ಕೆಂಪು ಟೀ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್, ರಿಬಾಕ್ ಶೂ, ಕೈ ಗ್ಲೌಸ್, ತುಟಿಗಳಿಗೆ ಡಾಳಾಗಿ ಬಳಿದುಕೊಂಡಿದ್ದ ಲಿಪ್ಸ್ಟಿಕ್ ಹಾಗೂ ತಲೆ ಮೇಲೊಂದು ಬಿಳಿ ಟೊಪ್ಪಿ ಹಾಕಿಕೊಂಡು ಬಿಸಿಲಿನಲ್ಲಿ ಬೆವರಿಳಿಸುತ್ತಿದ್ದ ಶ್ವೇತ ವರ್ಣದ ಸುಂದರಿಯರಿಗೆ ಅಲ್ಲಿನ ಪಡ್ಡೆಗಳು ಫಿದಾ ಆಗಿದ್ದರು. ಈ ಪರಿಯ ನಾಜೂಕು ಮಹಿಳೆಯರು ಯಾರಿಗೂ ಕಡಿಮೆ ಇಲ್ಲದಂತೆ ಬಿಸಿಲಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದುದನ್ನು ಕೊಳೆಗೇರಿಯ ಮಹಿಳೆಯರು ತಮ್ಮ ಸೀರೆ ಸೆರಗನ್ನು ಬಾಯಲ್ಲಿಟ್ಟುಕೊಂಡು ಬೆರಗುಗಣ್ಣಿನಿಂದ ನೋಡುತ್ತಿದ್ದರು.

ಈ ಮಹಿಳೆಯರ ವೇಷ ಭೂಷಣಕ್ಕಿಂತ ಕೊಳೆಗೇರಿ ವಾಸಿಗಳಲ್ಲಿ ಹೆಚ್ಚು ಆಶ್ಚರ್ಯ ಮೂಡಿಸಿದ್ದು ಅವರ ನಾಲಗೆ ಮೇಲೆ ನಲಿಯುತ್ತಿದ್ದ ಇಂಗ್ಲಿಷ್. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತ ಅತ್ತಿಂದಿತ್ತ ಲಗುಬಗೆಯಿಂದ ಓಡಾಡುತ್ತಾ, ಕೆಲವೊಮ್ಮೆ ನಗುತ್ತಾ ಕೆಲವು ಮಹಿಳೆಯರು ಸಿಮೆಂಟ್ ಸುರಿದು, ಮರಳು ಮಿಶ್ರಣ ಮಾಡಿ, ಅದಕ್ಕೆ ನೀರು ಸೇರಿಸಿ ಸಲಿಕೆಯಿಂದ ಕಲಸುವ ಕೆಲಸದಲ್ಲಿ ನಿರತರಾಗಿದ್ದರು.

ಇನ್ನು ಕೆಲವು ಮಹಿಳೆಯರು ಬೃಹತ್ ಗಾತ್ರ ಸಿಮೆಂಟ್ ಇಟ್ಟಿಗೆಯನ್ನು ಹೊತ್ತು ಸಾಗಿಸುವ ಕೆಲಸದಲ್ಲಿ ನಿರತರಾಗಿದ್ದರು. ಮತ್ತೆ ಕೆಲವರು ಇಟ್ಟಿಗೆಯನ್ನು ಸಮಾನಾಂತರವಾಗಿ ಜೋಡಿಸಿ ಅದಕ್ಕೆ ಗಾರೆ ಬಳಿಯುತ್ತಿದ್ದರು. ಇವರೆಲ್ಲ ಅಸಹಾಯಕರಿಗೆ ಮನೆ ಕಟ್ಟಿ ಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾರ್ಪೊರೇಟ್ ಮಹಿಳೆಯರು!

ಹೌದು. ಕಂಪ್ಯೂಟರ್ ಮುಂದೆ ಕುಳಿತು ಮೌಸ್, ಕೀಬೋರ್ಡ್ ಜತೆ ಏಗುತ್ತ ಸಾಫ್ಟ್ವೇರ್ಗಳ ಜೊತೆ ಸಖ್ಯ ಬೆಳೆಸಿಕೊಂಡಿದ್ದ ಕಾರ್ಪೊರೇಟ್ ಕ್ಷೇತ್ರದ ಈ ಮಹಿಳೆಯರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಭಿನ್ನವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಹೆಗಡೆ ನಗರದಲ್ಲಿ ಮೊಕ್ಕಾಂ ಹೂಡಿದ್ದರು. ಇವರಲ್ಲಿ ಅನೇಕರು ಮಹಿಳಾ ಉದ್ಯಮಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಮಹಿಳಾ ಮುಖ್ಯಸ್ಥರು.

ಮಹಿಳಾ ದಿನವನ್ನು ಭಿನ್ನವಾಗಿ ಆಚರಣೆ ಮಾಡಬೇಕು ಎಂಬ ಉದ್ದೇಶ ಒಂದೇ. ಆಸರೆ ಇಲ್ಲದ ವಿಧವೆಯರಿಗೆ ಸ್ವತಃ ಮನೆ ನಿರ್ಮಾಣ ಮಾಡಿಕೊಡಬೇಕು ಎಂಬ ಸದುದ್ದೇಶ. ‘ವಿಮೆನ್ ಬಿಲ್ಡ್’ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದ ಮನೆಗೆ ಸ್ವತಃ ಅವರೇ ಪ್ರೀತಿಯಿಂದ ಅಡಿಪಾಯ ಹಾಕುತ್ತಿದ್ದರು. ಇನ್ನು ಕೆಲವು ಮಹಿಳೆಯರು ನಿರ್ಮಾಣ ಪೂರೈಸಿದ್ದ ಮತ್ತೊಂದು ಮನೆಗೆ ಬಣ್ಣ ಬಳಿಯುತ್ತಿದ್ದರು. ಹೀಗೆ ಅಸಹಾಯಕರ ಬದುಕಿನಲ್ಲಿ ರಂಗು ಚೆಲ್ಲಿ ಅವರಲ್ಲೂ ಜೀವನೋತ್ಸಾಹ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಮನೆಯಿಲ್ಲದ ಅಸಹಾಯಕರು, ವಿಧವೆಯರು ಹಾಗೂ ಸಮಾಜದ ಕೆಳಸ್ತರದವರು ಸುಭದ್ರ ಜೀವನ ನಡೆಸಬೇಕು.ಅವರಲ್ಲಿರುವ ಅಭದ್ರತೆ ಮನೋಭಾವ ನೀಗಿಸಿ ಅವರಿಗೂ ಒಂದು ನೆಮ್ಮದಿಯ ಜೀವನ ಕಲ್ಪಿಸಿಕೊಡಬೇಕು ಎಂಬ ಸದುದ್ದೇಶದಿಂದ ಹುಟ್ಟಿಕೊಂಡಿದ್ದು ಹೆಬಿಟೆಟ್ ಫಾರ್ ಹ್ಯುಮಾನಿಟಿ ಸಂಸ್ಥೆ. ಇದೊಂದು ಜಾಗತಿಕ ಸಂಸ್ಥೆಯಾಗಿದ್ದು, 100ಕ್ಕೂ ಹೆಚ್ಚು ದೇಶಗಳಲ್ಲಿ ಇದುವೆರೆಗೆ 37,000 ಮನೆಗಳನ್ನು ನಿರ್ಮಿಸಿಕೊಟ್ಟಿದೆ.

ವಿಮೆನ್ ಬಿಲ್ಡ್, ಹೆಬಿಟೆಟ್ನ ಮಹಿಳಾ ವಿಭಾಗ ಮನೆ, ಸಮುದಾಯಗಳನ್ನು ನಿರ್ಮಿಸಿ ಬಡ ಮಹಿಳೆಯರು ಮತ್ತು ಮಕ್ಕಳಿಗೆ ಆಶ್ರಯ ಕಲ್ಪಿಸುತ್ತಿದೆ. ತಾನೇ ಸ್ವತಃ ಬಂಡವಾಳ ಹೂಡಿ ಪ್ರತಿ ಮನೆಯನ್ನು ರೂ 1,20,000 ವೆಚ್ಚದಲ್ಲಿ ನಿರ್ಮಿಸಿಕೊಡುತ್ತದೆ.ಈ ಹಣವನ್ನು ಫಲಾನುಭವಿಗಳು 3 ರಿಂದ 5 ವರ್ಷದ ಒಳಗೆ ತೀರಿಸಲು ಯಾವ ರೀತಿಯ ಉಳಿತಾಯ ಮಾರ್ಗ ಅನುಸರಿಸಬೇಕು ಎಂಬುದನ್ನು ಸಹ ಅದೇ ಸೂಚಿಸುತ್ತದೆ. ಅವರು ಮರುಪಾವತಿಸಿದ ಹಣದಲ್ಲಿ ಬೇರೆಯವರಿಗೆ ಮತ್ತೊಂದು ಮನೆ ಕಟ್ಟಿಕೊಡಲಾಗುತ್ತದೆ. ಇದು ಈ ಸಂಸ್ಥೆಯ ಕಾರ್ಯವೈಖರಿ.

2001ರಿಂದ ಅಸಹಾಯಕರಿಗೆ ನೆರವು ನೀಡುತ್ತಾ ಬರುತ್ತಿರುವ ಹೆಬಿಟೆಟ್ಗೆ ಬೇರಿಂಗ್ಗಳನ್ನು ತಯಾರಿಸವ ಬಹುರಾಷ್ಟ್ರೀಯ ಕಂಪೆನಿ ‘ಟಿಂಕೇನ್’ ಸಹಯೋಗ ನೀಡುತ್ತಿದೆ. ಈ ಮೂಲಕ ಅಸಹಾಯಕರ ಬದುಕಿನಲ್ಲಿ ಜೀವನೋತ್ಸಾಹದ ಖುಷಿ ಮೂಡಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.