ಶನಿವಾರ, ಮೇ 8, 2021
26 °C

ಕಾರ್ಪ್ ಬ್ಯಾಂಕ್‌ನಿಂದ ಎಸ್‌ಎಂಇ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಪ್ ಬ್ಯಾಂಕ್‌ನಿಂದ ಎಸ್‌ಎಂಇ ಮೇಳ

ಕಾರ್ಪೊರೇಷನ್ ಬ್ಯಾಂಕ್ ಇತ್ತೀಚೆಗೆ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗಾಗಿ ಎಸ್‌ಎಂಇ ಮೇಳವನ್ನು ಆಯೋಜಿಸಿತ್ತು. ನಗರದ ಚಾನ್ಸೆರಿ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಕರ್ನಾಟಕ ವೃತ್ತದ ಪ್ರಧಾನ ವ್ಯವಸ್ಥಾಪಕರಾದ ಎಸ್.ಎಂ. ಸ್ವಾತಿ, ಉಪ ಪ್ರಧಾನ ವ್ಯವಸ್ಥಾಪಕರುಗಳಾದ ಎನ್. ವಿಜಯಕುಮಾರ್ ಮತ್ತು ಜಿ. ನಾಗರಾಜನ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಸ್‌ಎಂಇ ಗ್ರಾಹಕರ ಜತೆ ಸಂವಾದ ನಡೆಸಿದ ಬ್ಯಾಂಕಿನ ಉನ್ನತಾಧಿಕಾರಿಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಬ್ಯಾಂಕ್ ಹತ್ತು ಹಲವು ಯೋಜನೆಗಳನ್ನು ಹೊಂದಿದೆ. ಎಸ್‌ಎಂಇ ಗ್ರಾಹಕನ ಅಗತ್ಯಕ್ಕೆ ಅನುಗುಣವಾಗಿ ಮತ್ತು ಅವರ ಉದ್ಯಮದ ವಹಿವಾಟಿಗೆ ತಕ್ಕಂತೆ ಯೋಜನೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.