ಗುರುವಾರ , ಜುಲೈ 29, 2021
21 °C

ಕಾರ್ಮಿಕ ಯೋಜನೆ: ಅನುಷ್ಠಾನ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ಪಟ್ಟಣದ ಕಾರಹಳ್ಳಿ ವೃತ್ತದಲ್ಲಿ ಪ್ರಾಂತೀಯ ರೈತ ಸಂಘ, ಡಿವೈಎಫ್‌ಐ, ಸಿಪಿಐಎಂ, ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಸಮುದಾಯ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕಾರ್ಮಿಕರ ದಿನಾಚರಣೆ ನಡೆಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಪಿಐಎಂ ತಾಲ್ಲೂಕು ಘಟಕದ ಕಾರ್ಯದರ್ಶಿ ಎಲ್.ರಾಮಚಂದ್ರ ಮಾತನಾಡಿ, ಕಾರ್ಮಿಕರ ಸ್ಥಿತಿ-ಗತಿ ಸುಧಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈವರೆಗೂ ಸಾಕಷ್ಟು ಕಾಯ್ದೆ, ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದ್ದರೂ ಯಶಸ್ವಿಯಾಗಿಲ್ಲ. ಅನುಷ್ಠಾನಕ್ಕೆ ಅಗತ್ಯವಿರುವ ಬದ್ಧತೆಯ ಕೊರತೆಯೇ ಅದಕ್ಕೆ ಕಾರಣ ಎಂದು ಆರೋಪಿಸಿದರು.ಯೋಜನೆಗಳನ್ನು ರೂಪಿಸುವಲ್ಲಿ ಉನ್ನತ ಮಟ್ಟದ ಸಮಿತಿಗಳ ಸದಸ್ಯರಲ್ಲಿರುವ ಕಾರ್ಮಿಕ ಪರ ಕಾಳಜಿಯು ಕೆಳ ಹಂತದ ಅಧಿಕಾರಿಗಳಲ್ಲಿಲ್ಲ. ಯೋಜನೆಗಳು ಫಲಾನುಭವಿಗಳನ್ನು ಯಶಸ್ವಿಯಾಗಿ ತಲುಪಿಸುವಲ್ಲಿ ಅವರು ನಿರ್ಲಕ್ಷ್ಯ ತೋರುತ್ತಾರೆ ಎಂದು ವಿಷಾದಿಸಿದರು.ಸಮುದಾಯ ಸಂಘಟನೆಗಳ ತಾಲ್ಲೂಕು ಘಟಕ ಅಧ್ಯಕ್ಷ ನಾಗರಾಜ್, ಪ್ರಾಂತೀಯ ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಕನಕರಾಜು, ಡಿವೈಎಫ್‌ಐ ತಾಲ್ಲೂಕು ಘಟಕದ ರವೀಂದ್ರ ರಾಜು, ಸಿಪಿಐಎಂ ತಾಲ್ಲೂಕು ಘಟಕದ ಅಪ್ಪಯ್ಯಣ್ಣ, ಮಾರುತಿ, ಮೋಹನ್, ಸಿ.ಆರ್.ಮೂರ್ತಿ, ರೀಂದ್ರ, ಅಕ್ಷರ ದಾಸೋಹ ತಾಲ್ಲೂಕು ಘಟಕ ಅಧ್ಯಕ್ಷೆ ಲಲಿತಮ್ಮ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.