮಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಡಿ.ಪಿ. ಕರ್ಜಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.